21 ಕ್ಕೆ
185 ನೇ ವಿಶ್ವ ಛಾಯಾಗ್ರಹಣ ದಿನಾಚಾರಣೆ.
ಧಾರವಾಡ 19 :
ಛಾಯಾಗ್ರಹಣದ ದಂತ ಕಥೆ ಸರ್ ಡರ್ ರವರ ನೆನಪಿನಲ್ಲಿ ವಿಶ್ವದಾದ್ಯಂತ ಅಗಷ್ಟ 19 ರಂದು ಛಾಯಾಗ್ರಹಣ ದಿನಾಚಾರಣೆ ಆಚರಿಸಲಾಗುತ್ತದೆ. ಅದರಂತೆ ಪ್ರತಿ ವರ್ಷ ಧಾರವಾಡ ಫೋಟೊ ಮತ್ತು ವಿಡಿಯೋಗ್ರ್ರಾ ಸಂಘ (ರಿ) ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚಾರಣೆ ಆಚರಣೆ ಮಾಡುತ್ತ ಬಂದಿರುತ್ತೇವೆ. ಈ ವರ್ಷ 19 ನೇ ತಾರೀಖಿನಂದು ರಕ್ಷಾಬಂಧನ ಇರುವ ಕಾರಣ 185 ನೇ ವಿಶ್ವ ಛಾಯಾಗ್ರಹಣ ದಿನಾಚಾರಣೆಯನ್ನ 21ನೇ ತಾರೀಖು ಆಲೂರು ವೆಂಕಟರಾವ ಸಭಾಭವನದಲ್ಲಿ ಆರಿಸುತ್ತಿದ್ದೇವೆ ಎಂದು ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ ಸಂಘದ
ಅಧ್ಯಕ್ಷ ರಾಹುಲ್ ದತ್ತಪ್ರಸಾರ್ ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಕಾರ್ಯಕ್ರಮದ ಉದ್ಘಾಟನೆ ಧಾರವಾಡ ರಂಗಾಯಣ ನಿರ್ದೇಶಕ
ರಾಜು ತಾಳಿಕೋಟಿ ಉದ್ಘಾಟಿಸಲಿದ್ದು ,
ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ಮಂಜುನಾಥ ಸುಳ್ಳೋಳ್ಳಿ ಯವರು ಆಗಮಿಸಲಿದ್ದಾರೆ. ಸಂಘದ ಆಜೀವ ಸದಸ್ಯರುಗಳಾದ ಪೃಥ್ವಿರಾಜ ಮಿಸ್ಕಿನ್, ಮುರಲಿದರ ಮಲಜಿ ಹಾಗೂ ಶ್ರೀನಿವಾಸ ಮಲಜಿ ರವರು ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಫೋಟೊ ಮತ್ತು ವಿಡಿಯೋಗ್ರಾರ್ ಸಂಘದ ಅಧ್ಯಕ್ಷರಾದ ರಾಹುಲ್ ದತ್ತಪ್ರಸಾದ ರವರು ವಹಿಸಲಿದ್ದಾರೆ.
ಈ ಸಂಧರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ಆನೆಗುಂದಿ, ಮಿಲಿಂದ ವಿಷ್ಣುಪಂತ ಪಿಸೆ ಹಾಗೂ ಶಿವಲಿಂಗ ಪಾಟೀಲ ರವರಿಗೆ 'ಹೆಮ್ಮಯ ಧಾರವಾಡಿಗೆ ಬಿರುದು ನೀಡಿ ಸನ್ಮಾನಿಸಲಾಗುವುದು. ಮತ್ತು 6 ಜನ ಹಿರಿಯ ಅನುಭವಿ ಛಾಯಾಗ್ರಾಹಕರಿಗೆ ಪ್ರೀತಿಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಛಾಯಾಗ್ರಾಹಕರು ಹಾಗೂ ಅವರ ಕುಟುಂಬದವರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ತಿಳಸಿದರು .
ಪತ್ರಿಕಾ ಗೋಷ್ಠಿಯಲ್ಲಿ . ಕಾರ್ಯಧ್ಯಕ್ಷರು ರವಿ ಯಾಲಕ್ಕಿಶೆಟ್ಟರ, ಉಪಾಧ್ಯಕ್ಷರು ಲಕ್ಷಣ ದಾನಪ್ಪಗೌಡರ, ಆಜೀವ ಸಮಿತಿಯ ಸದಸ್ಯರಾದ ವೃತ್ತಿರಾಜ ಮಿಸ್ಕಿನ್ ಮುರಳಿ ಮಲಜಿ, ಶ್ರೀನಿವಾಸ ಮಲಜಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.