DHARWAD:ಕಾರ್ಯದರ್ಶಿ ವಿಲ್ಸನ್ ಜೆ . ಮೈಲಿಗೆ ಸನ್ಮಾನ

ಕಾರ್ಯದರ್ಶಿ ವಿಲ್ಸನ್ ಜೆ . ಮೈಲಿಗೆ   ಸನ್ಮಾನ 

ಧಾರವಾಡ:-- ನಿವೃತ್ತ ಪ್ರಾಂಶುಪಾಲರಾದ  ವಿಲ್ಸನ್ ಜೆ . ಮೈಲಿ ಅವರು ಕರ್ನಾಟಕ ಉತ್ತರ ಸಭಾ ಪ್ರಾಂತದ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದರ ಹಿನ್ನೆಲೆಯಲ್ಲಿ  ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ. ಪ್ರಧಾನ ಕಾರ್ಯದರ್ಶಿಗಳು  ಹಾಗೂ ಕ.ವಿ.ವಿ. ಸಿಂಡಿಕೇಟ್ ಸದಸ್ಯರಾದ  ರಾಬರ್ಟ ದದ್ದಾಪುರಿ  ಅವರ ನೇತೃತ್ವದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

       ವಿಲ್ಸನ್ ಜೆ ಮೈಲಿ ಅವರು ಕರ್ನಾಟಕ ಉತ್ತರ ಸಭಾ ಪ್ರಾಂತದ ಅಧಿನದಲ್ಲಿ ಬರುವ ಧಾರವಾಡ , ಹಾವೇರಿ , ಗದಗ , ಬಾಗಲಕೋಟ , ಬಿಜಾಪುರ , ಬಳ್ಳಾರಿ , ಶಿವಮೊಗ್ಗ ಹಾಗೂ ಚಿತ್ರದುರ್ಗ ಮತ್ತು ಬಾಗಶಃ ಆಂಧ್ರದ ಪ್ರಾಂತ ಕರ್ನೂಲ ವರೆಗಿನ ಪ್ರಾಂತಕ್ಕೆ ಕಾರ್ಯದರ್ಶಿಗಳಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ . ಮೊದಲು ಮೈಸೂರು ಪ್ರಾಂತ ಎಂದು ಸಮಸ್ತ ಕರ್ನಾಟಕಕ್ಕೆ ವಿಸ್ತರಿಸಿದ್ದ ಈ ಪ್ರಾಂತವನ್ನು ಆಡಳಿದ ಹಿತದೃಷ್ಟಿಯಿಂದ ಕರ್ನಾಟಕ ಉತ್ತರಸಭಾ ಪ್ರಾಂತ , ಕರ್ನಾಟಕ ಮಧ್ಯ ಸಭಾ ಪ್ರಾಂತ ಹಾಗೂ ದಕ್ಷಿಣ ಕರ್ನಾಟಕ ಸಭಾ ಪ್ರಾಂತ ( ಮಂಗಳೂರು ) ಎಂದು ವಿಭಜಿಸಲಾಯಿತು . ಧಾರವಾಡದಲ್ಲಿ ಇದರ ಕೇಂದ್ರ ಕಚೇರಿಯು ಹಳಿಯಾಳ ರೋಡಿನಲ್ಲಿರುವ ಬಿಷಪ್ ಕಂಪೌಂಡಿನಲ್ಲಿ 1888 ರಲ್ಲಿ ಸ್ಥಾಪಿತವಾದ ಆಲ್ ಸೇಂಟ್ಸ ಚರ್ಚೆ ಆವರಣದಲ್ಲಿದೆ . ಕಾರ್ಯದರ್ಶಿಗಳು ಉತ್ತರ ಪ್ರಾಂತದ ಚರ್ಚೆಗಳ , ಸಂಸ್ಥೆಗಳ ಮತ್ತು ಸಂಬಂಧಿಸಿದ ಆಸ್ತಿಗಳ ಮೇಲುಸ್ತುವಾರಿಯನ್ನು ಮಾಡುತ್ತಾರೆ.

     ಆನಂದ ಜಾಧವ , ಜೇಮ್ಸ್ ಯಾಮಾ ಬಿ.ಎಚ್ . ಪೂಜಾರ ಮುಂತಾದವರು ಉಪಸ್ಥಿತರಿದ್ದರು .
ನವೀನ ಹಳೆಯದು

نموذج الاتصال