ಹುಬ್ಬಳ್ಳಿ :
ಶ್ರೀ ಸದ್ಗುರು ಸಿದ್ವೇಶ್ವರ ಸ್ವಾಮಿಗಳ ನೂತನ ಶಿಲಾ ಕಟ್ಟಡದ ಪ್ರಥಮ ಕಲ್ಲಿನ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ರಾಮಣ್ಣ ಬಡಿಗೇರ್, ಉಣಕಲ್ ಗ್ರಾಮದ ಹಿರಿಯರಾದ ಚನ್ನು ಪಾಟೀಲ್, ದೇವಸ್ಥಾನ ಕಮಿಟಿಯ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರುಆದ ರಾಜಣ್ಣ. ಮು.ಕೊರವಿ, ಟ್ರಸ್ಟ್ ಕಮಿಟಿಯ ಸದಸ್ಯರಾದ ರಾಮಣ್ಣ ಪದ್ಮಣ್ಣವರ್, ಶಿವಾಜಿ ಕನ್ನಿಕೊಪ್ಪ, ಗುರುಸಿದ್ದಪ್ಪ ಬೆಂಗೇರಿ, ಅಪ್ಪಣ್ಣ ನಾಡಿಗೇರ್, ಶಿವು ಶಿರಗುಪ್ಪಿ, ಹನುಮಂತಪ್ಪ ಸೂರ್ಯವಂಶಿ, ಶಿವಾನಂದ ಹೆಬ್ಬಾಳ, ಹನುಮಂತಪ್ಪ ವಗ್ಗರ್, ನಿಂಗಪ್ಪ ಮಳೆ ಪನವರ್, ನಿಂಗಪ್ಪ ವಗ್ಗರ್, ತಾಯಂದಿರು, ಯುವಕ ಮಿತ್ರರು ಹಾಗೂ ಸಿದ್ದೇಶ್ವರ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ದೇವಸ್ಥಾನದ ನೂತನ ಶಿಲಾ ಕಟ್ಟಡ ಆದಷ್ಟು ಬೇಗನೆ ಪೂರ್ಣಗೊಳ್ಳಲಿ ಹಾಗೂ ಸಾರ್ವಜನಿಕರು ಈ ಶಿಲಾ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಪೂಜ್ಯ ಮಹಾಪೌರರು ಕರೆನೀಡಿದರು.