ಧಾರವಾಡ ಜಿಮಖಾನಾ ಕ್ಲಬ್ ದ್ವೈ ವಾರ್ಷಿಕ ಚುನಾವಣೆ;* *ಫಲಿತಾಂಶ ಪ್ರಕಟ; ಆಡಳಿತ ಮಂಡಳಿಗೆ ಐದು ಜನ ನೂತನ ಸದಸ್ಯರ ಆಯ್ಕೆ*

*ಧಾರವಾಡ ಜಿಮಖಾನಾ ಕ್ಲಬ್ ದ್ವೈ ವಾರ್ಷಿಕ ಚುನಾವಣೆ;* *ಫಲಿತಾಂಶ ಪ್ರಕಟ; ಆಡಳಿತ ಮಂಡಳಿಗೆ ಐದು ಜನ ನೂತನ ಸದಸ್ಯರ ಆಯ್ಕೆ*
*ಧಾರವಾಡ, ನ.05:* ಬ್ರಿಟಿಷ್ ಅಧಿಕಾರಿಗಳ ಕಾಲದಿಂದಲೂ ಅಸ್ತಿತ್ವದಲ್ಲಿರುವ ಮತ್ತು ಐತಿಹಾಸಿಕತೆಯನ್ನು ಹೊಂದಿರುವ ಧಾರವಾಡ ಜಿಮಖಾನಾ ಕ್ಲಬ್ ಗೆ ಇಂದು ದ್ವೈ ವಾರ್ಷಿಕ ಚುನಾವಣೆ ಜರುಗಿತು. ಐದು ಜನ ನೂತನ ಸದಸ್ಯರು ಕ್ಲಬ್  ಆಡಳಿತ ಮಂಡಳಿಗೆ ಬಹುಮತದಿಂದ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿದ್ದ ಧಾರವಾಡ ತಹಸಿಲ್ದಾರ ದೊಡ್ಡಪ್ಪ ಹೂಗಾರ ಅವರು ತಿಳಿಸಿದ್ದಾರೆ.

 ಈ ಕುರಿತು ಪ್ರಕಟಣೆ ನೀಡಿರುವ ಅವರು, ಕ್ಲಬ್ ನಿಯಮಾವಳಿಯಂತೆ ಕ್ಲಬ್ ದ ಅಧ್ಯಕ್ಷರು ಆಗಿರುವ ಧಾರವಾಡ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿಯ ನೂತನ ಸದಸ್ಯರ ಆಯ್ಕೆಗಾಗಿ ಕ್ಲಬ್ ಕಚೇರಿಯಲ್ಲಿ ಇಂದು ಚುನಾವಣೆ ಜರುಗಿಸಲಾಯಿತು.

ಆಡಳಿತ ಮಂಡಳಿಯ ಐದು ಸ್ಥಾನಗಳಿಗೆ ಆಯ್ಕೆ ಬಯಸಿ, ಒಟ್ಟು 14 ಜನ ಸದಸ್ಯರು ನಾಮಪತ್ರ ಸಲ್ಲಿಸಿ, ಚುನಾವಣೆಗೆ ಸ್ಪರ್ಧಿಸಿದ್ದರು.

ಇಙದು (ನ.05)  ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಕ್ಲಬ್ ದಲ್ಲಿ 296 ಜನ ಒಟ್ಟು ಸದಸ್ಯರಿದ್ದು, ಇಂದಿನ ಚುನಾವಣೆಯಲ್ಲಿ  194 ಜನ ಸದಸ್ಯರು ತಮ್ಮ ಮತ ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮತ ಏಣಿಕೆ ಕಾರ್ಯವನ್ನು ಮತದಾನದ ನಂತರ ಅಂದರೆ ಸಂಜೆ 4 ಗಂಟೆ ನಂತರ ಕೈಗೊಳ್ಳಲಾಯಿತು. ಮತ ಏಣಿಕೆ ನಂತರ ಆಡಳಿತ ಮಂಡಳಿಗೆ ಎರಡು ವರ್ಷಗಳ ಅವಧಿಗಾಗಿ ನೂತನ ಸದಸ್ಯರಾಗಿ  ಡಾ.ಮಹೇಶ ಪಾಟೀಲ ( ಪಡೆದ ಮತ 147), ಅಶೋಕ ವಿ ಬಳ್ಖಾರಿ (ಪಡೆದ ಮತ 94),
ಮಹೇಶ ಚಂ.ಹಿರೇಮಠ (ಪಡೆದ ಮತ 85), ಸುಭಾಸ ಬಿ.ಪಾಟೀಲ (ಪಡೆದ ಮತ 85),
ಜಯದೇವ ಜಿ.ಕೆ (ಪಡೆದ ಮತ 81) ಅವರು ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ದೊಡ್ಡಪ್ಪ ಹೂಗಾರ ಅವರು ತಿಳಿಸಿದ್ದಾರೆ.

ಧಾರವಾಡ ತಹಸಿಲ್ದಾರ ಕಚೇರಿಯ ಗ್ರೇಡ್2 ತಹಸಿಲ್ದಾರ ಹಣಮಂತ ಕೊಚ್ಚರಗಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

 ಧಾರವಾಡ ಜಿಮಖಾನಾ ಕ್ಲಬ್ ಆಪಿಸರ್ಸ್ ಕ್ಲಬ್ ಆಗಿದ್ದು, ಕ್ಲಬ್ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳು, ಉಪಾಧ್ಯಕ್ಷರಾಗಿರುವ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲೆಯ ಎಲ್ಲ ಅಧಿಕಾರಿಗಳ ವೃಂದವು ಆಡಳಿತ ಮಂಡಳಿಯ ನೂತನ ಸದಸ್ಯರನ್ನು ಅಭಿನಂದಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال