ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ - ಸಂತೋಷ ಲಾಡ.
ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಬುಧವಾರ ಇಲ್ಲಿನ ತೇಜಸ್ವಿನಗರ ಸರ್ಕಲ್ ನಲ್ಲಿ ತೇಜಸ್ವಿನಗರ, ರಾಜೀವಗಾಂಧಿ ನಗರ, ನೆಹರು ನಗರ ನಿವಾಸಿಗಳ ನಾಗರಿಕ ಸಮಿತಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮತ್ತು ವಾಡ್೯ ನಂ.20 ರಲ್ಲಿ 3.30 ಕೋ.ರೂ.ವೆಚ್ಚದಲ್ಲಿ ಕೈಕೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ಕಳೆದ
ಚುನಾವಣೆಯಲ್ಲಿ ಜನತೆಗೆ ಕೊಟ್ಟ ಭರವಸೆಯಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದೆ. ಕಳೆದ ತಿಂಗಳು ಯುವ ನಿಧಿ ಯೋಜನೆಗೆ ಹೆಸರು ನೊಂದಣಿ ಪ್ರಕ್ರಿಯೆ ಆರಂಭಿಸಿದ್ದು, ಸದ್ಯದಲ್ಲಿಯೇ ಅನುಷ್ಠಾನವಾಗಲಿದೆ. ಈ ಕಾರ್ಯಕ್ರಮಗಳಿಗೆ 56 ಸಾವಿರ ಕೋ.ರೂ. ಮೀಸಲಿಡುವ ಮೂಲಕ ಮುಖ್ಯಮಂತ್ರಿಗಳು ಬದ್ಧತೆ ಪ್ರದರ್ಶಿಸಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ದಾನಪ್ಪ ಕಬ್ಬೇರ ಮತ್ತು ಕಾರ್ಪೊರೇಟರ್ ಕವಿತಾ ಕಬ್ಬೇರ ಅವರ ಸತತ ಪ್ರಯತ್ನದಿಂದ 20 ನೇ ವಾರ್ಡನಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ,ಕಳೆದ ಮೂರು ದಶಗಳಿಂದ
ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಕಡು ಬಡವರಿಗೆ ಸೂರು ಒದಗಿಸುವ ಉದ್ದೇಶದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ 6,691 ಕೋ.ರೂ. ಅನುದಾನ ಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಹುಬ್ಬಳ್ಳಿ -ಧಾರವಾಡದಲ್ಲಿನ ಕೆಲವು ಸೌಲಭ್ಯವಂಚಿತ ಬಡಾವಣೆಗಳನ್ನು ಸಧ್ಯದಲ್ಲಿ
ಕೊಳಗೇರಿಗಳನ್ನಾಗಿ ಘೋಷಿಸಲಾಗುವುದು. ಕಾಲಮಿತಿಯೊಳಗೆ ಈ ಕುರಿತು ಅಗತ್ಯ ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವಾಡ್೯ ನಂ.20 ರಲ್ಲಿನ ಬಡಾವಣೆಗಳಿಗೆ ಸೌಲಭ್ಯ ಕಲ್ಪಿಸಲು ಮಂಡಳಿಯಿಂದ 2 ಕೋ.ರೂ.ಅನುದಾನ ನೀಡುವುದಾಗಿ ಅಬ್ಬಯ್ಯ ವಾಗ್ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಚಿವರು ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು.
ಅಧ್ಯಕ್ಷತೆವಹಿಸಿದ್ದ
ಮಾಜಿ ಮೇಯರ ದಾನಪ್ಪ ಕಬ್ಬೇರ ಮಾತನಾಡಿ, ಕಳೆದ ಮೂರು ದಶಕಗಳಿಂದ ವಾಸಿಸುತ್ತಿದ್ದ ಒಟ್ಟು 1620 ಕುಟುಂಬಳಿಗೆ ಕೊಳ ಅಭಿವೃದ್ಧಿ ಮಂಡಳಿಯಿಂದ ಹಕ್ಕು ಪತ್ರ ವಿತರಿಸಲಾಗುತ್ತಿದೆ.
ಕಾಂಗ್ರೆಸ್ ಸರಕಾರ ದೀನದಲಿತರ ಪರವಾಗಿದೆ ಎಂಬುದಕ್ಕೆ ಇದು ನಿದರ್ಶನ ಎಂದರು.
ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಮುಖಂಡ ಲೋಹಿತ ನಾಯ್ಕರ ವೇದಿಕೆಯಲ್ಲಿದ್ದರು.
ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಸೆಂಥಿಲ್ ಕುಮಾರ, ಲಕ್ಷ್ಮೀ ಹಿಂಡಸಗೇರಿ,
ಹಿರಿಯರಾದ ಡಾ.ಸೈಯ್ಯದ್ ಸದಾಕತ್, ಗಣೇಶ ಹಡಪದ, ಜಿಲಾನಿ ಜಾಲೇಗಾರ, ಮಹೇಶ ಹುಲ್ಲೆನ್ನವರ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಮತ್ತು ಸಾರ್ವಜನಿಕರು ಕಾರ್ಯಮದಲ್ಲಿದ್ದರು.