ಧಾರವಾಡ ನಗರದ ಹೋಟೆಲ್ ಒಡೆಯರ ಸಂಘ ಹಾಗು ಬೇಕರಿ ವರ್ತಕರ ಸಂಘದ ಮನವಿ ಮೇರೆಗೆ ಇಂದು ಧಾರವಾಡದ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಸಮನ್ವಯ ಸಭೆ ಏರ್ಪಡಿಸಲಾಗಿತ್ತು.
ಈ ಮೊದಲು ಹೋಟೆಲ್ ಹಾಗು ಬೇಕರಿ ವರ್ತಕರು ತಮ್ಮ ಅಹವಾಲನ್ನು ಹಾಗು ಪಾಲಿಕೆ ಅಧಿಕಾರಿಗಳ ಕಿರುಕುಳ ಹಾಗು ಇನ್ನಿತರ ಸಮಸ್ಯೆಗಳ ಕೋರಿಕೆಯ ಮನವಿ ಮೇರೆಗೆ ಈ ಸಮನ್ವಯ ಸಭೆಯನ್ನು ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ಜರುಗಿತು.ವಿವಿಧ ವಿಷಯಗಳ ಬಗ್ಗೆ ವಿಸ್ತೃತವಾದ ಚರ್ಚೆ ಜರುಗಿತು ಸಭೆಯಲ್ಲಿ ಪ್ಲಾಸ್ಟಿಕ್ ಹಾಗು ತ್ಯಾಜ್ಯ ವಸ್ತುಗಳ ಬಗ್ಗೆ ಚರ್ಚೆ ನಡೆಯಿತು.
ಅಧಿಕಾರಿಗಳಿಗೆ ಯಾವದೆ ಕಾರಣಕ್ಕು ವರ್ತಕರಿಗೆ ಕಿರುಕುಳ ನೀಡಬಾರದು ಅವರು ಹಾಗು ಅಧಿಕಾರಿಗಳು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಬೇಕು ಹಾಗು ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕಾರ್ಯಾಗಾರ ಮಾಡಿ ಬಳಕೆಗಳ ಬಗ್ಗೆ ಮಾಹಿತಿ ನೀಡಲಾಗುವದು. ಕೆಲವೊಂದು ಸ್ಥಳಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದ ಬಗ್ಗೆ ದೂರು ಬಂದಿದ್ದು
ಆಹಾರ ಪದಾರ್ಥಗಳು ಕಳಪೆ ಮಟ್ಟದಲ್ಲಿದ್ದು ಆರೋಗ್ಯ ಅಧಿಕಾರಿಗಳು ಕೂಡಲೆ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಕಾಳಜಿ ವಹಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಮಹಾಪೌರರು ಈರೇಶ ಅಂಚಟಗೇರಿ ಉಪಮಹಾಪೌರರು ಉಮಾ ಮುಕ್ಕುಂದ ಪಾಲಿಕೆ ವಿಶೇಷ ಆಯುಕ್ತರು ಬನಶಂಕರಿಯವರು ಆನಂದ ಕಲ್ಲೊಳಕರ ಪಾಲಿಕೆ ಸದಸ್ಯರು ಸುರೇಶ ಬೆದರೆ ಜ್ಯೋತಿ ಪಾಟೀಲ ಲಕ್ಷ್ಮಿ ಹಿಂಡಸಗೇರಿ ಆರ ಎಂ ಕುಲಕರ್ಣಿ ಗಿರಿಶ ದಂಡೆಪ್ಪನವರ ಮನೋಜ ಗಿರೀಶ ಸಬರದ ಇಂಗಳಗಿಹಾಗು ಹೋಟೆಲ್ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಉಪಸ್ಥಿತರಿದ್ದರು