DHARWAD:ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಫರ್ಧೆ ಎತ್ತುಗಳಿಗೆ ಪೂಜೆ ಮಾಡಿ ಗಾಡಾ ಸ್ಪರ್ಧೆಗೆ ಚಾಲನೆ ನೀಡಿದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ.

ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಫರ್ಧೆ 
ಎತ್ತುಗಳಿಗೆ ಪೂಜೆ ಮಾಡಿ ಗಾಡಾ ಸ್ಪರ್ಧೆಗೆ ಚಾಲನೆ ನೀಡಿದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮೀಜಿ.
ಧಾರವಾಡ  :
ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 95 ನೇ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಫರ್ಧೆಯನ್ನು ಸವದತ್ತಿ ರಸ್ತೆಯ ಕಾಶಿನಗರದಲ್ಲಿ ಆಯೋಜನೆ ಮಾಡಲಾಗಿತ್ತು. ರೋಮಾಂಚಾನಕಾರಿಯಾದ  ರೈತರ ಈ ವಿಶೇಷ ಸ್ಪರ್ಧೆಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ್ ತಾಲೂಕಿನ ನಯಾನಗರ ಸುಕ್ಷೇತ್ರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ, ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ   ಚಾಲನೆ ನೀಡಿದರು.

ಮಾಜಿ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು ಆಗಿರುವ,  ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ವಿಶೇಷ ಆಸಕ್ತಿಯಿಂದ ರೈತರಿಗಾಗಿಯೇ ಧಾರವಾಡ ಗ್ರಾಮೀಣ ಮತಕ್ಷೇತ್ರದಲ್ಲಿ ಆಯೋಜಿಸಿದ್ದ, ರಾಜ್ಯ ಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳಿಂದ
ನೂರಾರು ರೈತರು ಪಾಲ್ಗೊಂಡಿದ್ದಾರೆ. ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 75,000 ರೂಪಾಯಿ ಶಾಸಕ ವಿನಯ ಕುಲಕರ್ಣಿ ಅವರು ಇಟ್ಟಿದ್ದಾರೆ. 2 ನೇ ಬಹುಮಾನ ಮುಖಂಡರಾದ ನಾಗರಾಜ ಗೌರಿ 60,000 ಘೂಷಣೆ ತೃತೀಯ ಬಹುಮಾನ ಪಾಲಿಕೆ ಸದಸ್ಯ  ಪ್ರಕಾಶ ಘಾಟಗೆ, 50,000 ರೂಪಾಯಿ ಇಟ್ಟಿದ್ದು, ಉಳಿದಂತೆ ರೈತ ಮುಖಂಡರು ಹಾಗೂ ಪಾಲಿಕೆ ಸದಸ್ಯರು ನಗದು ರೂಪದ ಬಹುಮಾನ ಇಟ್ಟಿದ್ದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ, ಸದಾಕಾಲ ಹೊಲದಲ್ಲಿ ಕೃಷಿ ಮಾಡಿಕೊಂಡು ಇರುವ ರೈತರಿಗೆ ಇಂತಹ ಖಾಲಿ ಗಾಡಾ ಓಡಿಸುವ ಸ್ಫರ್ಧೆಗಳು ಹೊಸ ಹುಮ್ಮಸ್ಸು ತರುತ್ತವೆ. ರೈತರಿಗೆ ಇದೊಂದು ಅತ್ಯಂತ ವಿಭಿನ್ನ ಸ್ಫರ್ಧೆ. ತಮ್ಮ ಹೊಲದಲ್ಲಿ ಕೆಲಸ ಮಾಡುವ ಎತ್ತುಗಳ
ಸಾರ್ಮಥ್ಯ ಗೊತ್ತಾಗುವ ದೃಷ್ಟಿಯಿಂದ ರಾಜ್ಯದ ನಾನಾ ಭಾಗಗಳಿಂದ ರೈತರು ಇಂತಹ ಸ್ಫರ್ಧೆಗೆ ಬರುತ್ತಾರೆ. ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಆಯೋಜನೆ ಮಾಡಿರುವ ಇಂತಹ ಸ್ಫರ್ಧೆಗಳು ಬಹಳ ಅನುಕೂಲ ಆಗಲಿದೆ. ವಿವಿಧ ಬಹುಮಾನಗಳನ್ನು ಸ್ಫರ್ಧೆಯಲ್ಲಿ ಇಡಲಾಗಿದೆ. ಕಾರ್ಯಕ್ರಮವನ್ನು ನಾನು
ಉದ್ಘಾಟನೆ ಮಾಡಿದ್ದು ಖುಷಿಯಾಗಿದೆ ಎಂದರು.

ಕಾಂಗ್ರೆಸ್ ಮುಖಂಡೆ ಹಾಗೂ ಕೆಎಂಎಫ್ ನಿರ್ದೇಶಕಿ ಹಾಗೂ ಶಿವಲೀಲಾ ವಿನಯ ಕುಲಕರ್ಣಿ ಅವರು ಮಾತನಾಡಿ, ನಮ್ಮ ಗ್ರಾಮೀಣ ಕ್ಷೇತ್ರದಲ್ಲಿ ರೈತರಿಗಾಗಿ ಪ್ರತಿ ವರ್ಷ ಮುರಘಾಮಠದ ಜಾತ್ರೆ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ. ರಾಜ್ಯದ ನಾನಾ ಭಾಗಗಳಿಂದ  ರೈತರು ಈ
ಸ್ಫರ್ಧೆಗೆ ಬಂದಿದ್ದಾರೆ. ಹಲವಾರು ನಿಯಮಗಳನ್ನು ಇಲ್ಲಿ ಪಾಲನೆ ಮಾಡಲಾಗುತ್ತೆ. ಪಾರದರ್ಶಕವಾಗಿ ಬಹುಮಾನ ಇಲ್ಲಿ ಗೆದ್ದ ಎತ್ತುಗಳಿಗೆ ಕೊಡಲಾಗುವುದು ಎಂದರು.

ಬಾಕ್ಸ- ಖಾಲಿ ಗಾಡಾ ಓಡಿಸುವ ನಿಯಮ ಹೀಗಿದೆ.
1 ನಿಮಿಷದಲ್ಲಿ ಎಷ್ಟು ದೂರ ಖಾಲಿ ಗಾಡಾವನ್ನು ಓಡಿಸಲಾಗುತ್ತೋ, ಹೆಚ್ಚಿಗೆ ದೂರ ಓಡಿದ ಚಕ್ಕಡಿಯ ಎತ್ತುಗಳಿಗೆ ಬಹುಮಾನ ಕೊಡುವ ನಿಯಮ ಇಲ್ಲಿದೆ. ಅಲ್ಲದೇ ಪಾರದರ್ಶಕವಾಗಿ ಸ್ಫರ್ಧೆ ನಡೆಯಲು ಮಹಾರಾಷ್ಟ್ರದ ಮೂಲದ ಇಬ್ಬರು ರೆಫ್ರಿಗಳನ್ನು ಈ ಸ್ಫರ್ಧೆಗೆ ಕರೆಸಲಾಗಿತ್ತು. ಅವರು ಚಕ್ಕಡಿಯಲ್ಲಿಯೇ
ಕುಳಿತುಕೊಂಡು, ಎತ್ತುಗಳು ಸಾಗಿದ ದೂರವನ್ನು ರೆಕಾರ್ಡ ಮಾಡಿಕೊಂಡು ಬಹುಮಾನ ಘೋಷಣೆ ಮಾಡುವ ಸ್ಫರ್ಧೆ ಇದಾಗಿತ್ತು.

ಶ್ರೀಗಳಿಗೆ ಸನ್ಮಾನಿಸಿ ಗೌರವ ಸಲ್ಲಿಕೆ
ರೈತರ ಸ್ಪರ್ಧೆ ಕಾರ್ಯಕ್ರಮಕ್ಕೆ ಬಂದಿದ್ದ, ಶ್ರೀಗಳಿಗೆ, ಕೆಎಂಎಫ್ ನಿರ್ದೇಶಕಿ ಹಾಗೂ ಶಾಸಕರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ , ಮಗಳು ವೈಶಾಲಿ ಕುಲಕರ್ಣಿ ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮೊದಲು ಶ್ರೀಗಳು ಮುರಘಾಮದಲ್ಲಿರುವ ಕೃರ್ತು ಗದ್ದುಗೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ಚಕ್ಕಡಿ ಓಡಿಸಿದ ತಾಯಿ-ಮಗಳು-
ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಹಾಗೂ ಮಗಳು ವೈಶಾಲಿ ವಿನಯ ಕುಲಕರ್ಣಿ ತಾವೇ ಚಕ್ಕಡಿ ಹತ್ತಿ ಚಕ್ಕಡಿ ಓಡಿಸುವ ಮೂಲಕ ಸ್ಫರ್ಧೆಯಲ್ಲಿ ಪಾಲ್ಗೊಂಡಿದ್ದ ರೈತರಿಗೆ ಪ್ರೋತ್ಸಾಹ ತುಂಬಿದರು. 

ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕಿ ಶಿವಲೀಲಾ ವಿನಯ ಕುಲಕರ್ಣಿ, ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ ಕುಲಕರ್ಣಿ, ಗಾಡಾ ಸ್ಪರ್ಧೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುತ್ತಿರುವುವ ಮುಖಂಡ ಅರವಿಂದ ಏಗನಗೌಡರ,ಪಾಲಿಕೆ ಸದಸ್ಯರಾದ ಪ್ರಕಾಶ ಘಾಟಗೆ,ದೀಪಾ ಸಂತೋಷ ನೀರಲಕಟ್ಟಿ,ಮರಿತ್ಯುಂಜಯ ಸಿದ್ನಾಳ, ಈಶ್ವರ ಮಾಲಗಾರ, ದೀಪಕ ಇಂಡಿ, ಪ್ರಕಾಶ ಪಟ್ಟಣಶೆಟ್ಟಿ,ಮುತ್ತು ಬಾವಿಕಟ್ಟಿ,ಪಕ್ಕೀರಪ್ಪಾ ಅರಕೇರಿ, ಸೋಮಣ್ಣ ಗೋಧಿಕಟ್ಟಿ, ಗುರುಸಿದ್ದಪ್ಪ ಭಾವಿಕಟ್ಟಿ,ಕಾಂಗ್ರೆಸದ ಮುಖಂಡರಾದ, ಸಂಜೀವ ಲಕಮನಹಳ್ಳಿ,ಕಿಶೋರ್ ಬಡಿಗೇರ್ ಸೇರಿದಂತೆ ಆಯೋಜಕರು, ರೈತರು , ಯುವಕರು ಪಾಲ್ಗೊಂಡಿದ್ದರು.
ನವೀನ ಹಳೆಯದು

نموذج الاتصال