ವಿಠ್ಠಲದಾಸ್ ಹಾಗೂ ಮಹಾದೇವ, ಪಾಪು ಪ್ರಶಸ್ತಿ ಪ್ರದಾನ

ವಿಠ್ಠಲದಾಸ್ ಹಾಗೂ ಮಹಾದೇವ, ಪಾಪು ಪ್ರಶಸ್ತಿ ಪ್ರದಾನ
*ಜವಾಬ್ದಾರಿ ಮರೆತ ಮಾಧ್ಯಮ ಕ್ಷೇತ್ರ*
ಧಾರವಾಡ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಪತ್ರಕರ್ತರ ದಿನಾಚರಣೆ ಹಾಗೂ ವಿಚಾರ ಸಂಕಿರಣ ಸಮಾರಂಭದಲ್ಲಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪಾಪು ಸಾಧನಾ ರಾಷ್ಟ್ರೀಯ  ಶ್ರೇಷ್ಠ ಪ್ರಶಸ್ತಿ ಹಾಗೂ ಛಾಯಾಗ್ರಾಹಕ ರಾಜ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನಡೆಯಿತು. 
ರೂ.10 ಸಾವಿರ ನಗದು, ಸ್ಮರಣಿಕೆ, ಫಲಕದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೆಸರಿನ ಸಾಧನಾ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತ ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ಸ್ಥಾನಿಕ ವ್ಯವಸ್ಥಾಪಕ ವಿಠ್ಠಲದಾಸ ಕಾಮತ್, ರೂ.5 ಸಾವಿರ ನಗದು ಒಳಗೊಂಡ ಶ್ರೇಷ್ಠ ಛಾಯಾಗ್ರಾಹಕ ರಾಜ್ಯ ಪ್ರಶಸ್ತಿ ಹಿರಿಯ ಛಾಯಾಗ್ರಾಹಕ ಮಹಾದೇವ ಪಾಟೀಲ ಅವರಿಗೆ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನಿಸಿದ ವಕೀಲ ಪ್ರಕಾಶ ಉಡಕೇರಿ, ಪ್ರಕಾಶ ಉಡಕೇರಿ, ಪತ್ರಿಕೋದ್ಯಮಕ್ಕೆ ಮತ್ತೊಂದು ಹೆಸರೇ ಪಾಪು. ನಿಸ್ವಾರ್ಥ ಸೇವೆ ಮಾಡಿದ ಧೀಮಂತ ನಾಯಕ. ಪಕ್ಷ, ಸಂಘ-ಸಂಸ್ಥೆಗಳ ಜುಂಗು ಹಿಡಿದ ಕೆಲಸ ಮಾಡದೆ, ಯಾವುದೇ ಪಕ್ಷ, ಸಚಿವರು ಬಿಡಿದೆ ಟೀಕಿಸಿ, ಸನ್ಮಾರ್ಗದಲ್ಲಿ ನಡೆಸಿದ ಚೇತನ. ಈ ಧೀಮಂತ ವ್ಯಕ್ತಿ ಜೀವಂತಿರಿಸಲು ಸಾಧನಾ ಸಂಸ್ಥೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಶ್ಲಾಘಿಸಿದರು. 
ಒಂದು ದೇಶ ಅಭಿವೃದ್ಧಿ ಪ್ರಗತಿಪಥ ಹೊಂದಲು ಸಮಾಜ, ಸರ್ಕಾರದ ಅಂಕುಡೊಂಕು ತಿದ್ದುವ ಕಾರ್ಯವೇ ಪತ್ರಿಕಾರಂಗದ ಕೆಲಸ. ಇದೀಗ ಉದ್ಯಮವಾಗಿ ಪರಿವರ್ತನೆಗೊಂಡು, ಹೆಚ್ಚೆಚ್ಚು ಹಣ ಗಳಿಕೆ ಹಿಂದೆ ಬಿದ್ದಿವೆ. ಈ ದೇಶದಲ್ಲಿ ಅಲ್ಲೊಲ್ಲ-ಕಲ್ಲೊಲ್ಲ ಆದಂತ ಘಟನೆ ನಡೆದರೂ, ಕಟುವಾಗಿ ಟೀಕಿಸದೆ, ತಮ್ಮ ಜವಾಬ್ದಾರಿಯಿಂದ ವಿಮುಖವಾಗಿವೆ ಎಂದು ಬೇಸರಿಸಿದರು. ಪತ್ರಕರ್ತರು ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ಮಾಡದೆ, ತಮ್ಮ ಆತ್ಮವಂಚನೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುವುದು ದೇಶಕ್ಕೆ ಅಪಾಯಕಾರಿ ಎಂದರು.
ಪ್ರಶಸ್ತಿ ಸ್ವೀಕರಿಸಿದ ವಿಠ್ಠಲದಾಸ ಕಾಮತ್, ನನ್ನ ಜೀವಮಾನದಲ್ಲಿ ಪಾಪು ಅವರ ಹೆಸರಿನ ಪ್ರಶಸ್ತಿ ಸಾರ್ಥಕತೆ ತಂದಿದೆ. ಸೇವೆ ಗುರುತಿಸಿ, ಪ್ರಶಸ್ತಿ ನೀಡಿದ ಸಂಸ್ಥೆಗೆ ಆಭಾರಿ. ಈ ಪ್ರಶಸ್ತಿ ಜವಾಬ್ದಾರಿ ಹೆಚ್ಚುಸಿದೆ. ಇನ್ನಷ್ಟು ಕೆಲಸ ಮಾಡಲು ಪುಷ್ಠಿ ನೀಡಿದೆ.ಹಣ ಗಳಿಕೆಗೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರದೆ, ಸಮಾಜದ ಬಗ್ಗೆ ಕಳಕಳಿ ಇದ್ದವರು ಈ ಕ್ಷೇತ್ರಕ್ಕೆ ಬರುವಂತೆ ಸಲಹೆ ನೀಡಿದರು. 
ಪತ್ರಿಕೋದ್ಯಮ ವೃತ್ತಿ ಅಲ್ಲ, ಅದು ವೃತ. ಯಾವದೋ ಜನ್ಮದಲ್ಲಿ ಪುಣ್ಯ ಮಾಡಿದ ವ್ಯಕ್ತಿ ಮಾತ್ರವೇ ಪತ್ರಕರ್ತನಾಗಲು ಸಾಧ್ಯ. ಸಮಾಜದ ಜತೆ ಬೆರೆತು ವರದಿಗಾರಿಕೆ ಮಾಡುವ ಮನೋಭಾವನೆ ಪ್ರತಿಯೊಬ್ಬರು ಬೆಳೆಸಿಕೊಳ್ಳಲು ಕಿವಿಮಾತು ಹೇಳಿದರು.
ಮಲ್ಲಿಕಾರ್ಜುನ ಸಿದ್ದಣ್ಣನವರ, ಪಾಪು ಈ ಜಗತ್ತು ಕಂಡ ಶ್ರೇಷ್ಠ ಪತ್ರಕರ್ತರಲ್ಲಿ ಒಬ್ಬರು. ಅವರ ಹೆಸರಲ್ಲಿ ಪ್ರಶಸ್ತಿ ನೀಡಿ, ಅವರ ಹೆಜ್ಜೆ ಗುರುತು ಮೆಲಕು ಹಾಕಲು ಕಾರ್ಯ ಸ್ಮರಣೀಯ. ಪಾಪು ತಮ್ಮ ಶತಮಾನದ ಜೀವನದಲ್ಲಿ ಜಾತಿ ರಹಿತ, ಭ್ರಷ್ಟಾಚಾರ ರಹಿತ, ಲಿಂಗಸಮಾನತೆ ಸಮಾಜ ನಿರ್ಮಾಣದ ಕನಸು ಹೊತ್ತವರು. ಅವರ ಕನಸು ಸಾಕಾರಗೊಂಡಿದೆ ಎಂದರು. 
ನೀರು, ರೈತರಿಗೆ, ಉಸಿರು, ಬದುಕು, ರಾಜಕೀಯ ಹೋರಾಟ, ಸಾಹಿತಿ, ಪತ್ರಕರ್ತರಾಗಿ ಬರೆದರು. ಅವರಿಗೆ ನೂರು ಮುಖಗಳು. ಅವರು ಬೆಲ್ಲದ ಅಚ್ಚು. ಧ್ಯೇಯ ನಿಷ್ಠರಾಗಿ ಬರೆದ ಕಾರಣಕ್ಕೆ ಅವರಿಗೆ ರಾಜಕೀಯ, ಕವಿಸಂ, ಸಾಹಿತ್ಯ ಎಲ್ಲದರಲ್ಲೂ ಶತ್ರುಗಳಿದ್ದರು. ಅವರ ಸಲಹೆ, ಮಾರ್ಗದರ್ಶನ, ಕನ್ನಡಕ್ಕೆ ಮಾಡಿದ ಸೇವೆ ಅನನ್ಯ‌. 50 ಕವಿಸಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೂ, ಕೊನೆಗೆ ಹಾವೇರಿಗೆ ಬಿಟ್ಟುಕೊಟ್ಟಿದ್ದು ಬೇಸರಿಸಿದರು. 
ಸಂಘದ ಪದಾಧಿಕಾರಿಗಳು ಹಾಗೂ ಧಾರವಾಡಿಗರು ಪಾಪು ಮರೆಯಬಾರದು.  ಎರಡು ಸಲ ರಾಜ್ಯಸಭೆ ಸದಸ್ಯರು, ಐದು ಪತ್ರಿಕೆ ಸಂಪಾದಕರೂ, ಸ್ವಜನ ಪಕ್ಷಪಾತ, ಭ್ರಷ್ಟರಾಗದೆ ನಿಷ್ಠೆ, ಪ್ರಾಮಾಣಿಕತೆಯಿಂದ ಬಾಳಿ ಇತರರಿಗೆ ಆದರ್ಶಪ್ರಾಯ ಬದುಕಿದ ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು. 

ಹಣ, ಪ್ರಶಸ್ತಿ, ಪುರಸ್ಕಾರಗಳ ಬೆನ್ನು ಬೀಳಲಿಲ್ಲ. ನೆಲ, ನಾಡು, ಜನರ ಸೇವಕರಾಗಿ ಗಟ್ಟಿಯಾಗಿ ನಿಂತರು. ಪ್ರಸ್ತುತ ಮಾಧ್ಯಮ ಕ್ಷೇತ್ರ ಸಂಕ್ರಮಣದ ಸ್ಥಿತಿಯಲ್ಲಿದೆ. ಅಕ್ಷರ ವಂಚಿತರಿಗೆ ಮಾಧ್ಯಮಗಳು ಎಂದಿಗೂ ನೂರಕ್ಕೆ ನೂರರಷ್ಟು ನ್ಯಾಯಕ್ಕೆ ಬಡೆದಾಡಿಲಿಲ್ಲ.ಹೀಗೆ ಬಡೆದಾಡಿದ್ದರೆ, ವೇಶಾವಾಟಿಕೆ,  ಬಡತನ ಇರುತ್ತಿರಲಿಲ್ಲ.ಕೊರಮ, ಕೊರಚ, ದಲಿತರು ಮಾಧ್ಯಮದಲ್ಲಿ ಇರುತ್ತಿದ್ದರು. ಅವರಿಗೆ ಅವಕಾಶ ನೀಡಿಲ್ಲ. ಮಾಧ್ಯಮ ಸಾಮಾಜಿಕ ಜವಾಬ್ದಾರಿಯಿಂದ ವಿಮುಕವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು. 
ಇಂದಿನ ತಂತ್ರಜ್ಞಾನ ಯುಗದಲ್ಲಿ ಪೇಸ್-ಬುಕ್, ವಾಟ್ಸಪ್, ಟ್ವೀಟರ್, ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲಾಣದಿಂದ ಮುದ್ರಣ, ವಿದ್ಯುನ್ಮಾನ ಹಾಗೂ ಆಕಾಶವಾಣಿಗೆ ನಡುಕು ಶುರು ಆಗಿದೆ. ಇದು ಸಾಮಾನ್ಯರಿಗೂ ಧ್ವನಿ ನೀಡಿದೆ. ಉತ್ತಮ ಕೆಲಸಕ್ಕೆ ಸಾಮಾಜಿಕ ತಾಣ ಬಳಸಲು ಸಲಹೆ ನೀಡಿದರು.
ಸಮಾರಂಭದಲ್ಲಿ ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಹಳ್ಳಿ, ಸಾಧನಾ ಸಂಸ್ಥೆ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ಉಪಾಧ್ಯಕ್ಷೆ ವೆಂಕಮ್ಮ ಸೋಮಾಪೂರ, ಡಾ. ಇಸಾಬೆಲ್ಲ ಝೇವಿಯರ್, ಮಾರ್ತಾಂಡಪ್ಪ ಕತ್ತಿ, ಇತರರು ಇದ್ದರು.
ನವೀನ ಹಳೆಯದು

نموذج الاتصال