DHARWAD:ಅಭಿನಯ-ಅಭಿವ್ಯಕ್ತಿ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ ಸುಳ್ಳಗ್ರಾಮದಲ್ಲಿ ಉದ್ಘಾಟನೆ.

ಅಭಿನಯ-ಅಭಿವ್ಯಕ್ತಿ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ ಸುಳ್ಳಗ್ರಾಮದಲ್ಲಿ ಉದ್ಘಾಟನೆ.   
     ಧಾರವಾಡ  03 :               ಸುನಿಧಿ  ಕಲಾ ಸೌರಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ಅಭಿನಯ-ಅಭಿವ್ಯಕ್ತಿ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರದ ಉದ್ಘಾಟನೆಯನ್ನು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳ ತಾ||ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು .
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಭಾಸ  ನರೇಂದ್ರ ಮಾಜಿ ನಿರ್ದೇಶಕರು ರಂಗಾಯಣ ಧಾರವಾಡ ಇವರು ವಹಿಸಿದ್ದರು. 
ಮುಖ್ಯ ಅತಿಥಿಗಳಾಗಿ, ಡಾ. ಜುಗನ್ ಪಟೇಲ್ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಹುಬ್ಬಳ್ಳಿ ಮತ್ತು ಡಾ. ಗೌತಮ ಚಾಯದೆ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಹುಬ್ಬಳ್ಳಿ ದಕ್ಷಿಣ ಹಾಗೂ ಇನ್ನೊರ್ವ ಅತಿಥಿಗಳಾಗಿ ಶ್ರೀಕೇತನ ಮಹೇಶ್ವರಿ ಮಾಜಿ ಅಧ್ಯಕ್ಷರು ರೋಟರಿ ಕ್ಲಬ್ ಹುಬ್ಬಳ್ಳಿ ದಕ್ಷಿಣ ವೇದಿಕೆಯಲ್ಲಿ ಉಪಸ್ತಿತರಿದ್ದರು. ಶಾಲೆಯ ಎಸ್. ಡಿ. ಎಮ್. ಸಿ ಅಧ್ಯಕ್ಷರಾದ 
 ಶರಣಬಸಪ್ಪ ಗುಡಿಗೇರಿ ಮತ್ತು ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಬಿ ಎಸ್ ನಾಡಗೌಡ ಅವರು ಭಾಗವಹಿಸಿದ್ದರು.ಡಾ. ಜುಗನ್ ಪಟೇಲ್ ಅವರು ಕಾರ್ಯಾಗಾರ ವನ್ನು ಉದ್ಘಾಟಿಸಿದರು. ಅತಿಥಿಗಳ ಸ್ವಾಗತವನ್ನು ವೀಣಾ ಅ ಠವಲೆ  ನೇರವೇರಿಸಿ ಕೊಟ್ಟರು ಹಾಗೂ  ವಂದನಾರ್ಪಣೆಯನ್ನು ಸ್ಮೀತಾ ಮಹಾಪುರುಷ ಗುರುಮಾತೆಯರು ಮಾಡಿದರು.
ನವೀನ ಹಳೆಯದು

نموذج الاتصال