ಮಳೆ ಹಾನಿ ಇನ್ನೊಂದು ವಾರದಲ್ಲಿ ಸಮಗ್ರ ವರದಿ - ಸಚಿವ ಲಾಡ್

ಮಳೆ ಹಾನಿ ಇನ್ನೊಂದು ವಾರದಲ್ಲಿ ಸಮಗ್ರ ವರದಿ - ಸಚಿವ ಲಾಡ್ 
      ಧಾರವಾಡ:----ಧಾರವಾಡ ಜಿಲ್ಲೆಯಲ್ಲಿ ಮಳೆಯಿಂದ ಆದ ಹಾನಿ ಬಗ್ಗೆ ಇನ್ನೊಂದು ವಾರದಲ್ಲಿ ಸಮಗ್ರ ವರದಿ ಬರಲಿದ್ದು , ವರದಿ ನಂತರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು . 

     ನಗರದಲ್ಲಿ ಮಾತನಾಡಿರುವ ಅವರು , ಧಾರವಾಡ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ ಹಾಗೂ 400 ಮನೆಗಳು ಹಾನಿಗೀಡಾಗಿವೆ ಎಂಬ ಪ್ರಾಥಮಿಕ ವರದಿ ಇದೆ . ಇನ್ನೊಂದು ವಾರದಲ್ಲಿ ಮಳೆ ಹಾನಿ ಕುರಿತು ಜಿಲ್ಲಾಡಳಿತ ಸಮಗ್ರ ವರದಿ ನೀಡಲಿದ್ದು , ನಂತರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ನವೀನ ಹಳೆಯದು

نموذج الاتصال