DHARWAD:21 ರಂದು ಕಾರ್ತಿಕ ಪಾದಯಾತ್ರಾ ದಿಂಡಿಸೋಹಳಾ ಧಾರವಾಡದಿಂದ ಶ್ರೀ ಕ್ಷೇತ್ರ ಪಂಢರಪುರಕ್ಕೆ.

21 ರಂದು  ಕಾರ್ತಿಕ ಪಾದಯಾತ್ರಾ ದಿಂಡಿಸೋಹಳಾ    ಧಾರವಾಡದಿಂದ  ಶ್ರೀ ಕ್ಷೇತ್ರ ಪಂಢರಪುರಕ್ಕೆ.
ಧಾರವಾಡ 19:    ಸಂತರಾದ  ಶ್ರೀ ಗುರು ಬಾಬಾಸಾಹೇಬ ಅಜರೇಕರ ಫಡ, ಪಂಢರಪುರ, ಶ್ರೀ ಗುರು ತುಕಾರಾಮ ಏಕನಾಥ ಕಾಳೆ ಮಾವುಲಿ, ತುಕಾರಾಮ ಅಣ್ಣಾಧಾಯಪುಲೆ,  ಜ್ಯೋತಿರ್ಲಿಂಗಪ್ಪಾ ಭುಜಂಗಪ್ಪಾ ಗಾಯಡೋಳೆ (ಮುನವಳ್ಳಿ),  ಗೋವಿಂದಪ್ಪ ಫಕ್ಕೀರಪ್ಪ ನವಲೆ (ಗುರ್ಲಹೊಸೂರ)  ಕಾಶೀನಾಥ ಉಮ್ಮಾಜಿ ಟೆಕಾರೆ ಇವರ ಕೃಪಾಶೀರ್ವಾದದಿಂದ ಕಾರ್ತಿಕ ಪಾದಯಾತ್ರಾ ದಿಂಡೀ ಸೋಹಳಾ ಅನೇಕ ವರ್ಷಗಳಿಂದ ಅವ್ಯಾಹತವಾಗಿ ಇವತ್ತಿನವರೆಗೂ ನಡೆದು ಬಂದಿದೆ. ಭಾವಿಕಭಕ್ತರು ಈ ಪವಿತ್ರ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಪಾಂಡುರಂಗನ ಕೃಪೆಗೆ ಪಾತ್ರರಾಗಬೇಕಾಗಿ.        ವಿನಂತಿ.              ಈ ದಿಂಡೀ ಯಲ್ಲಿ ಭಾಗವಹಿಸುವ ಭಕ್ತರು ದಿ 20 ರಂದು ಶ್ರೀ ಲಕ್ಷ್ಮೀನಾರಾಯಣ ಮಂದಿರ ಧಾರವಾಡ  ಅಗಮಿಸಿ 21 ರ ಬೆಳಿಗ್ಗೆ  ಬೆಳಿಗ್ಗೆ 6 ಘಂಟೆಗೆ ಹೊರಡುತ್ತದೆ.   ವಿಶೇಷ ಸೂಚನೆ : ರವಿವಾರ ದಿ. 20 ರಂದು ಸಂಜೆ ಧಾರವಾಡದ ಶ್ರೀ ಲಕ್ಷ್ಮೀನಾರಾಯಣ ಮಂದಿರದಲ್ಲಿ ಎಲ್ಲರೂ ಹಾಜರ ಇರಬೇಕು. ಈ ದಿಂಡೀ ಸೋಹಳಾದಲ್ಲಿ ಭಾಗವಹಿಸುವವರು ತಾಳ, ತಂಬಿಗೆ, ತಾಟು, ವಾಟೆ, ಹಾಸು-ಹೊದಿಕೆ ಹಾಗೂ ಬ್ಯಾಟರಿ, ಔಷಧಿ ಇವುಗಳನ್ನು ಅಗತ್ಯ ತರಬೇಕು. ಎಲ್ಲರೂ ನಮ್ರರಾಗಿ ವ್ಯವಸ್ಥಾಪಕರು ಮತ್ತು ಗುರುಹಿರಿಯರು ಹೇಳಿದಂತೆ ನಡೆಯಬೇಕಾಗಿ ವಿನಂತಿ, ಮತ್ತು ವೀಣೇಕರಿಯ ಸಂಗಡವೇ ಎಲ್ಲರೂ ಇರಬೇಕೆಂದು ಧಾರವಾಡಕರ  ತುಕಾರಾಮ ಅಣ್ಣಾ ಧಾಯಮಲೆ, ಆಜರೇಕರ ಭಜನಾ ಮಂಡಳಿ, ಶ್ರೀ ಲಕ್ಷ್ಮೀನಾರಾಯಣ ಮಂದಿರ ಧಾರವಾಡ ಇವರು ವಿನಂತಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ 
 9916652427, 9448875343
, 7411124616, 7204639299, 9380349629, 9741278094, 7483771314
ಈ ಮೋ ಸಂಖ್ಯೆಯಲ್ಲಿದ್ದವರನ್ನು ಸಂಪಕಿ೯ಸಲು ಕೂರಲಾಗಿದೆ.
ನವೀನ ಹಳೆಯದು

نموذج الاتصال