DHARWAD:ರಾಜ್ಯಪಾಲರ ನಡೆಯನ್ನು ಖಂಡಿಸಿ -- ಕಾಂಗ್ರೆಸ್ ಬೃಹತ್ ಪ್ರತಿಭಟನೆ

DHARWAD:ರಾಜ್ಯಪಾಲರ ನಡೆಯನ್ನು ಖಂಡಿಸಿ --  ಕಾಂಗ್ರೆಸ್  ಬೃಹತ್ ಪ್ರತಿಭಟನೆ
ಧಾರವಾಡ:---  ರಾಜ್ಯದ  ಮುಖ್ಯಮಂತ್ರಿ  ಸಿದ್ದರಾಮಯ್ಯ ನವರ ಬಗ್ಗೆ ಬಿಜೆಪಿ ನಾಯಕರು ಸುಖಾಸುಮ್ಮನೆ ಅವರ ಹೆಸರಿಗೆ ಮಸಿ ಬಳಿಯುವ  ಪ್ರಯತ್ನದಿಂದ ಹಗರಣವೇ ಅಲ್ಲದ ವಿಷಯವನ್ನು  ಮುಡಾ ಹಗರಣ  ಎಂದು ಬಿಂಬಿಸಿ  ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸುತ್ತಿರುವುದನ್ನು ಹಾಗೂ ರಾಜ್ಯಪಾಲರನ್ನು ಬಳಸಿಕೊಂಡು ಅವರ ಮೂಲಕ ಮುಖ್ಯಮಂತ್ರಿಗಳಿಗೆ ನೋಟಿಸ್ ಕೊಟ್ಟಿರುವದನ್ನು ಖಂಡಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಹಯೋಗದೊಂದಿಗೆ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅಪಿ೯ಸಿದರು

    ನಗರದಲ್ಲಿ  ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆಯ ರೂಪದಲ್ಲಿ ಪಾದಯಾತ್ರೆ ನಡೆಸಿ  ಜಿಲ್ಲಾಧಿಕಾರಿಗಳ ಮೂಲಕ ಬಿಜೆಪಿ ನಾಯಕರ ಭಂಡತನ ಅವರ ಕುತಂತ್ರ ರಾಜಕಾರಣ ವಿರೋಧಿಸಿ ಹಾಗೂ ಪಕ್ಷಪಾತಿ ಧೋರಣೆಯನ್ನು ಅನುಸರಿಸುತ್ತಿರುವ ರಾಜ್ಯಪಾಲರನ್ನ ವಜಾ ಮಾಡುವಂತೆ ಆದರಣಿಯ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು.

ಹು.ಧಾ. ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ, ಎಐಸಿಸಿ ಮಾಜಿ ಸದಸ್ಯರು ಹಾಗೂ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ಮತ ಕ್ಷೇತ್ರದ ಕಾಂಗ್ರೇಸ  ಅಭ್ಯರ್ಥಿಯಾಗಿದ್ದ ದೀಪಕ್ ಚಿಂಚೋರೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇಸ್ಮಾಯಿಲ್ ತಮಟಗಾರ ರವರು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

 ಧಾರವಾಡ ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಕೆಪಿಸಿಸಿ ಪದಾಧಿಕಾರಿಗಳು, ಕೆಪಿಸಿಸಿ ಸಂಯೋಜಕರು, ಕೆಪಿಸಿಸಿ ಸದಸ್ಯರು, ಬ್ಲಾಕ್ ಅಧ್ಯಕ್ಷರು, ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಮುಂಚೂಣಿ ಘಟಕ/ಸೆಲ್/ವಿಭಾಗಗಳ ಅಧ್ಯಕ್ಷರು/ಪದಾಧಿಕಾರಿಗಳು, ಪಕ್ಷದ  ಹಿರಿಯ/ಕಿರಿಯ ಮುಖಂಡರು, ಪಾಲಿಕೆಯ ಹಾಲಿ/ಮಾಜಿ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಸಮಸ್ತ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ನೂರಾರು ಭಾಗವಹಿಸಿದ್ದರು.

ನವೀನ ಹಳೆಯದು

نموذج الاتصال