DHARWAD:ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ನೈತಿಕ‌ಹೊಣೆ ಹೊತ್ತು ರಾಜೀನಾಮೆ ನೀಡಲು ಆಗ್ರಹ

ಸಿಎಂ ಸಿದ್ದರಾಮಯ್ಯ ಮುಡಾ ಹಗರಣದ ನೈತಿಕ‌ಹೊಣೆ ಹೊತ್ತು ರಾಜೀನಾಮೆ ನೀಡಲು ಆಗ್ರಹ.
ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ತಿಪ್ಪಣ್ಣ ಮಜ್ಜಗಿ ಹಾಗೂ  ಮಾಜಿ ಮಹಾಪೌರ ಈರೇಶ ಅಂಚಟಗೇರಿ ಜಂಟಿ ಪತ್ರಿಕಾ ಹೇಳಿಕೆ.

ಹುಬ್ಬಳ್ಳಿ-ಧಾರವಾಡ

ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ತಮ್ಮ ಸಂವಿಧಾನಬದ್ದ ಅಧಿಕಾರ ಚಲಾಯಿಸಿ ಮುಡಾ ಹಗರಣದಲ್ಲಿ ನೇರವಾಗಿ ಭಾಗಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡಿದ್ದು ಸ್ವಾಗತಾರ್ಹವಾಗಿದೆ.  ರಾಜ್ಯಪಾಲರು ಭ್ರಷ್ಟಾಚಾರದಲ್ಲಿ ಮುಳುಗಿದ ರಾಜ್ಯ ಸರಕಾರದ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನಗೆ ಅನುಮತಿ ನೀಡಿದ್ದು,  ಕಾರಣ ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲು ಸಿದ್ದರಾಮಯ್ಯನವರಿಗೆ ಯಾವುದೇ ಹಕ್ಕಿಲ್ಲ.  ಈ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ.ಯಡಿಯೂರಪ್ಪನವರ ವಿರುದ್ಧ ಆರೋಪ ಬಂದಾಗ ಕೂಡಲೇ ಪದತ್ಯಾಗ ಮಾಡಿ ತಮ್ಮ ಮೇಲಿನ ಆರೋಪಗಳನ್ನ ಕಾನೂನಾತ್ಮಕವಾಗಿ ಎದುರಿಸಿ ನಂತರ ಮುಖ್ಯಮಂತ್ರಿಯಾಗಿದ್ದು ಇತಿಹಾಸ ಕೂಡ ನಮ್ಮ ಕಣ್ಣು ಮುಂದಿದೆ. 


 ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರಿವು ಇರಬೇಕು.ಈಗಾಗಲೇ ರಾಜ್ಯ ಸರಕಾರ ದಿವಾಳಿ ಅಂಚಿನಲ್ಲಿದ್ದು, ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು,  ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣ ಬೆಳಕಿಗೆ ಬಂದಿದೆ. 

 ಇಂತಹ ಭ್ರಷ್ಟ ಸರಕಾರದ ಮುಖ್ಯಮಂತ್ರಿಯಾಗಿ ಮುಂದುವರೆಯಲು ಯಾವುದೇ ನೈತಿಕತೆ ಕೂಡಾ ಇಲ್ಲಾ.  ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ನುಡಿದ ಮುಖ್ಯಮಂತ್ರಿ ಇಂದು ಭ್ರಷ್ಟಾಚಾರ ಎನ್ನುವ ಮಸಿಯನ್ನೆ ತಮ್ಮ ಮೇಲೆ ಸುರಿದುಕೊಂಡಿದ್ದು ಕಾರಣ ಕೂಡಲೆ ನೈತಿಕತೆ ಹೊತ್ತು ತತ್‌ಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ,  ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರು ತಿಪ್ಪಣ್ಣ ಮಜ್ಜಗಿ ಹಾಗೂ  ಮಾಜಿಮಹಾಪೌರರು ಈರೇಶ ಅಂಚಟಗೇರಿ ಆಗ್ರಹಿಸಿದ್ದಾರೆ.

ನವೀನ ಹಳೆಯದು

نموذج الاتصال