ಕೆಸಿಡಿ ವಿಜ್ಞಾನ ಪಿಯು ಕಾಲೇಜಿನ ಹೆಚ್ಚುವರಿ ಶುಲ್ಕಕ್ಕೆ ಎಐಡಿಎಸ್ಓ ಖಂಡನೆ.!
ಧಾರವಾಡ :
ಕೆಸಿಡಿ ಪಿಯು ವಿಜ್ಞಾನ ಕಾಲೇಜಿನಲ್ಲಿ ಈ ವರ್ಷದ ಶುಲ್ಕವನ್ನು ನಿಗದಿ ಮಾಡಲಾಗಿದೆ ಒಟ್ಟು 458 ಸೀಟುಗಳಲ್ಲಿ 132 ಸೀಟುಗಳನ್ನು ಹೆಚ್ಚುವರಿ ಶುಲ್ಕದಡಿ ಇಟ್ಟಿದ್ದಾರೆ. 10,072ರೂ ಸಾಮಾನ್ಯ ಶುಲ್ಕ ಇದ್ದರೆ, 30,072ರೂ ಹೆಚ್ಚುವರಿ ಶುಲ್ಕವನ್ನಾಗಿ ಮಾಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಮಾಡುವ ಅನ್ಯಾಯ. ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆಯುವಂತಹ ಈ ಕಾಲೇಜಿನಲ್ಲಿ ಕನಿಷ್ಠ ಶುಲ್ಕ ಪಡೆಯದೆ ವಿದ್ಯಾರ್ಥಿಗಳಿಂದ ಹೇರಳ ಶುಲ್ಕ ಪಡೆಯುವುದು ದುರಂತವಾಗಿದೆ.
ಕರ್ನಾಟಕ ಮಹಾವಿದ್ಯಾಲಯವು ಧಾರವಾಡದ ಹೆಮ್ಮೆ ಈ ಕಾಲೇಜಿನಲ್ಲಿ ಓದುವುದಕ್ಕಾಗಿಯೇ ಎಷ್ಟೋ ಜಿಲ್ಲೆಯ ವಿದ್ಯಾರ್ಥಿಗಳು ಧಾರವಾಡಕ್ಕೆ ಬರುತ್ತಾರೆ ಅಂತ ಪ್ರತಿಷ್ಠಿತ ಕಾಲೇಜಿನಲ್ಲಿ ಇಷ್ಟರ ಮಟ್ಟಿಗೆ ಶುಲ್ಕ ಹೆಚ್ಚಳ ಮಾಡುವುದು ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತದೆ. ಧಾರವಾಡ ಶೈಕ್ಷಣಿಕ ನಗರಿ ಎಂದು ಕರೆಸಿಕೊಳ್ಳಲು ಕರ್ನಾಟಕ ಕಾಲೇಜಿನ ಪ್ರಮುಖ ಪಾತ್ರವಿದೆ. ಇಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಇಷ್ಟರ ಮಟ್ಟಿಗೆ ಶುಲ್ಕ ಹೆಚ್ಚಳ ಮಾಡುವುದನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ . ಒಂದು ಸರ್ಕಾರಿ ಕಾಲೇಜಿನಲ್ಲಿ ಹೆಚ್ಚುವರಿ ಶುಲ್ಕ ಅನ್ನುವುದೇ ಸರಿಯಲ್ಲ ಅದರಲ್ಲೂ ಇಷ್ಟರಮಟ್ಟಿಗೆ ಮಾಡುವುದು ವಿದ್ಯಾರ್ಥಿಗಳಿಗೆ ದ್ರೋಹ ಬಗೆದಂತೆ,ಕಾಲೇಜು ಮತ್ತು ವಿಶ್ವವಿದ್ಯಾಲಯದ ಈ ನಡೆಯನ್ನು ಎಐಡಿಎಸ್ಓ ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಕಾಲೇಜು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಈ ವಿಷಯಕ್ಕೆ ಗಮನಹರಿಸಿ ಕೂಡಲೇ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯಲು ಒತ್ತಾಯಿಸುತ್ತದೆ. ಈ ಮೂಲಕ ಶುಲ್ಕ ಹೆಚ್ಚಳದ ವಿರುದ್ಧ ಹೋರಾಟಗಳನ್ನು ಬೆಳೆಸಲು ಎಐಡಿಎಸ್ಓ ವಿದ್ಯಾರ್ಥಿಗಳಿಗೆ ಕರೆ ನೀಡುತ್ತದೆ.