DHARWAD:29 ಕ್ಕೆ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

29 ಕ್ಕೆ ಯೋಗ ರತ್ನ -2025  ಪ್ರಶಸ್ತಿ ಪ್ರದಾನ ಸಮಾರಂಭ
ಧಾರವಾಡ  : 
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ  6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. 
ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಾಗೂ ಟಿವಿ ಮಾಧ್ಯಮದ ಸುದ್ದಿ ನಿರೂಪಕರಿಗೆ, ಸಾಮಾಜಿಕ ಜಾಲತಾಣದಲ್ಲಿ ಯೋಗ ಹಾಗೂ ಫಿಟ್ ನೆಸ್ ಕುರಿತು ಅರಿವು ಮೂಡಿಸುತ್ತಿರುವ ಇನ್ ಫ್ಲುಯನ್ಸರ್ ಗಳಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಸಂಸ್ಥಾಪಕರು, ಶ್ವಾಸ ಯೋಗ ಸಂಸ್ಥೆ ಹಾಗೂ ಖ್ಯಾತ ಯೋಗ ಗುರು ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. 

ಸನ್ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ, ಮಾನ್ಯ ಉಪ ಮುಖ್ಯಮಂತ್ರಿಗಳಾದ  ಡಿ ಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವರಾದ  ಸಂತೋಷ್ ಎಸ್ ಲಾಡ್ ಅವರು ಉಪಸ್ಥಿತರಿರಲಿದ್ದಾರೆ. 

ಖ್ಯಾತ ಗಾಯಕರಾದ ಎಮ್ ಡಿ ಪಲ್ಲವಿ ಹಾಗೂ ವಾಸು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ  India's Got Talent ಸ್ಪರ್ಧಾಳುಗಳಿಂದ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. 
ಪ್ರಕಟನೆಯಲ್ಲಿ ತಿಳಿಸಲಾಗಿದೆ.
ನವೀನ ಹಳೆಯದು

نموذج الاتصال