ಧಾರವಾಡದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕಲಿಕಾರ್ಥಿ ಸಹಾಯ (ಅಧ್ಯಯನ) ಕೇಂದ್ರದಲ್ಲಿ 2023-24ನೇ ಸಾಲಿನ (ಜನವರಿ ಆವೃತ್ತಿ) ಆನ್‌ಲೈನ್ ಪ್ರವೇಶಾತಿ ಪ್ರಾರಂಭ
ಧಾರವಾಡ 03 :
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು 'ಮುಕ್ತ ಮತ್ತು ದೂರ ಶಿಕ್ಷಣ ಪದ್ಧತಿ' ಯಲ್ಲಿ ಶಿಕ್ಷಣವನ್ನು ನೀಡುವ ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿದೆ 'ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ' ಎಂಬ ಧೈಯವಾಕ್ಯದಂತೆ “ಇಂದು ಉನ್ನತ ಶಿಕ್ಷಣ ಪ್ರತಿಯೊಬ್ಬರ ಮನೆ-ಮನೆಯ ಬಾಗಿಲಿಗೆ ತಲುಪಿಸಲು ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳು ಯು.ಜಿ.ಸಿ, ಡಿ.ಇ.ಬಿ, ಎ.ಐ.ಸಿ.ಟಿ.ಇ ಹಾಗೂ ಎ+ ನ್ಯಾಕ್ ಗ್ರೇಡ್ ಮಾನ್ಯತೆ ಪಡೆದಿದೆ. 2023-24ನೇ ಸಾಲಿನ (ಜನವರಿ ಆವೃತ್ತಿ) ಆನ್‌ಲೈನ್ ಪ್ರವೇಶಾತಿ ಪ್ರಾರಂಭವಾಗಿದ್ದು ಯು.ಜಿ.ಸಿ ಯ ಹೊಸ ನಿಯಮದಂತೆ ಕಲಿಕಾರ್ಥಿಗಳು ಏಕಕಾಲದಲ್ಲಿ ಎರಡು ಕೋರ್ಸಗಳಿಗೆ (ಒಂದು ಭೌತಿಕ ಮತ್ತು ಒಂದು ದೂರ ಶಿಕ್ಷಣ ಹಾಗೂ ಎರಡು ದೂರ ಶಿಕ್ಷಣದ ಮೂಲಕ) ಪ್ರವೇಶಾತಿ ಪಡೆಯಬಹುದು ಎಂದು ಸಂಯೋಜನಾಧಿಕಾರಿ
ನಾಗರಾಜ ಹಚ್.ಎನ್ ತಿಳಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು
ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳ ಕಲಿಕಾರ್ಥಿಗಳಿಗೆ ಆದ್ಯತೆ ನೀಡುವ ದೃಷ್ಟಿಯಿಂದ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯಲು ಕಲಿಕಾರ್ಥಿಗಳಿಗೆ ರೆಗ್ಯುಲರ್ ಶಿಕ್ಷಣಕ್ಕೆ ಸರಿಸಮನವಾದ ಉನ್ನತ ಶಿಕ್ಷಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಪಡೆಯಲು ಸುಸಜ್ಜಿತವಾದಂತಹ ಕಲಿಕಾರ್ಥಿ ಸಹಾಯ ಕೇಂದ್ರ ಹಾಗೂ ಪರೀಕ್ಷಾ ಕೇಂದ್ರ ಧಾರವಾಡದಲ್ಲಿದ್ದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸುಮಾರು 50 ಕ್ಕೂ ಹೆಚ್ಚು ಕೋರ್ಸಗಳ ಪ್ರವೇಶಾತಿಗೆ ಅವಕಾಶವಿದೆ. ಅದರಂತೆ ಪದವಿ ಹಂತ : ಬಿ.ಎ / ಬಿ.ಕಾಂ / ಬಿ.ಎಸ್ಸಿ/ ಬಿ.ಎಸ್ಸಿ ಐಟಿ / ಬಿ.ಎಸ್ಪಿ ಹೋಮ್ ಸೈನ್ಸ್/ ಬಿಬಿಎ / ಬಿಸಿಎ /ಬಿ.ಎಸ್.ಡಬ್ಲ್ಯೂ/ ಬಿ.ಎಲ್.ಐ.ಎಸ್ಸಿ / ಸ್ನಾತಕೋತ್ತರ ಹಂತ : ಎಂ.ಎ (ಸೆಮಿಸ್ಟರ್ ಹಂತದ ಕಲಿಕೆ) / ಕನ್ನಡ / ಇಂಗ್ಲೀಷ್ / ಹಿಂದಿ / ಉರ್ದು/ ಸಂಸ್ಕೃತ | ಇತಿಹಾಸ / ಅರ್ಥಶಾಸ್ತ್ರ/ ರಾಜ್ಯಶಾಸ್ತ್ರ / ಸಮಾಜಶಾಸ್ತ್ರ / ಸಾರ್ವಜನಿಕ ಆಡಳಿತ / ಶಿಕ್ಷಣ/ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ/ ಎಂ.ಕಾಂ/ ಎಂ.ಎಲ್.ಐ.ಎಸ್ಸಿ / ಎಂ.ಎಸ್.ಡಬ್ಲ್ಯೂ / ಎಂ.ಸಿ.ಎ / ಎಂ.ಬಿ.ಎ, (ಎಐಸಿಟಿ ಮಾನ್ಯತೆ ಪಡೆದಿದೆ) ಎಂ.ಎಸ್ಸಿ / ಭೌತಶಾಸ್ತ್ರ/ ರಸಾಯನಶಾಸ್ತ್ರ ಗಣಿತಶಾಸ್ತ್ರ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ ಬಯೋಟೆಕ್ನಾಲಜಿ/ ಮೈಕ್ರೋಬಯಾಲಜಿ/ ಮಾಹಿತಿ ತಂತ್ರಜ್ಞಾನ/ ಪರಿಸರ ವಿಜ್ಞಾನ/ ಗಣಕ ವಿಜ್ಞಾನ/ ಭೂಗೋಳಶಾಸ್ತ್ರ/ ಮನಃಶಾಸ್ತ್ರ ಮತ್ತು ಪಿಜಿ ಡಿಪ್ಲೋಮಾ / ಸರ್ಟಿಫಿಕೆಟ್ ಕೋರ್ಸಗಳಿಗೆ ಅಗತ್ಯ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಅಂಕಪಟ್ಟಿಗಳು ಹಾಗೂ ಆಧಾರ್ ಕಾರ್ಡ್, ಇತ್ತೀಚಿನ 8 ಪೋಟೋಗಳು ಸಹಿತ 3 ಸೇಟ್ ಝರಾಕ್ಸ್ ಪ್ರತಿಗಳು ಮತ್ತು ಮೂಲ ಅಂಕಪಟ್ಟಿಗಳೊಂದಿಗೆ ಪ್ರವೇಶ ಪಡೆಯಲು ಸುವರ್ಣವಕಾಶವಿದೆ.
ಇದರ ಜೊತೆಗೆ ಪ.ಜಾ / ಪ.ಪಂ /ಹಿಂದುಳಿದ ವರ್ಗ/ಅಲ್ಪ ಸಂಖ್ಯಾತ /ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯವನ್ನು ಸಮಾಜಕಲ್ಯಾಣ ಇಲಾಖೆಯಿಂದ ಪಡೆಯಲು ಅವಕಾಶವಿದೆ. ವಿಶೇಷವಾಗಿ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅರ್ಹರಾದ ಅಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಪತ್ನಿ ಮಕ್ಕಳು 306, ಬಿ.ಪಿ.ಎಲ್ ಕಾರ್ಡ (ಮಹಿಳೆ) 15%, ಡಿಫೆನ್ಸ್ / ಎಕ್ಸ್ ಸರ್ವಿಸಮನ್ 15, ತೃತಿಯ ಲಿಂಗಿಗಳು 100X, ಕೋವಿಡ್-19 ಗೆ ಮೃತರಾದ ತಂದೆ-ತಾಯಿಯ ಮಕ್ಕಳಿಗೆ 100%, ದೃಷ್ಟಿದೋಷ ಮಕ್ಕಳಿಗೆ 100%
ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಲು 29-02-2024 ರ ಕೊನೆಯ ದಿನಾಂಕದೊಳಗೆ 'ಉದ್ಯೋಗ ಭವನ' ಕೆ.ಹೆಚ್.ಎಸ್.ಎಂ ಕಟ್ಟಡದ 1ನೇ ಮಹಡಿ ಕೆ.ಸಿ.ಡಿ / ಹಳಿಯಾಳ ರಸ್ತೆ ಜೂಲ್ಲಿ ಸರ್ಕಲ್ ಧಾರವಾಡದ ಕಾರ್ಯಾಲಯದಲ್ಲಿ ನೇರವಾಗಿ ಬೇಟಿ ನೀಡಿ, ಅಥವಾ 9480062375 / 9480043794 ಈ ಮೊಬೈಲ್ ನಂಬರ್‌ಗೆ ಸಂಪರ್ಕಿಸಿ ಮಾಹಿತಿ ಪಡೆದು ಪ್ರವೇಶಾತಿ ಪಡೆಯಲು ನಾಗರಾಜ ಹೆಚ್. ಎನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ
ಮೊ.ನಂ : 9480062375.