ಪ್ರಪಂಚದ ಮೊಟ್ಟ ಮೊದಲ ಮಹಿಳೆಯಾಗಿ ವಿಶ್ವದಾಖಲೆ ನಿರ್ಮಿಸಿದ ಖುದ್ದಿಯಾ ನಜೀರ್‌

   ಪ್ರಪಂಚದ ಮೊಟ್ಟ ಮೊದಲ ಮಹಿಳೆಯಾಗಿ ವಿಶ್ವದಾಖಲೆ ನಿರ್ಮಿಸಿದ  ಖುದ್ದಿಯಾ ನಜೀರ್‌

   2022 ರಲ್ಲಿ ಸಿಜರಿನ್ ಸೆಕ್ಟೇನ್ ಡೇಲಿವರಿ ಆದ ನಂತರ 300 ಕೆ.ಜಿ ತೂಕ ಎತ್ತಿದ ಪ್ರಪಂಚದ ಮೊಟ್ಟ ಮೊದಲ ಮಹಿಳೆಯಾಗಿ ವಿಶ್ವದಾಖಲೆ ನಿರ್ಮಿಸಿದ  ಖುದ್ದಿಯಾ ನಜೀರ್‌ (ಖುಷಿ).ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ.

ಧಾರವಾಡ 09 : 
ಅಂತರಾಷ್ಟ್ರೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಮತ್ತು ಪವರ್‌ಲಿಫ್ಟಿಂಗ್ ಚಾಂಪಿಯನ್ ಆಗಿ, ಸೌತ್ ಕೋರಿಯಾದಲ್ಲಿ ನಡೆದ ಏಷೀಯಾ ಪೆಸಿಫಿಕ್ ಮಾಸ್ಟರ್ ಗೇಮ್ಸ್-2023 ರಲ್ಲಿ 3 ಚಿನ್ನದ ಪದಕ ಪಡೆದು, ಭಾರತ, ಹಾಗೂ ಅಥೆನ್ಸ್‌ನ ಗ್ರೀಸ್, ಇರೋಪ್ ದೇಶಗಳಲ್ಲಿ ಹಲವಾರು ಬೆಳ್ಳಿ ಪದಕ ಪಡೆದಿದ್ದಲ್ಲದೇ, 2022 ರಲ್ಲಿ ಸಿಜರಿನ್ ಸೆಕ್ಟೇನ್ ಡೇಲಿವರಿ ಆದ ನಂತರ 300 ಕೆ.ಜಿ ತುಕ ಎತ್ತಿದ ಪ್ರಪಂಚದ ಮೊಟ್ಟ ಮೊದಲ ಮಹಿಳೆಯಾಗಿ ವಿಶ್ವದಾಖಲೆ ನಿರ್ಮಿಸಿದ್ದಾರೆ, ಐರಾನ್ ಲೇಡಿ ಆಫ್ ಇಂಡಿಯಾ ಪ್ರಶಸ್ತಿ-2023 ಪಡೆದು, ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸಂಘ-ಸಂಸ್ಥೆಗಳಿಂದ ಮಾನ-ಸನ್ಮಾನಗಳು, ಪ್ರಶಸ್ತಿ ಪಡೆದ ಉಕ್ಕಿನ ಮಹಿಳೆಯು ರಾಜ್ಯ ಮತ್ತು ದೇಶದ ಹಲವಾರು ದಿನಪತ್ರಿಕೆಗಳು, ಟಿ.ವಿ ಮಾಧ್ಯಮಗಳಲ್ಲಿ ಸಂದರ್ಶನ ನೀಡಿದ ಸಾಧಕಿ, ಪುರುಷರಿಗೆ ಸವಾಲೊಡ್ಡುವಂತೆ ಪ್ರತಿ ದಿನ 5 ಗಂಟೆಗೂ ಹೆಚ್ಚು ಸಮಯ ಜೀಮ್‌ನಲ್ಲಿ ವೆಟ್ ಲಿಫ್ಟಿಂಗ್ ಪ್ರಾಕ್ಟಿಸ್ ಮಾಡುವ ದಿಟ್ಟ ಮಹಿಳೆಯೇ ಶ್ರೀಮತಿ ಖುದ್ದಿಯಾ ನಜೀರ್ (ಖುಷಿ) ರವರು ಇಂದು ಉತ್ತರ ಕರ್ನಾಟಕದ ಜನರ ಮೇಲಿನ ಅಪಾರ ಪ್ರೀತಿಯಿಂದ ವಿದ್ಯಾಕಾಶಿ ಧಾರವಾಡದಲ್ಲಿಯೇ ನಮ್ಮ ಕೆ.ಎಸ್.ಒ.ಯು ಕಲಿಕಾರ್ಥಿ ಕೇಂದ್ರದಲ್ಲಿ ತಮ್ಮ ಕನಸ್ಸು ಮತ್ತು ಆಸಕ್ತಿಯ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಎಂ.ಎ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಪಡೆದು, ತಮ್ಮ ಮುಂದಿನ ಸಾಧನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತಿದ್ದಾರೆ ಎಂದು ನಾಗರಾಜ  ಎಚ್  ಎನ್
ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ” ಎನ್ನುವಂತೆ ಪ್ರತಿಯೊಬ್ಬರಲ್ಲೂ ಅದ್ಭುತ ಹಾಗೂ ಅಪಾರವಾದ ಶಕ್ತಿ ಅಡಗಿರುತ್ತದೆ. ಎಲ್ಲಾ ಸಮಸ್ಯೆ-ಸವಾಲುಗಳನ್ನು ದಿಟ್ಟತನದಿಂದ ಹೆದರಿಸಿ ತಮ್ಮ ಕನಸ್ಸು ಹಾಗೂ ಗುರಿ ಸಾಧಿಸಲು ನಿರಂತರ ಪ್ರಯತ್ನ, ಪ್ರಾಮಾಣಿಕತೆ ಹಾಗೂ ಸೂಕ್ತ ಮಾರ್ಗದರ್ಶನ ಪಡೆದು, ಕಠಿಣ ಪರಿಶ್ರಮದ ಮೂಲಕ ಸಮಾಜದಲ್ಲಿ ವಿಶಿಷ್ಠ-ವಿನೂತನ ಸಾಧನೆ ಮಾಡಿ, ಸಮಾಜಕ್ಕೆ ಮಾದರಿ ಮಹಿಳಾ ಸಾಧಕಿಯಾಗಿ ರೂಪಗೊಂಡ ಶ್ರೀಮತಿ ಖುದ್ದಿಯಾ ನಜೀರ್‌ (ಖುಷಿ) ರವರ ಸೇವೆ ಮತ್ತು ಸಾಧನೆ ಸಮಾಜದಲ್ಲಿ ಅವಿಸ್ಮರಣೀಯವಾದುದು ಎಂದರು  

ಸಂವಿಧಾನ ಪಿತಾಮಹ ಡಾ. ಬಿ.ಆರ್ ಅಂಬೇಡ್ಕರ್‌ರವರ ಅನುಯಾಯಿಯಾದ ಇವರು ಸಂವಿಧಾನ ಮತ್ತು ಈ ನೆಲದ ಕಾನೂನಿನ ಬಗ್ಗೆ ಅಪಾರ ಅಭಿಮಾನ ಹಾಗೂ ಆಸಕ್ತಿಯನ್ನು ಹೊಂದಿದ್ದಾರೆ. ಉನ್ನತ ಶಿಕ್ಷಣದ ಕನಸ್ಸು ಹೋತ್ತು ಅದನ್ನು ಸೂಕ್ತ ಸ್ಥಳ ಮತ್ತು ಸಂಸ್ಥೆಯಲ್ಲಿಯೇ ನನಸ್ಸು ಮಾಡಿಕೊಳ್ಳುವ ತವಕದಿಂದ ತಮ್ಮ ಸ್ವ-ಇಚ್ಚೆಯಂತೆ ಪ್ರತಿಯೊಬ್ಬರ ಉನ್ನತ ಶಿಕ್ಷಣದ ಕನಸ್ಸು ನನಸ್ಸು ಮಾಡುವಂತಹ ಮತ್ತು ತಮ್ಮ ಕನಸ್ಸಿನ ಕ್ಷೇತ್ರದಲ್ಲಿ ಸಾಧನೆ (ಕಾಯಕ) ಮಾಡುವ ವ್ಯಕ್ತಿಗಳನ್ನು ರೂಪಿಸುತ್ತಿರುವಂಹ ನಮ್ಮ ಧಾರವಾಡದ ಬಹುಮುಖ ಕ್ರೀಯಾಶೀಲ ಶಿಕ್ಷಣ ಸಂಸ್ಥೆಯಲ್ಲಿಯೇ ತಮ್ಮ ಉನ್ನತ ಶಿಕ್ಷಣದ ಕನಸ್ಸು ನನಸ್ಸು ಮಾಡಿಕೊಳ್ಳಲು ಸೂಕ್ತವೆಂದು ತಿಳಿದು, ಇಂದು ವಿದ್ಯಾಕಾಶಿ ಧಾರವಾಡದ ನಮ್ಮ ಕೆ.ಎಸ್.ಒ.ಯು ಕಲಿಕಾರ್ಥಿ ಸಹಾಯ ಕೇಂದ್ರಲ್ಲಿಯೇ ಎಂ.ಎ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಗೆ ಅಧಿಕೃತವಾಗಿ ಪ್ರವೇಶಾತಿ ಪಡೆದು, ನಮ್ಮ ಸಂಸ್ಥೆ ಹಾಗೂ ನನ್ನ ಮಾರ್ಗದರ್ಶನದಲ್ಲಿಯೇ ಉನ್ನತ ಶಿಕ್ಷಣ ಪಡೆಯುವ ಮೂಲಕ ರಾಜ್ಯ ಮತ್ತು ದೇಶ, ವಿದೇಶಗಳಲ್ಲಿ ಸಂವಿಧಾನದ ಜಾಗೃತಿ ಮತ್ತು ಅರಿವೂ ಮೂಡಿಸಿ, ಪ್ರಸ್ತುತ ಅದೋಗತಿಗೆ ಇಳಿದಿರುವ ರಾಜಕೀಯ ಕ್ಷೇತ್ರದಲ್ಲಿ ಅಪಾರ ಬದಲಾವಣೆ ತರಬೇಕೆಂದು, ಶಿಕ್ಷಣ ಕ್ಷೇತ್ರದಲ್ಲೂ ಸಹ ವಿಶಿಷ್ಠ ಸಾಧನೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಇವರಿಗೆ ಬೇಕಾದಂತಹ ಎಲ್ಲಾ ಸಹಾಯ-ಸಹಕಾರವನ್ನು ಮತ್ತು ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ನಮ್ಮ ಸಂಸ್ಥೆಯ ಮಾರ್ಗದರ್ಶಕ ಮಂಡಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಇವರ ಮೂಲಕ ಈ ಭಾಗದ ಇತರೆ ಪ್ರತಿಭಾವಂತ ಆಸಕ್ತ ವಿದ್ಯಾರ್ಥಿಗಳಿಗೂ ಸಹ ಸಾಹಸ ಕ್ರೀಡೆಗಳಲ್ಲಿ ರಾಜ್ಯ ರಾಷ್ಟ್ರ, ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಲು ವೇದಿಕೆ ಕಲ್ಪಿಸಲಾಗುದೆಂದು ಖ್ಯಾತಶಿಕ್ಷಣ ತಜ್ಞರು, ತರಬೇತಿದಾರರು, ಚಿಂತಕರಾದ ನಾಗರಾಜ ಹೆಚ್.ಎನ್ ತಿಳಸಿದರು.

ದಿ 25-01-1986 ರಂದು ಬಂಗಾರಪೇಟೆಯ ಕೋಲಾರದಲ್ಲಿ ಮಹ್ಮದ್ ಖಾಸಿಂ ದಂಪತಿಗಳ ಮಗಳಾಗಿ ಜನಿಸಿ, ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತ ಆಗುವ ಅಪಾಯವಿದ್ದರು ಸಹ ಅದನ್ನು ಲೆಕ್ಕಿಸದೇ ಬಡತನದ ಕಠಿಣ ಪರಸ್ಥಿತಿಯಲ್ಲಿಯೇ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಶಿಕ್ಷಣ ಮುಗಿಸಿ, 18 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ನಾನು ಸ್ನಾತಕೋತ್ತರ (ಎಂಬಿಎ) ಪದವಿಗೆ ಪ್ರವೇಶಾತಿ ಪಡೆದು ಕಾರಣಾಂತರಗಳಿಂದ ಅರ್ಧದಲ್ಲಿಯೇ ನಿಲ್ಲಿಸುವಂತಾಯಿತು. ನನ್ನ ಶಿಕ್ಷಣಕ್ಕೆ ಮಾತ್ರ ತೊಡಕಾಗಿರಬಹುದು, ಆದರೆ ಬೇರೆ ಕ್ಷೇತ್ರದಲ್ಲಿ ಯಾಕೆ ನಾನು ಸಾಧನೆ ಮಾಡಬಾರದೆಂದು ತಿಳಿದು, ಮಹಿಳೆಯರಿಗೆ ಅತ್ಯಂತ ಕಠಿಣವಾದ ವೇಟ್‌ಲಿಫ್ಟಿಂಗ್ ಮತ್ತು ಪವರ್‌ಲಿಫ್ಟಿಂಗ್ ಕಡೆ ಆಸಕ್ತಿ ವಹಿಸಿದ್ದರ ಫಲವೇ ಇಂದು ನಾನು ಈ ಎಲ್ಲಾ ಸಾಧನೆ ಮಾಡಲು
ಸಾಧ್ಯವಾಯಿತು.
ಅದರಲ್ಲೂ ನಾನು ಇವತ್ತು ವಿಶೇಷವಾಗಿ ಧಾರವಾಡಕ್ಕೆ ಬಂದಿರುವುದು ಉತ್ತರ ಕರ್ನಾಟಕದ ಜನರ ಮೇಲಿನ ಅಪಾರ ಪ್ರೀತಿಯಿಂದ ವಿದ್ಯಾಕಾಶಿಯೆಂದೇ, ಕವಿಗಳ ನಾಡೆಂದೆ ಪ್ರಸಿದ್ಧಿ ಪಡೆದ ಈ ಪೇಡಾ ನಗರಿ ಧಾರವಾಡ ನನ್ನನ್ನು ಉನ್ನತ ಶಿಕ್ಷಣ ಪಡೆಯಲು ಪ್ರೇರೆಪಿಸಿತು, ಆದ್ದರಿಂದಲೇ ಧಾರವಾಡಯೇ ನನ್ನ ಅಚ್ಚುಮೆಚ್ಚಿನ ಶಿಕ್ಷಣ ಸಂಸ್ಥೆ ಹಾಗೂ ಕರ್ನಾಟಕದಲ್ಲಿ ಹೆಸರುವಾಸಿಯಾದ ಶಿಕ್ಷಣ ತಜ್ಞರಾದ ನಾಗರಾಜ ಹೆಚ್.ಎನ್ ರವರ ಸೂಕ್ತ ಮಾರ್ಗದರ್ಶನದಲ್ಲಿ ಸಾವಿರಾರು ಜನರಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸುವಂತಹ ಕೆ.ಎಸ್.ಒ.ಯು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿಯೇ ನನ್ನ ಕನಸ್ಸು ಮತ್ತು ಆಸಕ್ತಯ ವಿಷಯದಲಿಯೇ ಉನ್ನತ ಶಿಕ್ಷಣ ಪಡೆಯಲು ಎಂ.ಎ ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಗೆ ಅಧಿಕೃತವಾಗಿ ಇಂದು ಪ್ರವೇಶಾತಿ ಪಡೆದು, ನನ್ನ ಮುಂದಿನ ಸಾಧನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತಿದ್ದೆನೆ.
ಪ್ರಮುಖವಾಗಿ ರಾಜ್ಯ-ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಮತ್ತು ಪವರ್‌ಲಿಫ್ಟಿಂಗ್ ಚಾಂಪಿಯನ್‌ಶೀಪ್‌ಗಳಲ್ಲಿ ಭಾಗವಹಿಸಿ ಹಲವಾರು ಬಾರಿ ಚಾಂಪಿಯನ್ ಆಗಿದ್ದೆನೆ. ಭಾರತದ ಪ್ರತಿನಿಧಿಯಾಗಿ ಸೌತ್ ಕೋರಿಯಾದಲ್ಲಿ ನಡೆದ ಏಷೀಯಾ ಪೆಸಿಫಿಕ್ ಮಾಸ್ಟರ್ ಗೇಮ್ಸ್-2023 ರಲ್ಲಿ 3 ಚಿನ್ನದ ಪದಕ ಪಡೆದು, ಭಾರತ, ಮತ್ತು ಇತರೇ ದೇಶಗಳಾದ ಅಥೆನ್ಸ್‌ನ ಗ್ರೀಸ್, ಇರೋಪ್ ದೇಶಗಳಲ್ಲಿ ಹಲವಾರು ಬೆಳ್ಳಿ, ಪದಕ ಪಡೆದು, ಡಿಸೆಂಬರ್ 6-2022 ರಲ್ಲಿ ಸಿಜರಿನ್ ಸೆಕ್ಷನ್ ಡೇಲಿವರಿ ಆದ ನಂತರ 300 ಕೆ.ಜಿ ತುಕ ಎತ್ತಿದ ಪ್ರಪಂಚದ ಮೊಟ್ಟಮೊದಲ ಮಹಿಳೆಯಾಗಿರುತ್ತೇನೆ. ಈ ಮೂಲಕ ವಿಶ್ವದಾಖಲೆ ನಿರ್ಮಿಸಿ, ಐರಾನ್ ಲೇಡಿ ಆಫ್ ಇಂಡಿಯಾ ಪ್ರಶಸ್ತಿ-2023 ಅವಾರ್ಡ ಪಡೆದು ಹಾಗೂ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಳನ್ನು ಪಡೆದಿರುತ್ತೇನೆ 

ಪವರ್ ವುಮೆನ್ ಅಬ್ದುಲ್ ಕಲಾಂ ಲಿಡ್ ಇಂಡಿಯಾ ಫೌಂಡೆಶನ್ ಅವಾರ್ಡ್-2019 ,ಸ್ಫೋರ್ಟ್‌ ಅಚಿವರ್ಸ್‌ ಅವಾರ್ಡ್-2022 
 ಮಲ್ಟಿಟೈಲಂಟ್ ವುಮೇನ್ ಎಂಪವರೆಂಟ್ ಅವಾರ್ಡ್-2022  ಜೈ ಜವಾನ್ ಜೈ ಕಿಸಾನ್ ಅವಾರ್ಡ್-2023)ಬೆಸ್ಟ್ ವುಮೇನ್ ಅವಾರ್ಡ್-2023 6) ಸ್ಟಾಂಗ್ ವುಮೇನ್ ಅವಾರ್ಡ್-2023 7) ಕುವೆಂಪು ಅವಾರ್ಡ್-2023 ಇನ್ನೂ ಮುಂತಾದ ಸಂಘ-ಸಂಸ್ಥೆಗಳಿಂದ ಮಾನ-ಸನ್ಮಾನಗಳು ಪ್ರಶಸ್ತಿಗಳು ನನ್ನನ್ನು ಪ್ರತಿ ದಿನ ಹುಡುಕಿಕೊಂಡು ಬರುತ್ತಿವೆ. ನನ್ನ ಮುಂದಿನ ಪ್ರಮುಖ ಸ್ಪರ್ಧೆಗಳು ಮತ್ತು ಗುರಿಗಳು  ಒಂದೇ ದಿನದಲ್ಲಿ 15 ವಿಶ್ವದಾಖಲೆಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ (ವಿಶ್ವದಲ್ಲಿಯೇ ಪ್ರಥಮ) – (ಮೇ) 2024, ಆಸ್ಟ್ರೇಲಿಯಾದಲ್ಲಿ ನಡೆಯುವ ಕಾಮನ್‌ವೆಲ್ತ್ ಮಾಸ್ಟರ್ಸ್ಪ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶೀಪ್- (ಜೂನ್) 2024 ಆಯ್ಕೆ ,ಫಿನ್ ಲ್ಯಾಂಡ್, ಯುರೋಪ್‌ನಲ್ಲಿ ನಡೆಯುವ ವಲ್ಡ್ ಮಾಸ್ಟರ್ಸ್ಪ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶೀಪ್- (ಸೆಪ್ಟೆಂಬರ್) 2024 ಆಯ್ಕೆ , ತಪೈಯಿ ಸಿಟಿ ತೈವಾನ್‌ನಲ್ಲಿ ನಡೆಯುವ ವಲ್ಡ್ ಮಾಸ್ಟರ್ಸ್ಪ ಗೇಮ್ಸ್- (ಫೆಬ್ರುವರಿ) 2025 ಈ ಎಲ್ಲ ಪ್ರಮುಖ ಇವೆಂಟ್ಸ್‌ಗಳಲ್ಲಿ ಭಾಗವಹಿಸಲು ಸಕಲ ಸಿದ್ಧತೆಯನ್ನು ಎಲ್ಲರ ಸಹಕಾರದೊಂದಿಗೆ ಮಾಡಿಕೊಳ್ಳುತ್ತಿದ್ದೇನೆ. ಇದರಲ್ಲಿ ಅಪಾರ ಸಾಧನೆ ಮಾಡುವಂತಹ ವಿಶ್ವಾಸ ನನಗಿದೆ. ತಮ್ಮೆಲ್ಲರ ಸಹಾಯದ ಜೊತೆಗೆ ತಮ್ಮ ಎಲ್ಲಾ ಮಾದ್ಯಮಗಳ ಸಹಾಯ-ಸಹಕಾರ ಅತ್ಯಗತ್ಯವಿದೆ ಸಹಕರಿಸಬೇಕೆಂದು ಉಕ್ಕಿನ ಮಹಿಳೆಯಾದ ಶ್ರೀಮತಿ ಖುದ್ದಿಯಾ ನಜೀರ್ (ಖುಷಿ) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪತ್ರಿಕಾಗೋಷ್ಟಿಯಲ್ಲಿ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ನಿರ್ದೇಶಕ ರಾಘವೇಂದ್ರ ಕುಲಕರ್ಣಿ,ಬೆಂಗಳೂರಿನ
ಇಂಟರ್ ನ್ಯಾಷನಲ್ ಕೋಚ್  ಪತಿಯಾದ ಮಹ್ಮದ್ ಅಮನುಲ್ಲಾ   ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال