HUBBALLI:ಹುಬ್ಬಳ್ಳಿಯ ಮಹಾವೀರ ಶಿಕ್ಷಣ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಸನ್ಮಾನ.

ಹುಬ್ಬಳ್ಳಿಯ ಮಹಾವೀರ ಶಿಕ್ಷಣ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಸನ್ಮಾನ.    
ಹುಬ್ಬಳ್ಳಿ :
   ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹುಬ್ಬಳ್ಳಿಯ ಮಹಾವೀರ ಶಿಕ್ಷಣ ಸಂಸ್ಥೆಯ ನೂತನ ಪದಾಧಿಕಾರಿಗಳಾಗಿ ಆಯ್ಕೆ ಆದ  ಆರ್ ಟಿ ತವನಪ್ಪನವರ, ಅಧ್ಯಕ್ಷರು 
 ಆರ್ ಟಿ ಅಣ್ಣಿಗೇರಿ, ಉಪಾಧ್ಯಕ್ಷರು 
 ವಿಮಲಕೀರ್ತಿ ತಾಳಿಕೋಟಿ, ಕಾರ್ಯದರ್ಶಿ 
 ವಿಜಯ ಧರಣೆಪ್ಪನವರ, ಕೋಶಾಧಿಕಾರಿ 
 ಅಶೋಕ್ ಎಮ್ ಶೆಟ್ಟಪ್ಪನವರ, ಜಂಟಿ ಕಾರ್ಯದರ್ಶಿ 
ಇವರುಗಳಿಗೆ  ಮಹಾವೀರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೈಲನಪ್ಪನವರ ನಗರ ಹುಬ್ಬಳ್ಳಿ ಯ ಆಡಳಿತ ಮಂಡಳಿಯ ಕಛೇರಿಯಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ನೂತನ ಪದಾಧಿಕಾರಿಗಳಿಗೆ ಸಂಸ್ಥೆಯ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸಬೇಕು ಎಂದು ತಿಳಿಸಿದರು. 
ಈ ಕಾರ್ಯಕ್ರಮ ದಲ್ಲಿ ನಿಕಟಪೂರ್ವ ಅಧ್ಯಕ್ಷ  ಎಸ್ ಕೆ ಆದಪ್ಪನವರ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸನ್ಮಾನಕ್ಕೆ ಉತ್ತರಿಸಿದ ನೂತನ ಅಧ್ಯಕ್ಷ  ಆರ್ ಟಿ ತವನಪ್ಪನವರ  ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಿಗೆ ಸಂಪೂರ್ಣ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. 
 ಸನ್ಮಾನ ಸಮಾರಂಭ ದಲ್ಲಿ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.ಶೋಭಾ ಯಾವಗಲ್ ಸ್ವಾಗತಿಸಿದರು. ಪಾರ್ವತಿ ಶೀಲವಂತರ ವಂದಿಸಿದರು.
ನವೀನ ಹಳೆಯದು

نموذج الاتصال