DHARWAD:ಭಾರತೀಯ ಜನತಾ ಪಾರ್ಟಿ, ಧಾರವಾಡ ಗ್ರಾಮೀಣ ಮಂಡಲ ದಿಂದ ಪಂಜಿನ ಮೆರವಣಿಗೆ.

ಭಾರತೀಯ ಜನತಾ ಪಾರ್ಟಿ, ಧಾರವಾಡ ಗ್ರಾಮೀಣ ಮಂಡಲ ದಿಂದ ಪಂಜಿನ ಮೆರವಣಿಗೆ.
 ಧಾರವಾಡ :  ಅಮ್ಮಿನಭಾವಿ ಗ್ರಾಮದಲ್ಲಿ ಬಿಜೆಪಿ ಗ್ರಾಮೀಣ -71 ಮಂಡಲ ವತಿಯಿಂದ ಪಂಜಿನ ಮೆರವಣಿಗೆ ಇಟ್ಟುಕೊಳ್ಳಲಾಗಿತು ಭಾರತ ದೇಶದ ಮಾಜಿ ಪ್ರಧಾನ ಮಂತ್ರಿಗಳಾದ  ಇಂದಿರಾಗಾಂಧಿಯವರು ಭಾರತದ ಸಂವಿಧಾನಕ್ಕೆ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ)  ಹೇರಿ ಭಾರತದ ಕಾನೂನನ್ನು ಬುಡುಮೇಲು ಮಾಡಿದ್ದಕ್ಕೆ 50 ವರ್ಷ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾರತದಲ್ಲಿ "ತುರ್ತು ಪರಿಸ್ಥಿತಿ" ಜಾರಿ ಮಾಡಿ ಸಂವಿಧಾನದ ಹತ್ಯೆ ಮಾಡಿ 50 ವರ್ಷಗಳು ಕಳೆದರು. ಕರಾಳ ದಿನಗಳ ನೆನಪು ಇನ್ನೂ ಭಾರತದ ಮಾನಸದಲ್ಲಿ, ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿದೆ. 

ನಾಗರಿಕ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯಮೇಲೆ  ನಿರ್ಬಂಧ, ಲಕ್ಷಾಂತರ ರಾಜಕೀಯ ಕಾರ್ಯಕರ್ತರ ಬಂಧನ, ಭಾರತದ ಗಣತಂತ್ರದ ಮೌಲ್ಯಗಳ ಕಗ್ಗೋಲೆಗೆ ಸಾಕ್ಷಿಯಾಯಿತು. ಇಡಿ ವಿಶ್ವವೇ  ಈ ನಾಗರಿಕ ಸ್ವಾತಂತ್ರ್ಯದ ದಮನವನ್ನು ಖಂಡಿಸಿತು.

ತುರ್ತು ಪರಿಸ್ಥಿತಿಗೆ 50 ವರ್ಷ ಕಳೆದರು ಇಂದಿಗೂ ಜೂನ್, 25 ಕರಾಳ ದಿನವಾಗಿ, ಸಂವಿಧಾನ ಹತ್ಯೆಯ ದಿನವಾಗಿ ಇತಿಹಾಸದಲ್ಲಿ ಉಳಿದಿದೆ. ತುರ್ತುಪರಿಸ್ಥಿತಿಯ ಸಮಯದಲ್ಲಿ  ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಡಿದವರಿಗೆ "ಪಂಜಿನ ಮೆರವಣಿಗೆ" ಮುಖಾಂತರ  ನಮನಗಳನ್ನು ಸಲ್ಲಿಸಲಾಯಿತು 
ಈ ಒಂದು ಪಂಜಿನ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ  ಅಮೃತ್ ದೇಸಾಯಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ಶಂಕರ ಕುಮಾರದೇಸಾಯಿ, ಮಾಜಿ ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಸುರೇಂದ್ರ ದೇಸಾಯಿ ಪಕ್ಷದ ಪ್ರಮುಖ ಯಲ್ಲಪ್ಪ ಜಾನಕನೂರ,  ಈರಯ್ಯ ಚಿಕ್ಕಮಠ,  ಮಾದೇವಪ್ಪ ದಂಡಿನ,  ಅಜ್ಜಪ್ಪ ಜಂಗೂಳಿ,  ಲಕ್ಷ್ಮಿ ಕಾಶಿಗಾರ,  ಲಕ್ಷ್ಮಿ ಶಿಂಧ,  ಮೃತ್ಯುಂಜಯ ಹಿರೇಮಠ, ಶ್ರುತಿ ಬೆಳ್ಳಕ್ಕಿ,  ಸಿದ್ದು ತಿದಿ,ಕಿರಣ ಜಾದವ, ಮಾಂತೇಶ್ ಹುಲ್ಲೂರು,  ಮೌನೇಶ್ ಪತ್ತಾರ,  ವಸಂತ ಪದಕಿ,  ಮಲ್ಲಿಕಾರ್ಜುನ್ ಅಮರಗೋಳ,  ನಾಗರಾಜ್ ಚಂದರಗಿ, ಬಿಜೆಪಿ ಪಕ್ಷದ ಬೂತ್ ಅಧ್ಯಕ್ಷರು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ಅಮ್ಮಿನಭಾವಿ ಗ್ರಾಮಸ್ಥರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال