ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಘಟನೆಯ ಹುಬ್ಬಳ್ಳಿಯ ಪದಾಧಿಕಾರಿಗಳ ಆಯ್ಕೆ.

ಭಾರತ ಜ್ಞಾನ ವಿಜ್ಞಾನ ಸಮಿತಿ  ಸಂಘಟನೆಯ ಹುಬ್ಬಳ್ಳಿಯ ಪದಾಧಿಕಾರಿಗಳ ಆಯ್ಕೆ.
 
ಹುಬ್ಬಳ್ಳಿ,
ಭಾರತ ಜ್ಞಾನ ವಿಜ್ಞಾನ ಸಮಿತಿ ಇದೊಂದು ವೈಜ್ಞಾನಿಕ ಮನೋಭಾವ ಬೆಳೆಸುವ, ಶಿಕ್ಷಣ ಇಲಾಖೆಯ ಜೊತೆಗೆ, ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಸಹಯೋಗದೊಂದಿಗೆ, ಮಕ್ಕಳ ಸಾಹಿತ್ಯ ಸಂಬ್ರಮವನ್ನು ರಾಜ್ಯದ 74 ತಾಲ್ಲೂಕುಗಳಲ್ಲಿ, ಅತ್ಯಂತ ಯಶಸ್ವಿಯಾಗಿ ಜರುಗಿಸಿದ ಕೀರ್ತಿ ಭಾರತ ಜ್ಞಾನ ವಿಜ್ಞಾನ ಸಮಿತಿಗೆ ಇದೆ ಎಂದು, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಸದಸ್ಯ ಎಲ್ ಐ ಲಕ್ಕಮ್ಮನವರ ಹೇಳಿದರು, ಅವರು ಹುಬ್ಬಳ್ಳಿಯ ಅರವಿಂದ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಹುಬ್ಬಳ್ಳಿ ನಗರ ಘಟಕ ಹುಬ್ಬಳ್ಳಿ ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಭಾರತ ಜ್ಞಾನ ವಿಜ್ಞಾನ ಸಮಿತಿ ಇದೊಂದು ರಾಷ್ಟ್ರೀಯ ಸಂಘಟನೆಯಾಗಿದೆ, ಚಿಣ್ಣರ ಮೇಳ,ಮಕ್ಕಳ ಕಲಿಕಾ ಹಬ್ಬ, ವಿಜ್ಞಾನ ಹಬ್ಬ, ಮಕ್ಕಳ ಸಾಹಿತ್ಯ ಸಂಬ್ರಮ, ವಠಾರ ಶಾಲೆ,ಓದುವ ಬೆಳಕು ಮುಂತಾದ ಶೈಕ್ಷಣಿಕ ಮತ್ತು ವೈಜ್ಞಾನಿಕ
 ಕಾರ್ಯಕ್ರಮಗಳನ್ನು ರೂಪಿಸಿ, ಶಿಕ್ಷಣ ಇಲಾಖೆಗೆ ಶಕ್ತಿಯನ್ನು ನೀಡಿದೆ ಎಂದರು.
ಅಧ್ಯಕ್ಷರು‌:ವೀರಪ್ಪ ಅರಕೇರಿ.
ಗೌರವಾದ್ಯಕ್ಷರಾಗಿ
 ರೇಖಾ ಮೋರಬ್.
ಕಾರ್ಯದರ್ಶಿಯಾಗಿ
ನೀಲಾಂಬಿಕಾ ಶೆಟ್ಟರ್.
ಕೋಶಾಧ್ಯಕ್ಷರು  ಕಿರಣ್ ಶೆಟ್ಟರ್
ಉಪಾಧ್ಯಕ್ಷ
ದ್ರಾಕ್ಷಾಯಿಣಿ ಬಿರಾದರ್
ಮಂಜುಳಾ ಬೆಣ್ಣಿ
ಶ್ವೇತಾ ಶಲವಡಿ
ಸಹ ಕಾರ್ಯದರ್ಶಿಗಳು
 ಸಂತೋಷ್ ಶಲವಡಿ
ದೀಪ ಕಾಡ್ರೋಳ್ಳಿ
ಸಂಗೀತ ಮೊರಬ್
ಪದಾಧಿಕಾರಿಗಳು
ಲಕ್ಷ್ಮಿ ಚಿಕ್ಕ ತೋಟದ
ಪ್ರೇಮ ಪೂಜಾರ್
ಅನುಪಮಾ ಹಂಸಭಾವಿ
ಹೇಮಲತಾ ಶೆಟ್ಟರ್
ಲಲಿತಾ ಶಲವಡಿ
ನಿಂಗಪ್ಪ ಶಲವಡಿ
ವಿದ್ಯಾಶ್ರೀ ಪಾಟೀಲ್ ಇವರುಗಳನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು,

 ಕುಂದಗೋಳ ತಾಲೂಕಿನ ಖ್ಯಾತ ಕಲಾವಿದ ಶರೀಪ ದೊಡಮನಿ ಅವರನ್ನು ಹುಬ್ಬಳ್ಳಿ ನಗರ ಘಟಕದಿಂದ ಸತ್ಕರಿಸಲಾಯಿತು, ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಡುಗಳನ್ನು ಹೇಳಿ, ವೈಜ್ಞಾನಿಕ ಮನೋಭಾವವನ್ನು ಮೂಡಿಸಿದರು.
ರೇಖಾ ಮೊರಬ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯ ಮಲ್ಲಪ್ಪ ಹೊಸಕೇರಿ ಇದ್ದರು, ಇದೇ ಸಂದರ್ಭದಲ್ಲಿ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಕಲ್ಕಿ ಎಜ್ಯುಕೇಶನ್ & ಡೆವಲಪ್ಮೆಂಟ್ ಸೊಸೈಟಿ ಜಂಟಿಯಾಗಿ ಆಯೋಜಿಸಲು ತೀರ್ಮಾನಿಸಲಾಯಿತು.
ನೀಲಾಂಬಿಕಾ ಶೆಟ್ಟರ್ ಸ್ವಾಗತಿಸಿ ನಿರೂಪಿಸಿದರು, ದ್ರಾಕ್ಷಾಯಣಿ ಬಿರಾದಾರ ವಂದಿಸಿದರು.
ನವೀನ ಹಳೆಯದು

نموذج الاتصال