ಹು -- ಧಾ ಮಹಾನಗರದಲ್ಲಿ ರಾಶಿ ಕಸ ಸಾಂಕ್ರಾಮಿಕ ರೋಗದ ಭಯ : ಸದಸ್ಯರು ಆಕ್ರೋಶ

ಹು -- ಧಾ ಮಹಾನಗರದಲ್ಲಿ ರಾಶಿ ಕಸ 
ಸಾಂಕ್ರಾಮಿಕ ರೋಗದ ಭಯ : ಸದಸ್ಯರು ಆಕ್ರೋಶ.
     ಧಾರವಾಡ 19 : ಹುಬ್ಬಳ್ಳಿ  -- ಧಾರವಾಡ ಮಹಾನಗರದಲ್ಲಿ ಪಾಲಿಕೆಯಿಂದ ಕಸದ ರಾಶಿಯ ವಿಲೇವಾರಿ ಸರಿಯಾಗಿ ಆಗೊತ್ತಿಲ್ಲ ಇದರಿಂದ ಡೆಗ್ಯೊ ಸೇರಿದಂತೆ ಸಾಂಕ್ರಾಮಿಕ ರೋಗ ಹರಡಲು ಪಾಲಿಕೆ ಅನ್ನುವುಮಾಡಿಕೊಟ್ಟತ್ತಾಗಿದೆ ಎಂದು ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಆಡಳಿತರೋಡ ಪಕ್ಷಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
     ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ಜರುಗಿದ ಹು - ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದತೆಯೇ ಪಾಲಿಕೆ ಸದಸ್ಯರು ಟೀಕಾ ಪ್ರಹಾರ ನಡೆಸಿದರು.
    ಸುಮಾರು 11 ಲಕ್ಷ 60 ಸಾವಿರ ಜನಸಂಖ್ಯೆ ಹೊಂದಿರುವ ಮಹಾನಗರದಲ್ಲಿ ಈ ಮೊದಲಿಂದ 62 ವಾಡ್೯ ಗಳ ಬದಲಾಗಿ 82 ವಾಡ್೯ ಗಳಿಗೆ ಹೆಚ್ಚಿಸಲಾಗಿದೆ ಅದರಂತೆ ಸ್ವಚ್ಛತಾ ಕಾಯ೯ಕ್ರಮ ನಡೆಯುತ್ತಲ್ಲ ಎಲ್ಲಿ ನೋಡಿದರು ಕಸದ ರಾಶಿ ಕಂಡು ಬರುತ್ತಿದೆ ಸರಿಯಾಗಿ ಕಸವನ್ನೆ ಹೊಡೆಯುತ್ತಿಲ್ಲ ಎಂದು ಸದಸ್ಯರು ದೂರಿದರು.
     ಮೇಯರ್ ಸ್ಥಾನ ಅಲಂಕರಿಸಿದ್ದ ಉಪ ಮೇಯರ್ ಸತೀಶ ಹಾನಗಲ್ ಅವರು ಮಾತನಾಡಿ ಸದ್ಯ 480 ಕಸ ಸಾಗಾಣಿಕೆ ವಾಹನ ಬೇಕು ಆದರೆ ನಮ್ಮಲ್ಲಿ 216 ವಾಹನಗಳು ಇವೆ ಕೆಲ ವಾಹನಗಳು ದುರಸ್ತಿ ಯಲ್ಲಿವೆ ಎಂದ. ಅವರು ಪೌರಕಶಮಿ೯ಕರ ಕೊರತೆಯು ಇದೆ ಬರುವ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದರು.
  
  ಇದಕ್ಕೂ ಸ್ಪಂದಿಸದ ಸದಸ್ಯರು ಪಾಲಿಕೆಯ ಆರೋಗ್ಯ ವಿಭಾಗ ಸರಿಯಾಗಿ ಕಾಯ೯ನಿವ೯ಹನೆ ಮಾಡುತ್ತಿಲ್ಲ ಆರೋಗ್ಯ ಇನ್ಸ್‌ಪೆಕ್ಟರ್ ಪೋನ್ ಮಾಡಿದರು ಪೋನ್ ತೆಗೆದುಕೊಳ್ಳುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ಸಭೆಯಲ್ಲಿ  ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال