27 ಕ್ಕೆ ಅದ್ದೂರಿ ಭೀಮೋತ್ಸವ ಕಾರ್ಯಕ್ರಮ.
ಧಾರವಾಡ 25:
ಧಾರವಾಡದ ಕಲಾಭವನದಲ್ಲಿ ಡಾ: ಬಾಬಾಸಾಬ ಭೀಮರಾವ್ ಅಂಬೇಡ್ಕರ ಇವರನ್ನು ಮತ್ತು ಇವರು ಭಾರತದ ಸಂವಿಧಾನವನ್ನು ಬರೆದುದರ ಕುರಿತು ಅದರ ಮಹತ್ವ ಅದನ್ನು ರಕ್ಷಿಸುವ ಜನ ಜಾಗೃತಿಯನ್ನು ಮೂಡಿಸುವಲ್ಲಿ ಭೀಮೋತ್ಸವ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಶೋಷಿತರ ಸಮುದಾಯದಿಂದ
ರವಿವಾರ ದಿ 27- ರಂದು ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ವೆಂಕಟೇಶ ಸಕಬಾಲ ಇವರ ನೇತ್ರತ್ವದಲ್ಲಿ ನಡೆಯುತ್ತಿದೆ ಎಂದು ಡಾ ಇಸಾಬೆಲ್ ಝೆವಿಯರ ತಿಳಸಿದರು.
ಬಹುತ್ವ ಭಾರತದ ಮಹಾ ಕನಸನ್ನು ಹೊತ್ತು ಈ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ಮೂಲ ಭೂತ ಹಕ್ಕುಗಳು ಮತ್ತು ಅವರ ಗೌರವ ಎತ್ತಿ ಹಿಡಯುವ ಉದ್ದೇಶ ಭಾರತದ ಸಂವಿಧಾನದಲ್ಲಿ ಕಾಣಸಿಗುತ್ತದೆ. ಸ್ವಾತಂತ್ರ್ಯದ ಪೂರ್ವದಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಹಿಂದಿಳಿದಿದ್ದರು ಎಂದರು.
ಡಾ: ಬಾಬಾಸಾಬ ಭೀಮರಾವ್ ಅಂಬೇಡ್ಕರ ಇವರು ಪರಿಶಿಷ್ಠ ಜಾತಿಯಲ್ಲಿ ಹುಟ್ಟಿ, ಪಡಬಾರದ ಸಂಕಷ್ಟ ಅವಮಾನಗಳೆಲ್ಲದ್ದರ ವಿರುದ್ಧ ಹೋರಾಡಿ ಎದ್ದು ಬಂದು ಬಹುತ್ವ, ಸಮಾನತೆಯ ಪ್ರಜಾಪ್ರಭುತ್ವದ ಆಧಾರದ ಮೇಲೆ ಜಗತ್ತಿನಲ್ಲಿಯ ಶ್ರೇಷ್ಠವಾದ ಸಂವಿಧಾನವನ್ನು ದೇಶಕ್ಕೆ ಸಮರ್ಪಣೆ ಮಾಡಿದರು.
ಸಂವಿಧಾನ ಜಾರಿಗೆ ಬರುವ ಮೊದಲು ಇದ್ದಂತಹ ಜಾತಿ ತಾರತಮ್ಯ ಲಿಂಗ ಸಮಾನತೆ ಮತ್ತು ಬಹಳಷ್ಟು ಕ್ಷೇತ್ರದಲ್ಲಿ ಹಿಂದುಳಿದಂತಹ ಜನರ ಪರಿಸ್ಥಿತಿ ಈಗ ಬಹಳಷ್ಟು ಬದಲಾಗಿದೆ ಎಂಬುದನ್ನು ಇಡೀ ಜಗತ್ತೇ ನೋಡುತ್ತಿದೆ. ಇದನ್ನು ಎಲ್ಲರೂ ಒಪ್ಪಲೇ ಬೇಕಾಗಿರುತ್ತದೆ. ಮಹಿಳೆಯರ ಸ್ಥಾನ ಮಾನಗಳು ಕೆಲಸದ ಸ್ಥಳದಲ್ಲಿ ಮಹಿಳಾ ರಕ್ಷಣೆ ಆಕೆಗೆ ಸಂಬಂಧಿಸಿದಂತೆ ಬಹಳಷ್ಟು ಕಾನೂನುಗಳು ಇಂದು ಜಾರಿಯಲ್ಲಿವೆ ಎಂದರು.
ಮಹಿಳೆಯರಿಗೆ ಇಂದು ರಾಜಕೀಯ ಶಿಕ್ಷಣ, ಸಮಾಜೀಕ, ಆರ್ಥಿಕ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಸಂವಿಧಾನವು ಅವರಿಗೆ ಹಕ್ಕನ್ನು ಕೊಟ್ಟಿದೆ. ಹೆಣ್ಣು ಮಕ್ಕಳು ಈ ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆದು ತಮ್ಮ ವಿಶೇಷ ಪರಿಚಯವನ್ನು ಮಾಡಿಕೊಂಡಿದ್ದಾರೆ.ದಿ 27 ರಂದು ಧಾರವಾಡದ ಕಲಾಭವನದಲ್ಲಿ ನಡೆಯುತ್ತಿರುವ
ಭೀಮೋತ್ಸವದ ಅಂಗವಾಗಿ ಸಂವಿಧಾನ ಅರಿವು
ಜಾಗೃತಿ ಮತ್ತು ರಕ್ಷಣೆ ಮೂಡಿಸುವ ಈ
ಕಾರ್ಯಕ್ರಮಕ್ಕೆ ಧಾರವಾಡದ ನಾವೆಲ್ಲ ಮಹಿಳೆಯರು ಶುಭವನ್ನು ಕೋರುತ್ತೇವೆ. ಮತ್ತು ಎಲ್ಲ ರೀತಿಯ ಸಹಾಯ ಸಹಕಾರವನ್ನು ಕೊಟ್ಟು ಬೆಂಬಲಿಸುತ್ತೇವೆ. ಎಂದರು. ಪತ್ರಿಕಾಗೋಷ್ಟಿಯಲ್ಲಿ ಸ್ಟಾಲಿ ಡಿಸೋಜಾ,ವಸಿಮಾ ಖಾನಂ ಗುಡಿಹಾಳ,ರಹಿಮಾ ಶಿರಹಟ್ಟಿ,ಸಾಜಿದಾ ಅಲ್ಲಾಭಕ್ಷ,ನುಸರತ್ ಸೋನೆಖಾನ್ ಇದ್ದರು.