DHARWAD:ಸಂಸ್ಕಾರ ಭರಿತ ಕಲೆ ಸಮಾಜದ ಅವಶ್ಯಕತೆ.

ಸಂಸ್ಕಾರ ಭರಿತ ಕಲೆ ಸಮಾಜದ ಅವಶ್ಯಕತೆ.
ಧಾರವಾಡ  : 
ಭಾರತೀಯ ಕಲೆಗಳು ಆಯಾ ವ್ಯಕ್ತಿ, ಕುಟುಂಬ, ಗ್ರಾಮವನ್ನೊಳಗೊಂಡು ದೇಶದ ಉನ್ನತಿಗೆ ಸಂಸ್ಕಾರವನ್ನು ನೀಡಿದಾಗ ಮಾನವ ಕುಲದ ಉದ್ಧಾರ ಸಾಧ್ಯ ಎಂದು ಸಂಸ್ಕಾರ ಭಾರತೀಯ ಅಖಿಲ ಭಾರತ  ಸಂಘಟನಾಮಂತ್ರಿ ಅಭಿಜೀತ  ಗೋಖಲೆ ಹೇಳಿದರು. ಅವರು ಸಂಸ್ಕಾರ ಭಾರತಿ ಉತ್ತರ ಪ್ರಾಂತ ಮತ್ತು ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್  ಸಂಯುಕ್ತವಾಗಿ ಗ್ರಂಥ ಮಾಲಾದ ಅಟ್ಟದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ  ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲೆಗಾಗಿ ಕಲೆ ಅಲ್ಲ ಕಲೆ ಕೇವಲ ವಿಲಾಸಕ್ಕಾಗಿ ಅಥವಾ ಮನರಂಜಗಾಗಿ ಮಾತ್ರ ಅಲ್ಲ ಅದು ಮುಕ್ತಿಯನ್ನು ನೀಡುವಂತಹ ಕಲೆಯಾಗಿದೆ. ವಿಕೃತಿ, ಪ್ರಕೃತಿ,ಸಂಸ್ಕೃತಿ.  ಈ ಮೂರು ಸಂಗತಿಗಳಲ್ಲಿ ಪ್ರಕೃತಿದತ್ ಕಲೆಗಳು ಸಂಸ್ಕಾರ ಯುಕ್ತವಾಗಿ ಆತ್ಮೋನ್ನತಿಯೆಡೆಗೆ ಮತ್ತು ದೇಶ ಭಕ್ತಿ, ರಾಷ್ಟ್ರ ಭಕ್ತಿ ಇಂದ ಕೂಡಿದಾಗ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಪರಕೀಯರ ಆಕ್ರಮಣ ಭಾರತದ ಮೇಲಾದಾಗ ಭಕ್ತಿ ಪರಂಪರೆಯು ಈ ರಾಷ್ಟ್ರದ, ಧರ್ಮದ ಉಳಿವಿಗೆ ಕಾರಣವಾಯಿತು. ಅಂತೆಯೇ ಭಾರತೀಯ ಸಂಸ್ಕೃತಿ ಉಳಿಸಿ ಸ್ವಸ್ಥ ಸಮಾಜಕ್ಕೆ ಮಾದರಿಯಾಯಿತು. ಈ ರೀತಿಯ ಮಹತ್ ಕಾರ್ಯದ ಉದ್ದೇಶದಿಂದಲೇ ಸಂಸ್ಕಾರ ಭಾರತೀಯು ಕಾರ್ಯಪ್ರವೃತ್ತವಾಗಿದೆ ಎಂದರು. ನಂತರ ನಡೆದ ಸಂವಾದದಲ್ಲಿ ರಂಗ ನಿರ್ದೇಶಕ ಡಾ.ಪ್ರಕಾಶ ಗರುಡ, ಡಾ.ರಮಾಕಾಂತಜೋಶಿ, ಡಾ.ಹ.ವೆಂ.ಕಾಖಂಡಿಕಿ, ಸಮೀರ ಜೋಶಿ, ಅರವಿಂದ ಕುಲಕರ್ಣಿ, ಸುರೇಶ ಗುದಗನವರ, ರಾಜು ಪಾಟೀಲ, ಶ್ರೀನಿವಾಸ, ಮಾರುತಿ ಹುಟಗಿ, ಅಶೋಕ ಮೊಕಾಶಿ, ನಾಗೇಂದ್ರ ದೊಡ್ಡಮನಿ, ಡಾ.ಶ್ರೀಧರ ಕುಲಕರ್ಣಿ, ವೆಂಕಟೇಶ. ಸಂಜಯ ಪಾಟೀಲ, ಶ್ರೀನಿವಾಸ ಶಾಸ್ತ್ರೀ, ವೈಶಾಲಿ ರಸಾಳಕರ, ಶಿಲ್ಪಾ  ಪಾಂಡೆ, ವಿನಾಯಕ ಮೊದಲಾದವರು ಭಾಗವಹಿಸಿದ್ದರು. ಸಂಸ್ಕಾರ ಭಾರತೀಯ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಎಲ್ಲರನ್ನು ಸ್ವಾಗತಿಸಿ ವಂದನಾರ್ಪಣಿ ಸಲ್ಲಿಸಿದರು.
ನವೀನ ಹಳೆಯದು

نموذج الاتصال