ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸನ್ಮಾನ್ಯ ಪ್ರದಾನ ಮಂತ್ರಿಗಳ 15 ಅಂಶಗಳ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ವಿವಿಧ ಇಲಾಖೆಗಳ
ಯೋಜನೆಗಳನ್ನು ವ್ಯಾಪಕ ಪ್ರಚಾರ ಮಾಡಿಸಿ ಸರಕಾರದ ಯೋಜನೆ ಗಳು ಅಲ್ಪ ಸಂಖ್ಯಾತರ ಸಮುದಾಯಕ್ಕೆ ನಿಗದಿತ ಸಮಯದಲ್ಲಿ ತಲುಪಿಸಿ :ಜಿಲ್ಲಾಧಿಕಾರಿ ದಿವ್ಯ ಪ್ರಭು*
*ಧಾರವಾಡ (ಕರ್ನಾಟಕ ವಾರ್ತೆ) ಜೂ.25-06-2024ರಂದು ಧಾರವಾಡ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಸನ್ಮಾನ್ಯ ಪ್ರದಾನ ಮಂತ್ರಿಗಳ 15 ಅಂಶಗಳ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ ದಿವ್ಯ ಪ್ರಭು ಅಧ್ಯಕ್ಷತೆವಹಿಸಿ, ವಿವಿಧ ಇಲಾಖೆಗಳ ಯೋಜನೆ ಗಳ ಕುರಿತು ಪ್ರಗತಿ ಪರಿಶೀಲನೆ ಮಾಡಿ ಅಲ್ಪ ಸಂಖ್ಯಾತರಿಗೆ ನಿಗದಿ ಪಡಿಸಿದ ವಿವಿಧ ಇಲಾಖೆಗಳ ಯೋಜನೆಗಳು ಸಕಾಲದಲ್ಲಿ ತಲುಪಿಸಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿದರು. ನಾಮ ನಿರ್ದೇಶೀತ ಸದಸ್ಯರಾದ ಶ್ರೀ ಹೆಚ್. ಎ.ದೇವರ ಹೊರು. ಶ್ರೀ ಅಜರುದ್ದಿನ್ ಮನಿಯಾರ್ ಶ್ರೀ ಆಯಾತ್ತುಲ್ ಜಾಗಿರದಾರ್ ಶ್ರೀ ಫಾದರ್ ಡಾ.ಅಲ್ವಿನ್ ಸುಧೀರ್ ಶ್ರೀ ಬೂಪಾಲಪ್ಪ ಪುಟ್ಟಣ್ಣವರ
ಮತ್ತು ಪ್ರೊಬೆಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ ಹಾಗೂ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ರವರು ಸ್ವಾಗತಿಸಿದರು.