ಇಂದು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ
ಎ ಐ ಕೆ ಕೆ ಎo ಎಸ್ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಎಲ್ಲಾ ರೈತರಿಗೂ ಬರ ಪರಿಹಾರ ನೀಡಬೇಕು, ರೈತರಿಗೆ ಬಿತ್ತನೆಯ ಸರಿಯಾದ ಸಮಯಕ್ಕೆ ಬೀಜ ಗೊಬ್ಬರವನ್ನು ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣ ಜಡ್ಗಣ್ಣವರ, ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿ ಶರಣಬಸವ ಗೋನವಾರ, ಉಪಾಧ್ಯಕ್ಷರಾದ ಹನುಮೇಶ್ ಹುಡೆದ, ರಸೂಲ್ ನಧಾಪ್, ಉಳವಪ್ಪ ಅಂಗಡಿ, ಕಾಸಿಂಸಾಬ್, ಬಸಪ್ಪ ವಡ್ಡರ ಮುಂತಾದವರು ಇದ್ದರು.