ನಾರಾಯಣ ಹಾರ್ಟ ಸೆಂಟರ್ ಧಾರವಾಡದಲ್ಲಿ ಚಿಕ್ಕ ರಂಧ್ರದ ಮೂಲಕ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಮೈಲುಗಲ್ಲು ಸಾಧಿಸಿದೆ.
ಧಾರವಾಡ 14 : ಧಾರವಾಡದ ನಾರಯಣ ಹಾರ್ಟ ಸೆಂಟರ್ (SDMNH) ಟ್ರಿಷಲ್ ವೆಸೆಲ್ ಕಾಯಿಲೆಯಿಂದ ಬಳಲುತ್ತಿರುವ 57 ವರ್ಷದ ಹಿರಿಯ ಭರತ್ ಸಿಂಗ ರಜಪೂತ ವಯಸ್ಸು 57 ಕೋರಿಯರ್ ಕೆಲಸ ಮಾಡುತ್ತಿದ್ದ
ಪುರುಷ ರೋಗಿಗೆ ಚಿಕ್ಕ ರಂಧ್ರದ ಮೂಲಕ ಪರಿಧಮನಿಯ ಬೈಪಾಸ ಶಸ್ತ್ರ ಚಿಕಿತ್ಸೆ (CABG) ಯನ್ನು ಯಶಸ್ವಿಯಾಗಿ ಮಾಡಿರುವ ಕುರಿತು ಹೆಮ್ಮೆಯಿಂದ ಘೋಷಿಸಿತು. ಈ ಸಾಧನೆಯ ಹೆಗ್ಗುರುತು ಸ್ಥಳೀಯವಾಗಿ ಸುಧಾರಿತ ಹೃದಯ ಆರೈಕೆಯನ್ನು ಒದಗಿಸುವ ಆಸ್ಪತ್ರೆಯ ಬದ್ಧತೆಯನ್ನು ಪ್ರತಿಬಿಂಬಿಸುವದಲ್ಲದೇ ಇಂತಹ ಚಿಕಿತ್ಸೆಗಳಿಂದ ರೋಗಿಗಳು ದೂರದ ನಗರಗಳಿಗೆ ಪ್ರಯಾಣಿಸುವ ಅಗತ್ಯತೆಯನ್ನು ಸಹ ನಿವಾರಿಸುತ್ತದೆ.
ಶಶಿಕುಮಾರ ಪಟ್ಟಣ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು ಎಸಡಿಎಮ್ ನಾರಾಯಣ ಹಾರ್ಟ ಸೆಂಟರ್ ಧಾರವಾಡ ವರದಿಗಾರರನ್ನು ಉದ್ದೇಶಿಸಿ ಮಾತನಾಡಿ ಹೃದಯ ಶಸ್ತ್ರಚಿಕಿತ್ಸೆ ಪ್ರಗತೀಯ ರೂಪಾಂತರದ ಪರಿಣಾಮವನ್ನು ಒತ್ತಿ ಹೇಳಿದರು. ಯಾವದೇ ಹೃದಯ ಶಸ್ತ್ರಚಿಕಿತ್ಸೆಯು ಅನೇಕ ತೊಂದರೆಗಳೊಂದಿಗೆ ಅತೀ ಕ್ಲಿಷ್ಟಕರ ಎಂದು ತಿಳಿದಿರುತ್ತಾನೆ. ಆದಾಗ್ಯೂ ರೋಗಿಗಳು ಕಡಿಮೆ ಸಮಯದಲ್ಲಿ ತಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಾಗುದಿಲ್ಲ. ಆದರೆ ಈಗ ಆಧುನಿಕ ಪ್ರಗತಿಯಿಂದ ಹೃದಯ ಶಸ್ತ್ರಚಿಕಿತ್ಸೆಯನ್ನು ಗಮನಾರ್ಹವಾಗಿ ಸುಲಭಗೊಳಿಸಲಾಗಿದೆ. ನಾವು ಸೂಕ್ತ ರೋಗಿಗಳಿಗೆ ಚಿಕ್ಕ ರಂಧ್ರದ ಮೂಲಕ ಹೃದಯ ಶಸ್ತ್ರಚಿಕಿತ್ಸೆಯನ್ನು (CABG) ನಮ್ಮ ಆಸ್ಪತ್ರೆ (SDMNH) ನಲ್ಲಿಯು ಮಾಡುತ್ತೀದೆವೆ ಎಂದರು.
ಹೃದಯ ಶಸ್ತ್ರಚಿಕಿತ್ಸಕರು, ಎಸ್ ಡಿ ಎಮ್ ನಾರಾಯಣ ಹಾರ್ಟ ಸೆಂಟರ್
ಡಾ|| ಸಾಯಿ ಸೂರಜ್ ಕೋಟೆರ ಇವರು ಚಿಕಿತ್ಸೆ ಮತ್ತು ಅದರ ಪ್ರಯೋಜನಗಳ ಬಗ್ಗೆ ವಿವರಿಸಿ “ನಾವು ಇತ್ತೀಚಿಗೆ ಟ್ರಿಪಲ್ ವೆಸೆಲ್ ಕಾಯಿಲೆಯಿಂದ ಬಳಲುವ ಧಾರವಾಡದ 57 ವರ್ಷದ ಪುರುಷ ರೋಗಿಗೆ ಶಸ್ತ್ರ ಚಿಕಿತ್ಸೆ ನಡಿಸಿದ್ದೇವೆ. ಅವರಿಗೆ ಕೇವಲ 7 ಸೆಂ.ಮೀ ಗಾಯದ ಮೂಲಕ ಚಿಕ್ಕ ರಂದ್ರ ಮಾಡಿ ಪರಿಧಮನಿಯ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಯಿತು ಅವರು ಕೇವಲ 10 ದಿನದಲ್ಲಿ ತಮ್ಮ ಕೆಲಸಕ್ಕೆ ಮರಳಿದರು ಎಂದು ತಿಳಿಸಿದರು. ಈ ಶಸ್ತ್ರಚಿಕಿತ್ಸೆಯನ್ನು ಹೃದಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ|| ಸಾಯಿ ಸೂರಜ್ ಕೋಟೆರ್, ಹೃದಯ ಅರವಳಿಕೆ ತಜ್ಞರುಗಳಾದ ಡಾ|| ಗಣೇಶ ನಾಯಕ ಮತ್ತು ಡಾ|| ಪ್ರಮೋದ ಹೊನ್ನುರ ಹಾಗೂ ಪರಿಣಿತ ದಕ್ಷ ವೈದ್ಯಕೀಯ ವೃತ್ತಿಪರ ಒಟಿ ತಂಡದೊಂದಿಗೆ ಸಮರ್ಥವಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಹೇಳುತ್ತಾ ನಾವು ಬಾಲ್ಯದಲ್ಲಿ ಸೈಕಲ್ ಮೇಲಿಂದ ಬಿದ್ದ ಅಥವಾ ಪುಟ್ಟಬಾಲ್ ಮೈದಾನದಲ್ಲಿ ಬಿದ್ದಾಗ ದೇಹದ ಮೇಲೆ ಬೀಳುವ ಸಣ್ಣ ಗಾಯವನ್ನು ನೆನಪಿಸಿಕೊಳ್ಳುತ್ತೇನೆ ಸಾಮಾನ್ಯವಾಗಿ ದೊಡ್ಡ ಕಲೆ ಅದೊಂದು ದೊಡ್ಡ ಕಥೆಯಾಗಿ ಚಿಕ್ಕ ಕಲೆಗಳಾದರೆ ಚಿಕ್ಕ ಕಥೆಗಳಾಗಿರುತ್ತವೆ. ಶಸ್ತ್ರಚಿಕಿತ್ಸೆಯ ಸಣ್ಣ ಗಾಯ ಚೇತರಿಕೇಯ ಸಣ್ಣ ಕಥೆಗಳಾಗಿರುತ್ತವೆ ಎಂದರು .
ಚಿಕ್ಕ ರಂದ್ರದ ಮೂಲಕ ಮಾಡುವ ಹೃದಯ ಶಸ್ತ್ರಚಿಕಿತ್ಸೆಯ ಪ್ರಯೋಜನೆಗಳು
ಕನಿಷ್ಟ ಆಸತ್ರೆಯ ವಾಸ ಯಾವುದೇ ಮಚ್ಚೆ ಎದೆಯ ಮುಂಬಾಗದಲ್ಲಿ ಕಾಣದಿರುವದು ಕನಿಷ್ಟ ಸೊಂಕಿನ ಅಪಾಯ ಬೇಗ ಚೇತರಿಕೆ ಮೂಳೆ ಕತ್ತರಿಸದಿರುವದು ಕಡಿಮೆ ನೋವು
ಕನಿಷ್ಟ ಪ್ರಮಾಣದಲ್ಲಿ ರಕ್ತದ ವರ್ಗಾವಣೆ
ಬೇಗ ಕೆಲಸಕ್ಕೆ ಹಿಂತರುಗುವದು ಉತ್ತಮ ಜೀವನ ಶೈಲಿ ಇವಲ್ಲ ಲಾಭದಾಯಕ ವಿಷಯಗಳಾಗಿವೆ ಎಂದರು.
ಎಸ.ಡಿ.ಎಮ್ ನಾರಾಯಣ ಹಾರ್ಟ್ ಸೆಂಟರ ಧಾರವಾಡದಲ್ಲಿ ಈಗ ಪರಿಧಮನಿಯ ಬೈಪಾಸ್ ಗ್ರಾಪ್ಪಿಂಗ್, ಕವಾಚ [ವಾಲ್ವ] ಬದಲಾವಣೆ ಅಥವಾ ದುರಸ್ತಿ, ಜನ್ಮಭೌತವಾಗಿರುವ ಹೃದಯ ತೊಂದರೆಗಳಿಗೆ ಚಿಕಿತ್ಸೆಗಳು ಸೇರಿದಂತೆ ಆಸ್ಪತ್ರೆಯ ಹಲವಾರು ಚಿಕಿತ್ಸೆಗಳನ್ನು ಕೂಡಾ ಚಿಕ್ಕರಂಧ್ರದ ಶಸ್ತ್ರಚಿಕಿತ್ಸೆಯ ಮೂಲಕ ಸುಧಾರಿತ ಹೃದಯ ಶಸ್ತ್ರಚಿಕಿತ್ಸಾ ತಂತ್ರಗಳಿಂದ ನೀರ್ವಹಿಸಲು ಆಸ್ಪತ್ರೆಯು ಸನ್ನಧಗೊಂಡಿದೆ. ಈ ರೀತಿಯ ಸುಧಾರಿತ ಸೌಲಭ್ಯಗಳು ಸ್ಥಳೀಯವಾಗಿ ಲಭ್ಯವಿರುವದರಿಂದ ಇಂತಹ ಪರಿಣಿತ ಹೃದಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ ಎಂದು ಖಚಿತವಾಗುತ್ತಿದೆ.
ಎಸ್.ಡಿ.ಎಮ್ ನಾರಾಯಣ ಹಾರ್ಟ ಸೆಂಟರ ಬಗ್ಗೆ ವೈದ್ಯಕೀಯ ಜಗತ್ತು ಒದಗಿಸಬಹುದಾದ ಅತ್ಯುತ್ತಮ ಸೂಪರ ಸ್ಪೆಷಾಲಿಟಿ ಹೃದಯ ಆರೈಕೆ ಮತ್ತು ಹೃದಯ ಶಸ್ತ್ರಚಿಕಿತ್ಸೆ ಸೌಲಭೆಗಳನ್ನು ಹೊಂದಿರುವ ಈ ಆಸ್ಪತ್ರೆಯು ಅತ್ಯಾಧುನಿಕ 24/7 ಹೃದಯ ಕೇಂದ್ರವಾಗಿದ್ದು ಸಿಸಿಯು, ಸಿಐಟಿಯು, ಮತ್ತು ಸಾಮಾನ್ಯ ವಾರ್ಡಗಳನ್ನು ಹೊಂದಿದೆ. ಉತ್ತರ ಕರ್ನಾಟಕದ ಜನರಿಗೆ ಸೇವೆ ನೀಡಲು ಅತ್ಯಾಧುನಿಕ 2 ಕ್ಯಾಥಲ್ಯಾಭ, 2 ಹೃದಯ ಶಸ್ತ್ರಚಿಕಿತ್ಸಾ ಥೇಟರಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಅತ್ಯಂತಯ ಸಮರ್ಥ, ಕೌಶಲ್ಯಯುಕ್ತ ಮತ್ತು ಅನುಭವಿ ಹೃದಯ ತಜ್ಞರು, ಹೃದಯ ಶಸ್ತ್ರ ಚಿಕಿತ್ಸಕರು, ಅರಕಳಿಕೆ ತಜ್ಞರು ಮತ್ತು ಶೂದ್ರೂಷಕರ ತಂಡವಿದ್ದು, ಯಾವುದೇ ಹೃದಯ ತುರ್ತು ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥವಾಗಿ ಹೊಂದಿದೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ
ಅಜೇಯ ಹುಲಮನಿ
8884418727 ಕೋರಿದರು.