ಗೌಡ್ರ ಲೆಕ್ಕದಲ್ಲಿ ಇಲ್ಲ ಕುಲಕರ್ಣಿಯವರ ಲೆಕ್ಕದಲಿಲ್ಲ ಅನ್ನೋಕೆ ನೀವೇನು ಗುಮಾಸ್ತರೇ ?
ಧಾರವಾಡ 06 : ಮಾಜಿ ಉಪಮುಖ್ಯ ಮಂತ್ರಿಗಳಾದ ಗೋವಿಂದ ಕಾರಜೋಳವರು,ಕುಂದಗೋಳದಲ್ಲಿ ಬರ ವೀಕ್ಷಣೆ ಮಾಡಲು ಬಂದ ಸಂಧರ್ಭದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಲೇವಡಿ ಮಾಡಿದ್ದು ಹಾಸ್ಯಾಸ್ಪದ, ಯೋಜನೆಗಳಿಗೆ,ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳೇನು ಮನೆಯಿಂದ ಹಣ ಕೊಡುತ್ತಾರೆ ಎಂದಿರುವ ಅವರು ಅಧಿಕಾರ ಕಳೆದುಕೊಂಡು ಭ್ರಮನಿರಸರಾಗಿ ಮಾತಾನಾಡುತ್ತಿದ್ದಾರೆ ಎಂದೆನಿಸುತ್ತಿದೆ ಪಾಪ.
ಜಾತ್ಯಾತೀತ ನಿಲುವು ಹೊಂದಿರುವ ಕಾಂಗ್ರೆಸ್ ಯೋಜನೆಗಳು ಜಾತ್ಯಾತೀತ ಮತ್ತು ಪಕ್ಷಾತೀತ ಯೋಜನೆಗಳಾಗಿದ್ದು ಜನ ಯೋಜನೆಗಳ ಲಾಭ ಪಡೆದು ನೆಮ್ಮದಿಯಿಂದ ಇರುವ ಜನರ ಮದ್ಯೆ ಹುಳಿ ಹಿಂಡುವ ಕೆಲಸ ಬಿಡಿ.ನಿಮ್ಮ ಜನವಿರೋಧಿ ನೀತಿಯ ಕರಾಳಮುಖ ನೀವೆ ತೋರಿಸಿಕೊಂಡಿದ್ದೀರಿ,
ಮಾನ್ಯ ಮುಖ್ಯಮಂತ್ರಿಗಳಾದ ಸಿಧ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರವರನ್ನು ಜನ ಹಾಡಿ ಹೊಗಳಿತ್ತಿರುವುದನ್ನು ಕಂಡ ನೀವು ಮೈ ಪರಚಿಕೊಳ್ಳುತ್ತಿರುವದನ್ನು ನೋಡಿದರೆ ಮರುಕವೆನಿಸುತ್ತಿದೆ.
ಮಾನ್ಯ ಗೋವಿಙದ ಕಾರಜೋಳವರೆ,ಪಂಚರಾಜ್ಯ ಚುನಾವಣೆಗಳ ಈ ಸಂಧರ್ಭದಲ್ಲಿ ನಿಮ್ಮ ಕೇಂದ್ರದ ನಾಯಕರು ಘೋಷಿಸುತ್ತಿರುವ ಯೋಜನೆಗಳಿಗೆ ಪ್ರಧಾನಮಂತ್ರಿಗಳು ತಮ್ಮಮನೆಯಿಂದ ಹಣ ಕೊಡುತ್ತಾರೆಯೇ ?
ಈಗಾಗಲೇ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಬಹುತೇಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿಯಾಗಿದೆ,ಕೇವಲ ನಿಮ್ಮ ರಾಜಕೀಯಕ್ಕಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವದನ್ನು ಬಿಟ್ಟು, ನಿಮ್ಮ ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಿ
ಈಗಾಗಲೇ ಜನ ನಿಮ್ಮನ್ನು ತಿರಸ್ಕಾರ ಮಾಡಿಯಾಗಿದೆ,ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಜನ ನಿಮಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ.
ಧಾರವಾಡ 71 ರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಅರವಿಂದ ಏಗನಗೌಡರ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891