26, 27 ರಂದು ಮೈಸೂರಿನಲ್ಲಿ ಎಐಯುಟಿಯುಸಿ ಸಂಘಟಿತ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ .

26, 27   ರಂದು ಮೈಸೂರಿನಲ್ಲಿ ಎಐಯುಟಿಯುಸಿ ಸಂಘಟಿತ 4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ .
 ಧಾರವಾಡ  19 :
ಇಂದು ಪತ್ರಿಕಾ ಗೋಷ್ಠಿಯಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಿ. ನಾಗಲಕ್ಷ್ಮಿಯವರಿಂದ ಪತ್ರಿಕಾ ಗೋಷ್ಠಿಯಲ್ಲ ತಿಳಸಿದರು.

 ಕೇಂದ್ರೀಯ ಕಾರ್ಮಿಕ ಸಂಘಟನೆ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಕರ್ನಾಟಕ ರಾಜ್ಯ ಸಮಿತಿಯು 26, 27ರಂದು ಅಕ್ಟೋಬರ್, 2024 ಎರಡು ದಿನಗಳ ಕಾಲ 4 ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಮೈಸೂರಿನಲ್ಲಿ ಸಂಘಟಿಸುತ್ತಿದೆ. ಆಳುವ ಬಂಡವಾಳಶಾಹಿ ವರ್ಗದ ಕ್ರೂರ ಶೋಷಣೆಯ ವಿರುದ್ಧ ಕಾರ್ಮಿಕ ಹೋರಾಟವನ್ನು ಬಲಪಡಿಸಲು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಕಾರ್ಮಿಕ ಚಳುವಳಿಯನ್ನು  ಬೆಳೆಸಲು ಈ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ.  
ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೆ ಅಧಿಕಾರಕ್ಕೆ ಬಂದಿರುವ ಎಲ್ಲಾ ಸರ್ಕಾರಗಳು ದೇಶದ ಏಕಸ್ವಾಮ್ಯ ಬಂಡವಾಳಗಾರರ ಹಿತವನ್ನು ರಕ್ಷಿಸಲು ಆರ್ಥಿಕ ಕೈಗಾರಿಕಾ ನೀತಿಗಳನ್ನು ಅನುಸರಿಸುತ್ತ ಬಂದಿವೆ. ಖಾಸಗೀಕರಣ, ಜಾಗತೀಕರಣ ಹಾಗೂ ಉದಾರೀಕರಣ ಕ್ರಮಗಳ ಮೂಲಕ ಸಾರ್ವಜನಿಕ ಉದ್ಧಿಮೆಗಳು ದೇಶದ ನೈಸರ್ಗಿಕ ಸಂಪತ್ತನ್ನು ಕೆಲವೇ ಕಾರ್ಪೋರೇಟ್ ಮನೆತನಗಳಿಗೆ ಧಾರೆಯೆರೆಯಲಾಗಿದೆ. ಅಲ್ಪ ವೇತನದಲ್ಲಿ ದುಡಿಯುವ ಜನರ ಶ್ರಮವನ್ನು ಶೋಷಿಸಲಾಗುತ್ತಿದೆ. ಕೇವಲ 5% ಶ್ರೀಮಂತ ಜನರು, ದುಡಿಯುವ ಜನರ ಕಠಿಣ ಪರಿಶ್ರಮದಿಂದ ಸೃಷ್ಟಿಯಾದ ದೇಶದ 60% ಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಆರ್ಥಿಕವಾಗಿ ತಳಮಟ್ಟದಲ್ಲಿರುವ ಜನಸಂಖ್ಯೆಯ 50% ರಷ್ಟು ಜನರು ತಾವೇ ಸೃಷ್ಟಿಸಿದ ರಾಷ್ಟ್ರೀಯ ಸಂಪತ್ತಿನಲ್ಲಿ 5% ಅನ್ನು ಸಹ ಹೊಂದಿಲ್ಲ. ವೇತನಗಳು ಬೆಲೆ ಏರಿಕೆಗೆ ತಕ್ಕಂತೆ ಏರುತ್ತಿಲ್ಲ. ಖಾಯಂ ಉದ್ಯೋಗ ಮಾಯವಾಗಿ ಸೇವಾ ಅಭದ್ರತೆ ದುಡಿಯುವವರನ್ನು ಎಲ್ಲಾ ಕಡೆ ಕಾಡುತ್ತಿದೆ. ಜೊತೆಗೆ ಅವರ ಕಷ್ಟಾರ್ಜಿತ ಹಕ್ಕುಗಳನ್ನು ಸಹ ಲೇಬರ್ ಕೋಡ್‌ಗಳ ಮೂಲಕ ಹರಣ ಮಾಡಲಾಗುತ್ತಿದೆ. ಇಂತಹ ಭೀಕರ ಶೋಷಣೆ ವಿರುದ್ಧ ದುಡಿಯುವವರನ್ನು ಸಂಘಟಿಸಿ ಎಐಯುಟಿಯುಸಿ ಚಳುವಳಿಯನ್ನು ಕಟ್ಟುತ್ತಿದೆ ಎಂದರು  ಅಂತಿಮವಾಗಿ ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತುಹಾಕಿ ಅದರ ಜಾಗದಲ್ಲಿ ಶ್ರಮಿಕರ ರಾಜ್ಯವನ್ನು ಸ್ಥಾಪಿಸುವುದು ಎಐಯುಟಿಯುಸಿ ಧ್ಯೇಯವಾಗಿದೆ. ಈ ದಿಸೆಯಲ್ಲಿ ಇದೀಗ 4ನೇ ರಾಜ್ಯ ಸಮ್ಮೇಳನ ಬಂದಿದೆ.
ಇದರ ಭಾಗವಾಗಿ ಕಾರ್ಮಿಕರ ಬೃಹತ್ ಮೆರವಣಿಗೆಯನ್ನು, ಬೆಳಿಗ್ಗೆ 11ಕ್ಕೆ ನಂಜರಾಜ ಅರಸ್ ಛತ್ರದಿಂದ ಟೌನ್ ಹಾಲ್ ಪ್ರಾಂಗಣದವರೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಗಾರಿಕಾ ಕಾರ್ಮಿಕರು, ವೈದ್ಯಕೀಯ ಕಾಲೇಜು, ಸರ್ಕಾರಿ ಹಾಸ್ಟೆಲ್, ವಿಶ್ವವಿಧ್ಯಾಲಯ ಹಾಗೂ ಇನ್ನಿತರ ಕ್ಷೇತ್ರಗಳ ಗುತ್ತಿಗೆ ಕಾರ್ಮಿಕರು, ಗಣಿ ಕಾರ್ಮಿಕರು, ವಿದ್ಯುತ್ ಕ್ಷೇತ್ರದ ನೌಕರರು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು, ಇನ್ನಿತರ ಕ್ಷೇತ್ರಗಳ ಸಾವಿರಾರು ಕಾರ್ಮಿಕರು ಬಹಿರಂಗ ಹಾಗೂ ಪ್ರತಿನಿಧಿ ಅಧಿವೇಶನಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಕ್ಟೋಬರ್ 26 ರಂದು ಮಧ್ಯಾಹ್ನ 12ಕ್ಕೆ ಸಮ್ಮೇಳನದ ಬಹಿರಂಗ ಅಧಿವೇಶನವು ಟೌನ್ ಹಾಲ್ ಮೈದಾನದಲ್ಲಿ ನಡೆಯಲಿದ್ದು, ಇದರ ಉದ್ಘಾಟನೆಯನ್ನು ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕೆ.ರಾಧಾಕೃಷ್ಣ ರವರು ನೆರವೇರಿಸಲಿದ್ದಾರೆ. ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್‌ದಾಸ್ ಗುಪ್ತ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ರಾಜ್ಯ ಅಧ್ಯಕ್ಷರಾದ ಕೆ.ಸೋಮಶೇಖರ್ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ್ ಯಾದಗಿರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರಾಜ್ಯ ಸೆಕ್ರಟೇರಿಯಟ್ ಸದಸ್ಯರಾದ ಚಂದ್ರಶೇಖರ್ ಮೇಟಿ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರು ಆದ  ಉಗ್ರನರಸಿಂಹೇಗೌಡ ಸ್ವಾಗತಿಸಲಿದ್ದಾರೆ. 
ನಿವೃತ್ತ ಪ್ರಾಧ್ಯಾಪಕರು, ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಫ್ರೊ.ಕಾಳಚನ್ನೇಗೌಡ ರವರು ಸೂಕ್ತಿ ಹಾಗೂ ಛಾಯಚಿತ್ರ
   ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದರು .
ಅಕ್ಟೋಬರ್ 26, ಸಂಜೆ 5 ಕ್ಕೆ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಪ್ರತಿನಿಧಿ ಅಧಿವೇಶನವು ನಡೆಯಲಿದ್ದು, ಎಸ್.ಯು.ಸಿ.ಐ (ಸಿ) ರಾಜ್ಯ ಕಾರ್ಯದರ್ಶಿಗಳಾದ ಕಾ.ಕೆ.ಉಮಾರವರು ಮುಖ್ಯ ಅತಿಥಿಗಳಾಗಿ ಮಾತನಾಡಲಿದ್ದಾರೆಹಾಗೆಯೇ ಇತರೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಮುಖಂಡರು ಸೋದರ ಪ್ರತಿನಿಧಿಗಳಾಗಿ ಆಗಮಿಸಿ ಶುಭ ಹಾರೈಸಲಿದ್ದಾರೆ.

ಈ ಸಮ್ಮೇಳನವು ಸಂಘಟನಾತ್ಮಕ ವರದಿಯ ಬಗ್ಗೆ ಹಾಗೂ ಬಹು ದೊಡ್ಡ ಸಂಖ್ಯೆಯಲ್ಲಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನದ ಜೊತೆಗೆ ಕಾರ್ಮಿಕ ಸ್ಥಾನಮಾನ ನಿರಾಕರಿಸುತ್ತಿರುವ ಸರ್ಕಾರದ ಧೋರಣೆ ಬಗ್ಗೆ ಚರ್ಚಿಸಲಿದೆ. ಸರ್ಕಾರಗಳ ರೈಲ್ವೇ, ವಿದ್ಯುತ್ ಉತ್ಪಾದನೆ-ಸರಬರಾಜು ಇತ್ಯಾದಿ ವಲಯಗಳಲ್ಲಿ ಖಾಸಗೀಕರಣ ಕ್ರಮಗಳು, ಮೂಲ ಉದ್ದಿಮೆಗಳಲ್ಲಿ ಸಾರ್ವಜನಿಕ ಬಂಡವಾಳ ಹಿಂತೆಗೆತ ಮುಂತಾದ ಬೆಳವಣಿಗೆಗಳಿಂದ ಉಂಟಾಗುವ ದುಷ್ಪರಿಣಾಮಗಳು, ದುಡಿಯುವ ಜನರ ಸೇವಾ ಪರಿಸ್ಥಿತಿಗಳಲ್ಲಾಗುತ್ತಿರುವ ದುಷ್ಪರಿಣಾಮಗಳು, ಕೈಗಾರಿಕಾ ವಲಯದಲ್ಲಿ ಅದರಲ್ಲೂ ಐಟಿ ಉದ್ಯಮದಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ದುಡಿಮೆ ಅವಧಿ ವಿಸ್ತರಣೆ, ಮಹಿಳೆಯರಿಗೆ ರಾತ್ರಿ ಪಾಳಿ ಕ್ರಮಗಳ ಬಗ್ಗೆ ಸಮ್ಮೇಳನ ಚರ್ಚಿಸಲಿದೆ. ವಿವಿಧ ಇಲಾಖೆಗಳಲ್ಲಿ ಖಾಸಗೀ ವಲಯದಲ್ಲಿ ಅನುಸರಿಸಲಾಗುತ್ತಿರುವ ಗುತ್ತಿಗೆ  ಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸುವ ಬಗ್ಗೆ- ಶಾಸನಬದ್ಧ ಸೌಲಭ್ಯಗಳನ್ನು ಕೊಡದೇ ವಂಚಿಸುತ್ತಿರುವ ಹೊರಗುತ್ತಿಗೆ ಏಜೆನ್ಸಿಗಳನ್ನು ನಿಮೂಲನೆ ಮಾಡುವ ಬಗ್ಗೆ, ಸಹ ಸ್ಪಷ್ಟ ಯೋಜನೆ ರೂಪಿಸುವಂತೆ ನಿಲುವಳಿ ತಳೆಯಲಾಗುವುದು. ಬೆಲೆ ಏರಿಕೆ, ಹಣದುಬ್ಬರಗಳಿಂದ ತತ್ತರಿಸುವ ದುಡಿಯುವ ಜನರ ಜೀವನ ಸಂಕಟಮಯವಾಗುತ್ತಿದೆ. ಅದಕ್ಕೆ ಕನಿಷ್ಠ ವೇತನವನ್ನು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಕನಿಷ್ಠ 35,000 ರೂ ನಿಗದಿಪಡಿಸುವ ಬಗ್ಗೆ ಸರ್ಕಾರ ಮೀನಮೇಷ ಏಣಿಸುತ್ತಿದೆ. ಇಎಸ್‌ಐ-ಪಿಎಫ್ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ, ಪ್ರಸ್ತುತ ಇರುವ ಇಎಸ್‌ಐ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವಂತೆ - ಪ್ರತಿ ತಾಲ್ಲೂಕುಗಳಲ್ಲಿ ಇಎಸ್‌ಐ ಡಿಸ್ಪೆನ್ಸರಿ ಆರಂಭಿಸಿವ ಬಗ್ಗೆ, ಪಿಂಚಣಿ ನೀತಿ ಬಗ್ಗೆ,  ಮುಂಚಿನಂತೆ ಪ್ರತ್ಯೇಕ ಕಾರ್ಮಿಕ ನ್ಯಾಯಾಲಯ ಸ್ಥಾಪಿಸುವಂತೆ ಆಗ್ರಹಿಸುವ ಬಗ್ಗೆ ಚರ್ಚೆಗಳು ನಡೆಯಲಿದೆ ಎಂದರು.          ಗಿಗ್ ಕಾರ್ಮಿಕರ ಬಗ್ಗೆ ದೇಶದಲ್ಲೇ ಪ್ರಥಮ ಬಾರಿಗೆ ಯೂನಿಯನ್ ಕಟ್ಟಿ ಅವರ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕಾಯ್ದೆ ರೂಪಿಸಿವಂತೆ ಒತ್ತಾಯಿಸಲಾಗುವುದು.
ಇನ್ನೊಂದೆಡೆ ಕೇಂದ್ರದಲ್ಲಿ ತರಲಾದ ಲೇಬರ್ ಕೋಡ್‌ಗಳು ಕಾರ್ಮಿಕರು ಸಂಘ ಕಟ್ಟುವ ಹಕ್ಕು, ಚೌಕಾಸಿ ಹಕ್ಕು, ಮುಷ್ಕರ ಹಕ್ಕುಗಳನ್ನು ಹರಣ ಮಾಡುವ ತಿದ್ದುಪಡಿಗಳ ಮಾರಕ ಪರಿಣಾಮಗಳ ಬಗ್ಗೆ ಚರ್ಚಿಸುವ ಮೂಲಕ ರಾಜ್ಯದಲ್ಲಿ ಸರ್ಕಾರವು ಈ ಕಾಯ್ದೆಗಳನ್ನು ನಿಯಮಗಳನ್ನಾಗಿ ರೂಪಿಸದಂತೆ ಒತ್ತಾಯಿಸಲು ಹೋರಾಟವನ್ನು ರೂಪಿಸಲು, ಬಲಿಷ್ಠ ಐಕ್ಯ ಚಳುವಳಿಯನ್ನು ರೂಪಿಸಲು  ನಿರ್ಧಾರಗಳನ್ನು ಯೋಜನೆಗಳನ್ನು ಕೈಗೊಳ್ಳಲಾಗುವುದು.

ಕಾರ್ಮಿಕ ಚಳುವಳಿಯನ್ನು ಒಟ್ಟಾರೆ ಶಿಸ್ತುಬದ್ಧಗೊಳಿಸಿ, ಸ್ಪಷ್ಟ ವೈಚಾರಿಕತೆಯೊಂದಿಗೆ ಇನ್ನಷ್ಟು ಸಮರಶೀಲಗೊಳಿಸಲು ಈ ಸಮ್ಮೇಳನ ಸ್ಫೂರ್ತಿಯಾಗಲಿದೆ. ಈ ಸಮ್ಮೇಳನದ ಯಶಸ್ಸಿಗಾಗಿ ಮೈಸೂರಿನ ಹೆಸರಾಂತ ಗಣ್ಯರು, ಪ್ರಗತಿಪರರನ್ನೊಳಗೊಂಡ ಅನೇಕ ಜನರ ಶುಭಾಕಾಂಕ್ಷಿಗಳ ಸಮಿತಿ ಮತ್ತು ಸ್ವಾಗತ ಸಮಿತಿಯು ರಚನೆಯಾಗಿದೆ , ರಾಜ್ಯದ ಸಮಸ್ತ ದುಡಿಯುವ ಜನರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂದು ಹಾಗೂ ಯಶಸ್ವಿಗೊಳಿಸಬೇಕೆಂದು ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡುತ್ತದೆ ಎಂದರು.
   ಗಂಗಾಧರ್ ಬಡಿಗೇರ್,ಡಿ.ನಾಗಲಕ್ಷ್ಮಿ ಅಧ್ಯಕ್ಷರು, ಎಐಯುಟಿಯುಸಿ ಧಾರವಾಡ ಜಿಲ್ಲಾ ಮತ್ತು ರಾಜ್ಯ ಸಮಿತಿ ಸದಸ್ಯರು,  ಭುವನಾ, ಉಪಾಧ್ಯಕ್ಷರು, ಎಐಯುಟಿಯುಸಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಖಂಡರು.
ನವೀನ ಹಳೆಯದು

نموذج الاتصال