ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಸಹಕಾರಿ - ಡಾ.ಎ.ಚೆನ್ನಪ್ಪ.

ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಸಹಕಾರಿ - ಡಾ.ಎ.ಚೆನ್ನಪ್ಪ.
  ಧಾರವಾಡ  : 
ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ವ್ಯಕ್ತಿತ್ವದ ಗುಣವನ್ನು ಬೆಳೆಸುವಲ್ಲಿ ಬಹಳ ಸಹಕಾರಿ ಆಗಿವೆ ಎಂದು  ಕವಿವಿ ಕುಲಸಚಿವರಾದ ಡಾ.ಎ.ಚೆನ್ನಪ್ಪ ‌ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ವಿಶ್ವವಿದ್ಯಾಲಯ ಎನ್.ಎಸ್.ಎಸ್.ಕೋಶವು ಕವಿವಿ ಗಾಂಧಿ ಭವನದಲ್ಲಿ ಆಯೋಜಿಸಿದ 'ವಿಶ್ವವಿದ್ಯಾಲಯ ಮಟ್ಟದ  ಏಳು ದಿನಗಳ‌  ನಾಯಕತ್ವದ ಶಿಬಿರ', ವನ್ನು ಉದ್ಘಾಟಿಸಿ ಮಾತನಾಡಿದರು. 

ಎನ್.ಎಸ್.ಎಸ್ ಯೋಜನೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಬೆಳವಣಿಗೆ, ನಾಯಕತ್ವದ ಗುಣ, ಸಮಾಜದ‌‌ ಆಗುಹೋಗುಗಳನ್ನು ಅವಲೋಕಿಸಲು ರಾಷ್ಟ್ರೀಯ ಸೇವಾ ಯೋಜನೆ ಬಹಳ ಸಹಕಾರಿ ಆಗಿದೆ ಎಂದು ಅವರು ಇಂದಿನ ಯುವ ಸಮುದಾಯ ನಾಯಕತ್ವ ದಂತಹ ಗುಣ ಅಳವಡಿಸಿಕೊಳ್ಳಲು ಉತ್ತಮ ಅಭಿರುಚಿ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳ ದೆಸೆಯಿಂದಲೇ ಸದಭಿರುಚಿಯ ಹವ್ಯಾಸಗಳ ಜೊತೆಗೆ ಸಮಾಜದ ಜೊತೆಗೆ ಹೀಗೆ ಬೆರೆಯುಬೇಕು ಎಂದು‌ ಎನ್.ಎಸ್.ಎಸ್ ಕಲಿಸುತ್ತದೆ ಎಂದರು.
ಧಾರವಾಡದ ದಿ ಯುನಿಕ್ ಡ್ರೀಮ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಬಂಗಾರಿ ಮಾತನಾಡಿ. ಇಂದಿನ ಯುವ ಸಮುದಾಯವು ಉನ್ನತ ಗುರಿಯನ್ನು ಹೊಂದಬೇಕು, ಅದಕ್ಕಾಗಿ ನಿರಂತರವಾದ ‌ಪ್ರಯತ್ನ ಮಾಡಬೇಕು. ಎನ್.ಎಸ್.ಎಸ್ ಶಿಬಿರದ ಮೂಲಕ ನಿಮ್ಮ‌ ವ್ಯಕ್ತಿತ್ವದ ಬೆಳವಣಿಗೆ ಜೊತೆಗೆ ಸುತ್ತಮುತ್ತಲಿನ ‌ಆಗುಹೊಗುಗಳ ಕುರಿತು ತಿಳಿಸುತ್ತದೆ ಎಂದರು.

ಕವಿವಿ ಎನ್. ಎಸ್.ಎಸ್.ಕೋಶದ ಸಂಯೋಜಕ ಡಾ.ಎಂ.ಬಿ.ದಳಪತಿ ಮಾತನಾಡಿ ಪ್ರಸ್ತುತ ಎನ್.ಎಸ್.ಎಸ್‌‌ .ಶಿಬಿರದಲ್ಲಿ ವಿದ್ಯಾರ್ಥಿಗಳು ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ಮತ್ತು ಸಂವಹನ‌ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಅನೇಕ‌ ಚುವಟಿಕೆಗಳನ್ನು ಆಯೋಜಿಸಿದೆ ಎಂದು ಅವರು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ, ಯೋಗ, ಶ್ರಮದಾನ,‌‌ಪರಿಸರ ಸಂರಕ್ಷಣೆ ಯಂತಹ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು ಕವಿವಿ ಆವರಣದಲ್ಲಿ ಹಸಿರಿನ್ನು‌ ಹೆಚ್ಚಿಸಲು ಸುಮಾರು 250 ಸಸಿಗಳನ್ನು ‌ನೆಡಲು‌ ಯೋಜಿಸಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಡಾ. ನೇತ್ರವಾತಿ ಗಬ್ಬೂರ
ಡಾ. ಜಯಾನಂದ ಹಟ್ಟಿ, ಡಾ. ಬಸವನಗೌಡ, ಪ್ರೊ.ಕಿರಣ ತೊಟಗಂಟಿ.ಪ್ರೊ.ಸಂಗಮೇಶ ಕೊಟಬಾಗಿ, ಎನ್.ಎಸ್.ಎಸ್ ತರಬೇತುದಾರ ಶಿವಯೋಗಿ ಸೇರಿದಂತೆ ಕವಿವಿ ವ್ಯಾಪ್ತಿಯ ವಿವಿಧ ಕಾಲೇಜುಗಳ  450 ಸ್ವಯ ಸೇವಕರು ಭಾಗವಹಿಸಿದ್ದಾರೆ. 

                                   ---

ಫೋಟೊ ಶೀರ್ಷಿಕೆ:-1

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಕವಿವಿ ಎನ್.ಎಸ್.ಎಸ್.ಕೋಶವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವದ ಶಿಬಿರವನ್ನು ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ ಉದ್ಘಾಟಿಸಿದರು.

ಫೋಟೊ ಶೀರ್ಷಿಕೆ:-2 

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಕವಿವಿ ಎನ್.ಎಸ್.ಎಸ್.ಕೋಶವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ನಾಯಕತ್ವದ ಶಿಬಿರವನ್ನು ಕವಿವಿ ಕುಲಸಚಿವ ಡಾ.ಎ.ಚೆನ್ನಪ್ಪ ಉದ್ಘಾಟಿಸಿ ಮಾತನಾಡಿದರು.
ನವೀನ ಹಳೆಯದು

نموذج الاتصال