*ನಾಲ್ಕು ಜನ ಕಳ್ಳರ ಹೆಡೆಮುರಿ ಕಟ್ಟಿದ ಲಕ್ಷ್ಮೇಶ್ವರ ಪೋಲಿಸರು..!*
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಮನೆಯೊಂದರಲ್ಲಿ ಟ್ರಿಜೂರಿ ಮುರಿದು 1 ಲಕ್ಷದ 80 ಸಾವಿರ ರೂ. ಕಿಮ್ಮತ್ತಿನ 41 ಗ್ರಾಂ ಬಂಗಾರದ ಆಭರಣಗಳು ಹಾಗೂ 1 ಲಕ್ಷ ರೂಪಾಯಿ ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದ ನಾಲ್ಲು ಜನ ಕಳ್ಳರನ್ನು ಲಕ್ಷ್ಮೇಶ್ವರ ಪೋಲಿಸರು ಬಂಧಿಸುವ ಮೂಲಕ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ.
ಸದರಿ ಇದೆ ಕಳ್ಳರು ಹಾವೇರಿ ಜಿಲ್ಲೆಯ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದ ಮೋಟರ್ ಸೈಕಲ್ ನಂಬರ್ ಕೆಎ- 27 ಇಎಮ್- 8827 ಹಾಗೂ ಶಿಗ್ಗಾಂವ್ ತಾಲೂಕಿನ ಮಂಡಿಗನಾಳ ಗ್ರಾಮದ ಯುನಿಕಾರ್ನ್ ಮೋಟರ್ ಸೈಕಲ್ ನಂಬರ್ ಕೆಎ- 25 ಹಚ್ ಬಿ-5969 ಸೇರಿದಂತೆ ಒಟ್ಟು ಎರಡು ಮೋಟಾರ ಸೈಕಲ್ಲಗಳನ್ನು ಸಹ ಇದೆ ಸಂದರ್ಭದಲ್ಲಿ ಕಳ್ಳರಿಂದ ಪೋಲಿಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಸದರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ ಮೊಡಿಕೇರ, ಶೇಕಪ್ಪ ಮೊಡಿಕೇರ, ಮಂಜುನಾಥ ಮೋಡಿಕೇರ, ಹಾಗೂ ನಾಗರಾಜ್ ಮೊಡಿಕೇರ ಎಂಬ ನಾಲ್ಕು ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಸದರಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಆಯ್ ನಾಗರಾಜ್ ಮಾಡಳ್ಳಿ, ಪಿಎಸ್ಐ ಈರಪ್ಪ ರಿತ್ತಿ ಹಾಗೂ ಸಿಬ್ಬಂಧಿಗಳ ತಂಡದ ಕಾರ್ಯಕ್ಕೆ ಗದಗ ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
*ವರದಿ*✍️ಚಂದ್ರಶೇಖರ ಸೋಮಣ್ಣವರ