YADWAD:ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರಿಂದ ದೀಪಗಳ ದೀಪೋತ್ಸವ

ಧಾರವಾಡ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಮಹಿಳೆಯರಿಂದ ದೀಪಗಳ ದೀಪೋತ್ಸವ  
ಸುಕ್ಷೇತ್ರ ಯಾದವಾಡದಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಗ್ರಾಮದ ಮಹಿಳೆಯರಿಂದ ದೀಪಗಳ ದೀಪೋತ್ಸವ ಯಶಸ್ವಿಯಾಗಿ ಜರುಗಿತು 
ಗ್ರಾಮ ದೇವತೆಯರ ದೇವಸ್ಥಾನದ ಎದುರು ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ ಪಾದಗಟ್ಟಿ ವರೆಗೂ ಆಗಮಿಸಿ ದೇವಿಯರಿಗೆ ಪೂಜೆ ಸಲ್ಲಿಸಿದರು. ಪ್ರತಿ ಮನೆಯಿಂದ 15 ದೀಪಗಳನ್ನು ತಂದ ಮಹಿಳೆಯರು ದೇವಸ್ಥಾನ ಸುತ್ತಲೂ ದೀಪಗಳನ್ನು ಹಚ್ಚುವ ಮೂಲಕ ಇಡೀ ದೇವಸ್ಥಾನವನ್ನು ದೀಪಗಳ ಬೆಳಕಿಂದ ಕಂಗೊಳಿಸಲಾಯಿತು. ಮಂಜುಳಾ ಎಲಿಗಾರ, ಸುಲೋಚನಾ ಕೇಶಗೊಂಡ, ಸುವರ್ಣಾ ದಳವಾಯಿ, ಬಸವ್ವ ಕುಂದಗೋಳ, ಮಲ್ಲಮ್ಮ ಕೋಯಪ್ಪನವರ, ನಂದಾ ಹಿರೇಮಠ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಇದ್ದರು. 

ಜಾತ್ರೆ ನಿಮಿತ್ತ ಬುಧವಾರ ಎಂದಿನಂತೆ ನಸುಕಿನಲ್ಲಿ ಚಂಡಿಕಾ ಹೋಮ ಜರುಗಿತು. ಬುಧವಾರ ವಿಶೇಷವಾಗಿ ಬಾಲಕಿಯರು ಹೋಮದ ಪೂಜೆಗೆ ಕುಳಿತಿದ್ದರು. ಸಂಜೆ ಕಲ್ಲಿನಾಥ ಶಾಸ್ತ್ರಿಗಳು ದೇವಿ ಪುರಾಣ ಹೇಳಿದರು. ಯಾದವಾಡ ಸೇರಿದಂತೆ ಸುತ್ತಲೂ ಗ್ರಾಮಗಳಿಂದ ಆಗಮಿಸಿ ದೇವಿಗೆ ಉಡಿ ತುಂಬಿ ಭಕ್ತಿ ಮೆರೆದರು.
ಒಂಭತ್ತು ದಿನಗಳ ಈ ಜಾತ್ರೆ ನಿಮಿತ್ತ ಕಳೆದ ಏಳು ದಿನಗಳ ಹಿಂದಷ್ಟೇ ದುರ್ಗಮ್ಮ ಹಾಗೂ ದ್ಯಾಮಮ್ಮ ಸೀಮೆಗೆ ವಿಜೃಂಭಣೆಯಿಂದ ಆಗಮಿಸಿದ್ದರು. ಇದೀಗ ಗುರುವಾರ ಸಂಜೆ ದೇವಿಯರು ಸೀಮೆಯಿಂದ ಹೊರಡಲಿದ್ದಾರೆ. ಈ ನಿಮಿತ್ತ ಗುರುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ನವೀನ ಹಳೆಯದು

نموذج الاتصال