ಧಾರವಾಡದ ಆರೋಗ್ಯನಗರ ಹಾಗೂ ಮಾಕಡವಾಲೆ ಭೇಟಿ ನೀಡಿದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು.

ಇಂದು ಪಾಲಿಕೆಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರ ಮನವಿಯ ಮೇರೆಗೆ,  ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಧಾರವಾಡದ ಆರೋಗ್ಯನಗರ ಹಾಗೂ ಮಾಕಡವಾಲೆ ಭೇಟಿ ನೀಡಿದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು. 
ಪ್ರಾಥಮಿಕವಾಗಿ ಕುಡಿಯುವ ನೀರು ಹಾಗೂ ಬೀದಿ ದೀಪಗಳ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗೂ ಅಲ್ಲಿನ ನಾಗರಿಕರು ಸ್ವಚ್ಛತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. 
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ನನ್ನೊಂದಿಗೆ ಪಾಲಿಕೆಯ ಸದಸ್ಯರಾದ ಶ್ರೀಮತಿ ಕವಿತಾ ಕಬ್ಬೆರ ರವರು, ವಲಯ ಅಧಿಕಾರಿಗಳಾದ ಶ್ರೀ ಮನೋಜ್ ಗಿರೀಶ ರವರು ಶ್ರೀ ಲಕ್ಷ್ಮಣ ಹೂಗಾರ ರವರು, ಶ್ರೀ ಸಾವಂತ ಡಂಬಳ ರವರು, ಶ್ರೀ ಶ್ರೀಧರ ಯಾದವಾಡ ರವರು, ಶ್ರೀ ನಾಗರಾಜ ರವರು ಶ್ರೀ ರೆಡ್ಡಿ ರವರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال