DHARWAD:ಬಾವಿಕಟ್ಟಿ ಪ್ಲಾಟಿಗೆ ಮಳೆ ನೀರು. ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಮನವಿ.

ಬಾವಿಕಟ್ಟಿ ಪ್ಲಾಟಿಗೆ ಮಳೆ ನೀರು. ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿಗೆ ಮನವಿ.
ಧಾರವಾಡ: ಧಾರವಾಡ ನಗರದ ವಾರ್ಡ್ ನಂಬರ್ 12 ರಲ್ಲಿರುವ ಭಾವಿಕಟ್ಟಿ ಪ್ಲಾಟನಲ್ಲಿ ಸಾಮಾನ್ಯವಾಗಿ ಬಡ ಜನರು ವಾಸಿಸುತ್ತಿದ್ದು,  ಸದರಿ ವಡ್ಡನಕೆರೆಯಿಂದ ನಗರದ ವಿವಿಧ ಬಡಾವಣೆಗಳಿಂದ ಬರುವ ಒಳಚರಂಡಿ ನೀರಿನ ಕಾಲುವೆ ಹಾಯ್ದು ಸದರಿ ಕಾಲುವೆಯಿಂದ ಪ್ರತಿ ವರ್ಷ ಮಳೆಯಿಂದಾಗಿ ಅಲ್ಲಿರುವ ಮನೆಗಳಿಗೆ ಒಳಚರಂಡಿ ನೀರು ನುಗ್ಗುತ್ತದೆ. ಇದರಿಂದ ಅಲ್ಲಿಯ ನಿವಾಸಿಗಳಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ ಆದಕಾರಣ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ  ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ನಗರದ ಕೆಸಿಡಿ, ಮಾಳಮಡ್ಡಿ, ಬಾರಾಕೋಟ್ರಿ,‌ಶಿವಗೀರಿ ಸೇರಿದಂತೆ ಹಲವು ಬಡಾವಣೆ ನೀರು ಇಲ್ಲಿಗೆ ಬರುತ್ತದೆ. ಈ ಬಾರಿ ಆದ ಮಳೆಗೆ ಮನೆಯಲ್ಲಿ ಇದ್ದ ಕಾಳು ಕಡಿ ಕೂಡಾ ಹಾಳಾಗಿದ್ದಕ್ಕೆ ಊಟ ಮಾಡದೇ ಜನ ಮಳೆ‌ ನೀರು ಹೊರಹಾಕುವಂತೆ  ಆಗಿತ್ತು. ಯಾವುದೇ ಜನಪ್ರತಿನಿಧಿ ಕೂಡಾ ಸ್ಥಳಕ್ಕೆ ಬಾರದೇ ಇದು ಇರುವದು ಕೂಡಾ ಇವರ ನಿಷ್ಕಾಳಜಿ ಎದ್ದು ಕಾಣುತ್ತಿದೆ. ಹೀಗಾಗಿ ಅಧಿಕಾರಿಗಳು ಇದನ್ನ ಶಾಶ್ವತವಾಗಿ ಪರಿಹಾರ ಮಾಡಬೇಕು ಎಂದು ಮನವಿ ಮಾಡಲಾಯಿತು. 
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಜಗದೀಶ ಜಾದವ, ಉಮೇಶ ಶಿಂಧೆ ಮಂಜುನಾಥ ಅಂಗಡಿ, ಕೂತ್ಬುದ್ದೀನ್ಬ ಅಳವಾಡಿಕರ, ರಾಮಚಂದ್ರ ಇಂಗಳೆ, ಗುರುಸಿದ್ದಪ್ಪ ಅವ್ವನವರ ರಾಜೇಶ್ವರಿ ಹೊಸೂರ, ಅಂಬರೀಶ ಹಲಗಿ, ಈರಣ್ಣ ಪಾಟೀಲ, ನೀಲಮ್ಮ ಮರವಳ್ಳವರ,  ವಿನೋದ್ ಕಾಂಬ್ಳೆ, ಬಿ,ಎಸ ಪಾಟೀಲ. ಕುತೇಬಾಡಿ ಮುನವಳ್ಳಿ ಸಂತೋಷ ಕೊರವರ ಕೃಷ್ಣ ಕಾಪ್ಸೆ ಬಸವಣ್ಣಪ್ಪ ಬೆಟ್ಗೇರಿ ಮುಂತಾದವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال