ವಿದ್ಯಾರ್ಥಿಗಳೆ ದೇಶದ ಏಳಿಗೆಗೆ ಆಧಾರ -ಮಹಾಪೌರ ವೀಣಾ ಬಾರದ್ವಾಡಅಭಿಮತ.

ವಿದ್ಯಾರ್ಥಿಗಳೆ ದೇಶದ ಏಳಿಗೆಗೆ ಆಧಾರ -ಮಹಾಪೌರ  ವೀಣಾ ಬಾರದ್ವಾಡ ಅಭಿಮತ.
 ಧಾರವಾಡ  : 
ವಿದ್ಯಾರ್ಥಿಗಳು ಕಲಿಕೆಯ ಜೊತೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಸಮಾಜದ ಏಳಿಗೆಗೆ ಸನ್ನದ್ಧರಾದರೆ ದೇಶವು ಪ್ರಗತಿಯತ್ತ ಮುನ್ನಡೆಯುತ್ತದೆ ಎಂದು ಹು-ಧಾ ಮಹಾಪೌರರಾದ ವೀಣಾ ಬಾರದ್ವಾಡ  ಹೇಳಿದರು.
 ಅವರು ನಿಡವಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನೀವೆಲ್ಲರೂ ಕೂಡ ಉತ್ತಮ ವಿದ್ಯಾರ್ಥಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಾಜೇಶ್ವರಿ ಸಾಲಗಟ್ಟಿ  ಮಾತನಾಡಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಬಗ್ಗೆ ತಿಳಿಸುತ್ತಾ ಪೋಷಕರ ಮಾತುಗಳನ್ನು ಕೇಳುತ್ತ ಬೆಳೆಯಿರಿ.ಅದುವೇ ನಿಮ್ಮ ಬದುಕಿಗೆ ಅಡಿಪಾಯ ಎಂದು ತಿಳಿ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ಮಾತನಾಡಿ ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದತ್ತ ಗಮನಹರಿಸುತ್ತ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇತರರಿಗೆ  ಮಾದರಿಯಾಗಬೇಕು ಎಂದರು.
 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಸ್ಥಾಪಕರು ಮತ್ತು ಚೇರಮನ್ ರಾದ ಶ್ರೀಮತಿ ಪ್ರಭಾ ನಿಡವಣಿ  ಮಾತನಾಡಿ ಪ್ರಸ್ತುತ ಜಗತ್ತು ಮುನ್ನಲೆಯತ್ತ ಹೆಜ್ಜೆ ಹಾಕುತ್ತಿದ್ದು ಅದರೊಡನೆ ನಾವು ಮುನ್ನಡೆಯುತ್ತ 
ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ  ಸ್ಫೂರ್ತಿಯಾಗಿರಬೇಕು ಎಂದರು  ಗಣ್ಯರನ್ನು ಇಂದಿರಾ , ಲಕ್ಷ್ಮಿ ಆರ್ , ಮತ್ತು ಹನುಮಂತ ,ಲಕ್ಷ್ಮೀ ಸಿ  ಜಕ್ಕಪ್ಪ , ಪರಿಚಯಿಸಿದರು. ಪದ್ಮಿನಿ . ಸಿದ್ದಾರ್ಥ , ಶೋಭಾ , ಆಕಾಶ , ಗಣ್ಯರನ್ನು, ಸತ್ಕರಿಸಿದರು. ಪ್ರಥಮ ವರ್ಷದ ಮಿಸ್ಟರ್ ಫ್ರೆಶರ್, ಮಿಸ್ ಫ್ರೆಶರ್ ವಿದ್ಯಾರ್ಥಿಗಳ ಹೆಸರನ್ನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾದ ಕುಮಾರಿ ಶಾಲಿನಿ ಅವರು ಘೋಷಿಸಿದರು.ವಿವಿಧ ಕಾಲೇಜು,ಸಂಸ್ಥೆಗಳು ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನು ಹನುಮಂತ ಮೇಟಿ  ಘೋಷಿಸಿದರು.ಅಲ್ಲದೆ ಅಂತಾರಾಷ್ಟ್ರೀಯ ರಾಷ್ಟ್ರೀಯ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು  ಗೌರವಿಸಲಾಯಿತು.
 
ಕರುನಾಡ ಕಲಾ ಬಳಗ ಆಯೋಜಿಸಿದ ರಾಜ್ಯ ಮಟ್ಟದ ಕನ್ನಡ ಪ್ರತಿಭಾ ಪರೀಕ್ಷೆಯನ್ನು ಉತ್ತಮವಾಗಿ ಆಯೋಜಿಸಿದ್ದಕ್ಕಾಗಿ ಕಾಲೇಜು ಜಿಲ್ಲಾಮಟ್ಟದ ಅತ್ಯುತ್ತಮ ಪದವಿಪೂರ್ವ ಕಾಲೇಜು ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.ಅಲ್ಲದೆ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು ಕಾರ್ಯಕ್ರಮದಲ್ಲಿ ಉಪನ್ಯಾಸಕ ,ಉಪನ್ಯಾಸಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ಪದ್ಮಿನಿ ಪ್ರಾರ್ಥಿಸಿದರು.ಅವಿನಾಶ ಸ್ವಾಗತಿಸಿದರು.ಕಲ್ಪನಾ ಮತ್ತು ಅರ್ಪಿತಾ ನಿರೂಪಿಸಿದರು.ಪ್ರಾಚಾರ್ಯರಾದ ಭ್ಯಾಗ್ಯಶ್ರೀ ವಂದಿಸಿದರು.
ನವೀನ ಹಳೆಯದು

نموذج الاتصال