ಮಾನವನು ಧರ್ಮಕ್ಕಾಗಿ ದಾನಿಯಾಗಬೇಕು .ಪ ಪೂ ಶ್ರೀ ಬಸವಲಿಂಗ ಮಹಾಸ್ವಾಮಿಜಿ.
ಪ್ರಾರಂಭದಲ್ಲಿ ಶ್ರೀಮಠದ ಟ್ರಸ್ಟ್ ಅಧ್ಯಕ್ಷರು ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ರಾಜಣ್ಣ ಕೊರವಿ ಯವರು ಮಾತನಾಡುತ್ತಾ ದೇವಸ್ಥಾನ ಕಟ್ಟಡದ ಬಗ್ಗೆ ಮಾಹಿತಿ ಒದಗಿಸಿದರು ಹಾಗೂ ಅಪಾರವಾದ ಭಕ್ತ ವೃಂದದವರು ಶ್ರೀ ಮಠದ ಕಟ್ಟಡಕ್ಕೆ ಉದಾರವಾಗಿ ದೇಣಿಗೆಯನ್ನು ನೀಡುತ್ತಿದ್ದಾರೆ ಆದ್ದರಿಂದ ದೇವಸ್ಥಾನದ ಕಟ್ಟಡ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಎಂ ಪಿ ಕುಂಬಾರ್ ರವರು ಕೂಡ ಕಟ್ಟಡದ ಅಭಿವೃದ್ಧಿಗಾಗಿ ದೇಣಿಗೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮಠದ ಮಹದೇವಪ್ಪ ಮೆಣಸಿನಕಾಯಿ, ರಾಮಣ್ಣ ಪದ್ಮಣ್ಣವರ, ಗುರುಸಿದ್ದಪ್ಪ ಬೆಂಗೇರಿ, ಶಿವಾಜಿ ಕನ್ನಿಕೊಪ್ಪ, ಶಿವಾನಂದ ಸಿರಗುಪ್ಪಿ, ಅನಂತ ನಾಡಿಗೇರ ಎಸ್ಐ ನೇಕಾರ ಸರ್, ಚೆನ್ನಬಸಪ್ಪ ಧಾರವಾಡ ಶೆಟ್ರು,ಹುಲಿಗೆಮ್ಮ ಆರ್ಯರ, ಶಿವಾನಂದ ರೆಡ್ಡಿ, ಶಿವಲಿಂಗಯ್ಯ ಹಿರೇಮಠ ಊರಿನ ಗಣ್ಯರು, ತಾಯಂದಿರು ಶ್ರೀ ಸಿದ್ದೇಶ್ವರ ಸೇವಾ ಸಮಿತಿಯ ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.