ಶ್ರೀಯಾ ಕಾಲೇಜಿನ ಮೊದಲನೆ ವರ್ಷದಪದವಿ ಪ್ರದಾನ ಸಮಾರಂಭ.

ಶ್ರೀಯಾ ಕಾಲೇಜಿನ ಮೊದಲನೆ ವರ್ಷದ
ಪದವಿ ಪ್ರದಾನ ಸಮಾರಂಭ.
ಧಾರವಾಡ  : 
ಪ್ರತಿಜ್ಞಾವಿಧಿ ಡಾ.ವಾಯ್.ಎನ್.ಇರಕಲ್ ಎಜುಕೇಷನ್ ಚಾರಿಟೆಬಲ್ ಟ್ರಸ್ಟ್ ಶ್ರೀಯಾ ಕಾಲೇಜಿನ ಮೊದಲನೆ ವರ್ಷದಬಿ.ಎಸ್ಸಿ ನರ್ಸಿಂಗ್ ಜಿ.ಎನ್.ಎಮ್ MSc ನರ್ಸಿಂಗ್ ಮತ್ತು ಪ್ಯಾರಮೆಡಿಕಲ್‌ ವಿದ್ಯಾರ್ಥಿಗಳಿಗೆ ದೀಪ ಬೆಳಗುವ ಹಾಗೂ ಅಂತಿಮ ವರ್ಷದ ತೆರ್ಗಡೆಯಾದ ವಿದ್ಯಾರ್ಥಿಗಳಿಗೆ ಪದವಿ ಪ್ರತಿಜ್ಞಾವಿಧಿ ಭೋಧನ ಸಮಾರಂಭವನ್ನು ಸೃಜನಾರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು .
ಈ ಸಮಾರಂಭಕ್ಕೆ ಮುಖ್ಯ ಅಥಿತಿಗಳಾಗಿ ಡಾ.ಎಸ್.ಎಫ್ ಕಮ್ಮಾರ್, ನಿರ್ದೇಶಕರು, ಕಿಮ್ ಹುಬ್ಬಳ್ಳಿ, ಮತ್ತು ಡಾ.ವೈ.ಎನ್ ಇರಕಲ್, ಸಂಸ್ಥಾಪಕರು, ಶ್ರೀಯಾ ಕಾಲೇಜ್ ಧಾರವಾಡ ಹಾಗೂ ಗೌರವಾನ್ವಿತ ಅತಿಥಿಗಳಾಗಿ, ಡಾ. ಸಂಗಪ್ಪಾ ಗಾಭಿ, ಜಿಲ್ಲಾ ವೈದ್ಯಾಧಿಕಾರಿಗಳು ಧಾರವಾಡ, ಇವರು ಆಗಮಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯಾ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸತೀಶ್ ಇರಕಲ್ ಹಾಗೂ ಶೈಕ್ಷಣಿಕ ನಿರ್ದೇಶಕರಾದ ಡಾ.ವಾಣಿ.ಎಸ್, ಇರಕಲ್, ಪ್ರಾಂಶುಪಾಲರಾದ ಡಾ.ರೋಢಾ ಜೆಸುರಾಜ, ಶ್ರೀಮತಿ, ಲೀಲಾವತಿ ಕಳಸಪ್ಪನವರ,ಉಪಸ್ಥಿತರಿದ್ದರು. 
ಕಾರ್ಯಕ್ರಮನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳ ಆವಾಹನೆ ಮತ್ತು ಗೌರವಾನ್ವಿತ ಗಣ್ಯರಿಂದ ದೀಪ ಬೆಳಗಿಸುವುದರೊಂದಿಗೆ ಪ್ರಾರಂಭಿಸಲಾಯಿತು. ಈ ಶುಭ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾದ ಆಗಮಿಸಿದ ಡಾ. ಎಸ್.ಎಫ್ ಕಮ್ಮಾರ್ ರವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಕುರಿತು ವೈದ್ಯಕೀಯ ಸೇವೆಯಲ್ಲಿ ಶೂಶಷಕರ ಸೇವೆಯು ಮಹತ್ವದ ಪಾತ್ರ ವಹಿಸುತ್ತದೆ.ವಿದ್ಯಾರ್ಥಿಗಳು ಈ ಸೇವೆಯ ಮಹತ್ವವನ್ನು ಅರಿತು ಹೆಚ್ಚಿನ ವಿಧ್ಯಾಭ್ಯಾಸವನ್ನು ಮಾಡಬೇಕೆಂದು ಪ್ರೋತ್ಸಾಹಿಸಿದರು ವಿದ್ಯಾರ್ಥಿಗಳು ಜೀವನದ ಮೌಲ್ಯಗಳನ್ನು ಅರಿತುಕೊಂಡು ಸಾಧನೆಯ ಮೆಟ್ಟಿಲುಗಳನ್ನು ಏರಬೇಕೆಂದು ಆಶಿಸಿದರು. 
ಗೌರವಾನ್ವಿತ ಅತಿಥಿಗಳಾಗಿ ಡಾ. ಸಂಗಪ್ಪಾ ಗಾಭಿ, ಜಿಲ್ಲಾ ವೈದ್ಯಾಧಿಕಾರಿಗಳು ಈ ಸಮಾರಂಭಕ್ಕೆ ಆಗಮಿಸಿ ಪದವಿದರ ವಿದ್ಯಾರ್ಥಿಗಳು ಮತ್ತು ಪ್ರತಿಜ್ಞಾವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಕಾರ್ಯಕ್ರಮಕ್ಕೆ ಮೆರಗನ್ನು ತಂದುಕೊಟ್ಟರು

ಈ ಸಂದರ್ಭದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಕೊಟ್ಟು ಗೌರವಿಸಲಾಯಿತು. .ಶ್ರೀಮತಿ ಪಲ್ಲವಿ ಮತ್ತು ಶ್ರೀಮತಿ ಶೋಭಾ ನಿರುಪಣೆ ಮಾಡಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಶ್ರೀಮತಿ ಸುಶ್ಮಿತಾ ಸ್ವಾಗತಿಸಿದರು ಹಾಗೂ ಶ್ರೀಮತಿ ದೀಪಾ ಕುಂಬಾರ ಅಥಿತಿಗಳನ್ನು ಪರಿಚಹಿಸಿದರು ಪ್ರಥಮ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು ಪವಿತ್ರವಾದ ನರ್ಸಿಂಗ್ ಕ್ಷೇತ್ರಕ್ಕೆ ಪ್ರವೇಶದ ಸಂಕೇತವಾಗಿ ದೀಪ ಬೆಳಗಿಸುದರ ಮೂಲಕ ಪ್ರಾಧ್ಯಾಪಕರಾದ ಶ್ರೀಮತಿ ರಾಜಶ್ರೀ ಅವರು ಪ್ರತೀಜ್ಞಾವಿಧಿ ಭೋದಿಸಿದರು ನಂತರ ಪದವೀಧರರು ಡಾ.ವಾಣಿ ಅವರಿಂದ ಪ್ರತೀಜ್ಞಾವಿಧಿ ಸ್ವೀಕರಿಸದರು.
ಈ ಸಮಾರಂಭದಲ್ಲಿ ಡಾಕ್ಟರೇಟ್ ಪದವಿರಾದ ಶ್ರೀಯಾ ಆಸ್ಪತ್ರೆಯ ವೈದ್ಯರಾದ ಡಾ.ಅಮೃತ ಬಸವ ಹಾಗೂ ಶ್ರೀಯಾ ಕಾಲೇಜಿನ ಪ್ರಾಶುಂಪಾಲರಾದ ಡಾ.ರೋಢಾ ಜೆಸುರಾಜ ರವರಿಗೆ ಸನ್ಮಾನಿಸಲಾಯಿತು. ಕುಮಾರಿ ಬ್ಯೂಲಾ ಅವರು ಶೈಕ್ಷಣಿಕ ಸಾಧಕರಿಗೆ ಬಹುಮಾನಗಳನ್ನು ಘೋಷಿಸಿದರು.ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಸ್ಫೂರ್ತಿ ಮಾಡಿದರು.
ನವೀನ ಹಳೆಯದು

نموذج الاتصال