“ವಿಶ್ವ ದಾದಿಯರ ದಿನಾಚರಣೆ”
ಧಾರವಾಡ :
ಈ ವರ್ಷದ ಧೈಯ“ನಮ್ಮ ದಾದಿಯರು ನಮ್ಮ ಭವಿಷ್ಯ – ಆರೈಕೆಯ ಆರ್ಥಿಕ ಶಕ್ತಿ.
ಭಾರತೀಯ ವೈದ್ಯಕೀಯ ಸಂಘ ಧಾರವಾಡ ಶಾಖೆ ಮತ್ತು ಶ್ರೆಯಾ ಕಾಲೇಜ್ ಆಫ್ ನರ್ಸಿಂಗ್ ಧಾರವಾಡ ಇವರ ಸಂಯೋಗದೊಂದಿಗೆ 18 ರಂದು ಶ್ರೆಯಾ ಕಾಲೇಜ್ ನಲ್ಲಿ ವಿಶ್ವ ದಾದಿಯರ ದಿನವನ್ನು 2024ರ ಧೈಯದೊಂದಿಗೆ “ನಮ್ಮ ದಾದಿಯರು
ನಮ್ಮ ಭವಿಷ್ಯ - ಆರೈಕೆಯ ಆರ್ಥಿಕ ಶಕ್ತಿ” ಆಯೋಜಿಸಲಾಗಿತ್ತು. ಶ್ರೆಯಾ ಕಾಲೇಜಿನ ಅಧ್ಯಕ್ಷರಾದ ಡಾ. ವೈ ಎನ್ ಇರಕಲ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಹಾಗೂ ಶ್ರೆಯಾ ಕಾಲೇಜಿನ ಕಾರ್ಯದರ್ಶಿಗಳಾದ ಡಾ.ಸತೀಶ್ ಇರಕಲ್ ಮುಖ್ಯ ಆತಿಥಿಯಾಗಿ
ಎಂ.ಎಸ್. ಡಿಎನ್‌ಬಿ, ಎಫ್‌ಎಂಎಸ್ (ಲ್ಯಾಪ್ರೋಸ್ಕೋಪಿ) ಎಚ್‌ಡಿಎಂಸಿ ಮುಖ್ಯ ಆರೋಗ್ಯಧಿಕಾರಿಗಳು ಡಾ.ಶ್ರೀಧರ್ ದಂಡಪ್ಪನವರ್ ಆಗಮಿಸಿದ್ದರು.
ಐ.ಎಂ.ಎ ಖಜಾಂಚಿ,
ಡಾ.ಸಪನ್
ಕಾರ್ಯದರ್ಶಿ
ಡಾ.ಕಿರಣ್ ಕುಲಕರ್ಣಿ ಶ್ರೇಯಾ ಕಾಲೇಜಿನ ಶೈಕ್ಷಣಿಕ ಕಾರ್ಯದರ್ಶಿ ಡಾ.ವಾಣಿ ಇರಕಲ್, ಪ್ರಾಶುಂಪಾಲರಾದ ಡಾ.ರೋಡಾ ಜೇಸುರಾಜ್,ರವರು ಪ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪುಪ್ಪರಪಣೆ ದೀಪಾ ಬೆಳಗಿಸುವುದರ ಮೂಲಕ ಮತ್ತು ಕೇಕ್ ಕತ್ತರಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳ ಐದು ದಾದಿಯರಾದ ಶ್ರೀಮತಿ ಡೆಲಿಮಾ ಪಿ. ಶುಶೂಷಾಧಿಕಾರಿ ಆಧಿಕಾರಿ, ಡಿಮ್ಹಾನ್ಸ್, ಸಹೋದರಿ ಮೋನಿಕಾ ಬಾಂಚ್, ಶುಶೂಷಾಧಿಕಾರಿ, ಅವರ್ ಲೇಡಿ ಆಫ್ ಲೂರ್ಡ್ಸ್, ತ್ರಿವೇಣಿ, ಸಮುದಾಯ ಆರೋಗ್ಯಧಿಕಾರಿ ಚಿಕ್ಕಮಲ್ಲಿಗೆವಾಡ, ಜೆರುಷಾ, ಪಿ ಎಲ್ ಆಫ್ ವೈಡ್,NHS ಆಸ್ಪತ್ರೆ ಇಂಗ್ಲೆಂಡ್, ಯುಕೆನಲ್ಲಿ ನೋಂದಾಯಿತ ನರ್ಸ್, ಶ್ರೀಮತಿ ಜಯಶ್ರೀ ಆಪರೇಷನ್ ಥಿಯೇಟರ್ ಮೇಲ್ವಿಚಾರಕರು ಸಿಬ್ಬಂದಿ ಶ್ರೆಯಾ ಆಸ್ಪತ್ರೆ ಧಾರವಾಡ ಇವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಸತೀಶ್ ಇರಕಲ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ ಧಾರವಾಡ ಮತ್ತು ಕಾರ್ಯದರ್ಶಿ ಶ್ರೆಯಾ ಕಾಲೇಜ್ ಧಾರವಾಡ ರವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿಶ್ವದಾದ್ಯಂತ ದಾದಿಯರ ಆದ್ಭುತ ಕೆಲಸವನನ್ನು ಸಮುದಾಯಗಳಲ್ಲಿನ ರೋಗಿಗಳಿಗೆ ಸಹಾನುಭೂತಿಯ ಆರೈಕೆಯನ್ನು ಒದಗಿಸುವ ಈ ಸಮರ್ಪಿತ ವೃತ್ತಿಪರರು
ಆರೋಗ್ಯ ರಕ್ಷಣಾ ವ್ಯವಸ್ಥೆಯ ಬೆನ್ನುಲುಬಾಗಿದ್ದಾರೆ.ಔಷಧಿಗಳನ್ನು ನೀಡುವುದರಿಂದ ಹಿಡಿದು ಭಾವನಾತ್ಮಕ ಬೆಂಬಲ
ನೀಡುವವರೆಗೆ ರೋಗಿಯು ಚೇತರಿಸಿಕೊಳ್ಳವ ಪ್ರಯಾಣದ ಪ್ರತಿಯೊಂದು ಹಂತದಲ್ಲೂ ದಾದಿಯರು ಪ್ರಮುಖ ಪಾತ್ರವಹಿಸುತ್ತಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ ಶ್ರೀಧರ.ದಂಡಪ್ಪನವರ್, ಮುಖ್ಯ ಆರೋಗ್ಯಾಧಿಕಾರಿ ಎಚ್.ಡಿ.ಎಂ.ಸಿ ಅವರು ನರ್ಸಿಂಗ್‌ನ ನಿರ್ದಿಷ್ಟ ಅಂಶಗಳನ್ನು ಎತ್ತಿ ತೋರಿಸಿದರು ಮತ್ತು ದಣಿವರಿಯದ ಆರೈಕೆ ಮಾಡುವವರಿಗೆ ಅಪಾರ ಕೃತಜ್ಞತೆ ತಿಳಿಸಿದರು. ಶ್ರೀಮತಿ ಡೆಲಿಮಾ ಪಿ, ಶುಶೂಷಾಧಿಕಾರಿ ಡಿಮ್ಹಾನ್ಸ್, ಇವರು ಮಾತನಾಡಿ ಕನ್ನಡಿಗರು ಭಾರತದಲ್ಲೇ ಇದ್ದು ರೋಗಿಗಳ ಸೇವೆಯನ್ನು ಮಾಡಬೇಕು ಎಂದು ತಿಳಿಸಿದರು ಮತ್ತು ಇರತ ಎಲ್ಲ ಗಣ್ಯರು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು ಶ್ರೆಯಾ ಕಾಲೇಜಿನ ವಿದ್ಯಾರ್ಥಿಗಳು ಫ್ಲಾರೆನ್ಸ್ ನೈಟಿಂಗೇಲ್ ರವರ ಕಿರುನಾಟಕವನ್ನು ಪ್ರದರ್ಶಿಸಿ ಅವರ ಜೀವನ ಪಯಣ ಮತ್ತು ಸಮರ್ಪಿತ ಸೇವೆಯನ್ನು ತೊರಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಬ್ಯೂಲಾ ಸಹಾಯಕ ಉಪನ್ಯಾಸಕಿ, ಪ್ರಾರ್ಥನಾ ಗೀತೆ ಸ್ವಾತಿ ಶ್ರೆಯಾಕಾಲೇಜಿನ ವಿಧ್ಯಾರ್ಥಿನಿ, ಸುಶ್ಮಿತಾ ಅವರು ಸ್ವಾಗತಿಸಿದರು, ಸ್ಫೂರ್ತಿ ಉಪನ್ಯಾಸಕಿ ಈ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ತಿಳಿಸಿದರು ಐ.ಎಂ.ಎ ಕಾರ್ಯದರ್ಶಿ ಡಾ.ಕಿರಣ್ ಕುಲಕರ್ಣಿ
ವಂದನಾರ್ಪಣೆ ಮಾಡಿದರು.