DHARWAD:- ಮುಂಡಗೋಡು ಪೊಲೀಸ್ ಠಾಣಾ ಪ್ರಕರಣದಲ್ಲಿ
2 ವರ್ಷಗಳಿಂದ ಸುಮಾರು 16 ಸಲ ವಾರೆಂಟ್ ಆಗಿ ತಲೆಮೆರೆಸಿಕೊಂಡಿದ್ದ ಆರೋಪಿ ಇಮಾಮ್ ಸಾಬ್ ದಾವಲ್ ಸಾಬ್ ಅಲಿ ಬಾಯಿ ಈತನನ್ನು ಮುಂಡಗೋಡ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶಂಕ್ರಪ್ಪ ರಾಠೋಡ್ ಮತ್ತು ಬಸವರಾಜ್ ಲಂಬಾಣಿ ರವರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಮೆಚ್ಚಿ ಬಹುಮಾನ ಘೋಷಿಸಲಾಗಿದೆ.