ಧಾರವಾಡ : ಇಲ್ಲಿನ ಹಳೆಯ ಡಿಎಸ್ ಪಿ ವೃತ್ತದಿಂದ ಹಳಿಯಾಳ ನಾಕಾವರೆಗೆ ಕೈಗೆತ್ತಿಕೊಂಡಿರುವ ರಸ್ತೆ ಸುಧಾರಣೆ ಕಾಮಗಾರಿಯನ್ನು ಬುಧವಾರ ಶಾಸಕ ಅರವಿಂದ ಬೆಲ್ಲದ ಪರಿಶೀಲಿಸಿದರು.
ನಂತರ ಕಾಮಗಾರಿ ಕುರಿತು ಮಾತನಾಡಿದ ಅವರು, ಶಾಸಕರ 12 ಕೋ.ರೂ.ಅನುದಾನ ದಲ್ಲಿ ಕೈಗೆತ್ತಿಕೊಂಡಿರುವ 900 ಮೀಟರ ಉದ್ದದ ಈ ರಸ್ತೆಯು ಸುಮಾರು 40 ಅಡಿ ಅಗಲವಿದೆ.
ಟೆಂಡರ್ ಶ್ಯೂರ್ ಮಾದರಿಯ ರಸ್ತೆ ಸುಧಾರಣೆ ಸಂದರ್ಭದಲ್ಲಿ ರಸ್ತೆಯ ಮಧ್ಯೆದಲ್ಲಿ ಅನಿಲ, ನೀರು ಕೊಳವೆ ಮಾರ್ಗಗಳು, ವಿದ್ಯುತ್ ಸಂಪರ್ಕ ಇನ್ನಿತರ ಮಾರ್ಗಗಳಿವೆ. ರಸ್ತೆ ಸುಧಾರಣೆ ಸಮಯದಲ್ಲಿ ಸಂಬಂದಿಸಿದ ಎಲ್ಲ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಕಾಮಗಾರಿ ನಿರ್ವಹಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಾಯಿತು. ರಸ್ತೆಯ ಎರಡೂ ಬದಿಯಲ್ಲಿನ ಮರಗಳನ್ನು ಉಳಿಸಿಕೊಂಡು ಕಾಮಗಾರಿ ಕೈಕೊಳ್ಳಬೇಕು.
ಅಗತ್ಯವಿದ್ದರೆ ಮಾತ್ರ ಮರಗಳ ರೆಂಬೆಗಳನ್ನು ತೆಗೆಯಬೇಕು.
ಒಟ್ಟಾರೆ ಜನರ ನಿರೀಕ್ಷೆಗೆ ತಕ್ಕಂತೆ ಶೀಘ್ರ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾರ್ಪೊರೇಟರ್ ಸುರೇಶ ಬೇದ್ರೆ, ಮುಖಂಡರಾದ ಬಸವರಾಜ ಗರಗ, ಶ್ರೀಕಾಂತ ರಾಶಿನಕರ, ನಾಗರಾಜ (ಪುಟ್ಟು) ನಾಯಕ, ರಮೇಶ ದೊಡವಾಡ, ಶಂಕರ ಕೊಟ್ರಿ, ಪಾಲಿಕೆಯ
ವಲಯಾಧಿಕಾರಿ ಶಂಕರ ಪಾಟೀಲ, ಅಭಿಯಂತರ
ಆನಂದ ಕಾಂಬ್ಳೆ, ವೀರೇಶ ಕುಂಬಾರ, ಅಕ್ಷತಾ ಹೀರೆಮಠ, ಭೀಮಣ್ಣ ನಾಯಕ,
ಎಸ್ .ವಿ.ಪಾಟೀಲ, ನಿಂಬಣ್ಣ ಹೊಸಮನಿ, ರಾಘವೇಂದ್ರ ದೂಡಮನಿ, ಮಂಜುನಾಥ ದಾಸ್ತಿಕೊಪ್ಪ ಇತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891