ರಾಯಚೂರಿನ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯ ರಾಜ್ಯ ಘಟಕ ಪ್ರತಿ ವರ್ಷ್ ನೀಡುವ " ಬಸವ ಭೂಷಣ "ಪ್ರಶಸ್ತಿ ಧಾರವಾಡದ ಡಾ.ನಿತಿನ್ ಚಂದ್ರ ಹತ್ತಿಕಾಳ ಅವರಿಗೆ ಲಭಿಸಿದೆ.



   ಡಾ. ನಿತಿನ್ ಚಂದ್ರ ಹತ್ತಿಕಾಳಗೆ  ಬಸವ ಭೂಷಣ ಪ್ರಶಸ್ತಿ
    ಧಾರವಾಡ:---:ರಾಯಚೂರಿನ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯ ರಾಜ್ಯ ಘಟಕ ಪ್ರತಿ ವರ್ಷ್ ನೀಡುವ " ಬಸವ ಭೂಷಣ "ಪ್ರಶಸ್ತಿ ಧಾರವಾಡದ ಡಾ.ನಿತಿನ್ ಚಂದ್ರ ಹತ್ತಿಕಾಳ ಅವರಿಗೆ ಲಭಿಸಿದೆ.
      ಈ ವೇದಿಕೆ ಪ್ರತಿ ವರ್ಷ ವೈದ್ಯಕೀಯ, ಶಿಕ್ಷಣ, ಕಲೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಅವರ ಸೇವೆ ಗಮನಿಸಿ ಬಸವ ಭೂಷಣ ಪ್ರಶಸ್ತಿ ಪ್ರಧಾನ ಮಾಡುತ್ತಿದೆ. 
    ಈ ವರ್ಷ್ ಖ್ಯಾತ ಕಾಮಣಿ ತಜ್ಞ ರಾದ ಡಾ. ನಿತಿನ್ ಚಂದ್ರ ಹತ್ತಿಕಾಳ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ರಮೇಶ್ ನಾಯಕ ತಿಳಿಸಿದ್ದಾರೆ.
       ಕೊಪ್ಪಳ ದಲ್ಲಿ ಇ ದೇ ದಿ.  30 ರಂದು ನಡೆಯಲಿರುವ ವೇದಿಕೆಯ 3 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹಾಗೂ ಕೊಪ್ಪಳ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
   ಡಾ. ಹತ್ತಿಕಾಳ ಅವರ ಸೇವೆಯನ್ನು ಗಮನಿಸಿ 1991ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದಾಗಿದೆ. ಸಿದ್ದವೀರ್ ಸತ್ಸಂಗ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷರಾಗಿರುವ ಹತ್ತಿಕಾಳ ಅವರಿಗೆ ವಿವಿಧ ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿ ನೀಡಿ ಗೌರವಿಸಿವೆ.
ನವೀನ ಹಳೆಯದು

نموذج الاتصال