DHARWAD:ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ - ಕುಮಾರ ಕೆ ಎಫ್. ಮರಗಳನ್ನು ನೆಟ್ಟು ರಕ್ಷಣೆ

ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ -   ಕುಮಾರ ಕೆ ಎಫ್.   ಧಾರವಾಡ : ಮರಗಳನ್ನು ನೆಟ್ಟು ರಕ್ಷಣೆ

 ಮಾಡುವುದು ನಮ್ಮೆಲ್ಲರ ಹೊಣೆ ಎಂದು ಕೇತ್ರ ಸಮನ್ವಯಾಧಿಕಾರಿ ಕುಮಾರ ಕೆ ಎಫ್ ಕರೆ ನೀಡಿದರು.
ಅವರು ತಾಲೂಕಿನ ಲಾಳಗಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ “ತಾಯಿಯ ಹೆಸರಿನಲ್ಲಿ ಒಂದು ಮರ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತಾ.ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ- ತಂತ್ರಜ್ಞಾನದ ಅಭಿವೃದ್ಧಿಗಳೆಂಬ ಹತ್ತು ಹಲವು ಕಾರಣಗಳು ಪರಿಸರದ ವಿನಾಶದ ಅಂಚಿನತ್ತ ತೆರಳಲು ಇವುಗಳ ಪಾತ್ರವಿದೆ ಎಂದರೆ ತಪ್ಪಾಗಲಾರದು. ವ್ಯವಸಾಯ ಮಾಡುತ್ತಿದ್ದ ಭೂಮಿ ಇಂದು ಬಂಜರಾಗಿದ್ದು, ನದಿಕೆರೆಗಳೆಲ್ಲ ಬತ್ತಿ ಒಣಗಿ ಕ್ರಿಕೆಟ್ ಮೈದಾನಗಳಾಗಿವೆ. ಮುಂದೊಂದು ದಿನ ಸೌರಮಂಡಲದಲ್ಲಿರು ಭೂಮಿ ಜನರಹಿತ ಗ್ರಹ ಆಗಲಿದೆ. ಎಚ್ಚರವಿರಲಿ ನಾವೆಲ್ಲರೂ ಗಿಡ ನೆಟ್ಟು ಪರಿಸರ ರಕ್ಷಣೆ ಮಾಡೊಣಾ ಎಂದರು.
ಎರಡನೇ ತರಗತಿ ವಿದ್ಯಾರ್ಥಿನಿಯಾದ ಜ್ಯೋತಿ  ತನ್ನ ತಾಯಿಯಾದ ಮಂಜುಳಾ ನವಲೂರ ಇವರ ಹೆಸರಿನಲ್ಲಿ ಗಿಡ ನೇಡುವ ಮೂಲಕ “ತಾಯಿಯ ಹೆಸರಿನಲ್ಲಿ ಒಂದು ಮರ” ಉದ್ಘಾಟನೆ ಮಾಡಿದಳು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಕೆ ಇ ಬೋರ್ಡ ನಿವೃತ್ತ ಶಿಕ್ಷಕ ಸುರೇಶ ಕುಲಕರ್ಣಿ ಮಾತನಾಡುತ್ತಾ ಪರಿಸರವೊಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪರಿಸರವಿಲ್ಲದೇ ಮಾನವನಿಲ್ಲ, ಮೊದಲು ಪರಿಸರ ರಕ್ಷಿಸಿ ಮುಂದಿನ ಪಿಳಿಗೆಗೆ ಉಳಿಸೋಣ ಎಂದರು.
ಮುಖ್ಯೋಪಾಧ್ಯಾಯ ಪ್ರಶಾಂತ ಕಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೇವಲ ವರ್ಷಕ್ಕೆ ಒಂದು ದಿನ ಪರಿಸರ ರಕ್ಷಣೆಯೆಂಬುದು ಸೀಮಿತವಾಗದೇ, ವರ್ಷದ ಪ್ರತಿ ದಿನವೂ ನಮಗೆ ಪರಿಸರ ದಿನವಾಗಬೇಕು ಎಂದರು.
ಶಾಲಾ ಹಿರಿಯ ಶಿಕ್ಷಕಿಯಾದ ಲೀಲಾಬಾಯಿ.ಎಲ್.ಕೆ, ನಾಗಿಣಿ ಮೊರಬದ, ಗ್ರಾಮದ ಹಿರಿಯರಾದ ಪಕ್ಕೀರಪ್ಪ ಚವರಗುಡ್ಡ,  ಉಪಸ್ಥಿತರಿದ್ದರು.
ಮಕ್ಕಳು ಸಮೂಹಿಕ ಪ್ರಾರ್ಥನೆ ಮಾಡಿದರು, ಮಂಜುಳಾ ನವಲೂರ ಸ್ವಾಗತಿಸಿ ವಂದಿಸಿದರು.
ನವೀನ ಹಳೆಯದು

نموذج الاتصال