ಅಲಗಿವಾಡ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜನೆ*



*ಅಲಗಿವಾಡ ಶಾಲೆಯಲ್ಲಿ ವಿಶಿಷ್ಟವಾಗಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ಆಯೋಜನೆ*
ಗದಗ : ಶಿರಹಟ್ಟಿ ತಾಲೂಕಿನ ಅಲಗಿಲವಾಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ಈ ಕಾರ್ಯಕ್ರಮವನ್ನು ಸೌಮ್ಯ ಬೆಳ್ಳಟ್ಟಿ ಹಾಗೂ ಸಂಗಡಿಗರ ಪ್ರಾರ್ಥನಾ ಗೀತೆ ಯೊಂದಿಗೆ ಪ್ರಾರಂಭಿಸಲಾಯಿತು ಮಕ್ಕಳು ವಿಶೇಷ ಉಡುಪನ್ನು ಧರಿಸಿದ್ದು ಈ ಕಾರ್ಯಕ್ರಮಕ್ಕೆ ಮೆರಗನ್ನು ತಂದಿತ್ತು ಮಕ್ಕಳೆ ಅಧ್ಯಕ್ಷರು ಅತಿಥಿಗಳನ್ನಾಗಿ ಮಾಡಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರಧಾನಗುರುಗಳಾದ ಹಾಲೇಶ ಎಸ್ ಜಕ್ಕಲಿ ಮಾತನಾಡಿ ಪಂಡಿತ ಜವಹರಲಾಲ ನೆಹರು ರವರ  ಮನೆತನದ ಪೂರ್ವಿ ಹೆಸರು ರಾಜಕೌಲ ಅಂತಾ ಇತ್ತು ಇವರ ಪೂರ್ವಜರ ಪಾಂಡಿತ್ಯ ಮೆಚ್ಚಿ ದಿಲ್ಲಿ ದೊರೆ 1716 ರಲ್ಲಿ ಇವರಿಗೆ ಕಾಲುವೆಯ ಸಮೀಪ ವಿರುವ ಭೂಮಿಯನ್ನು ದಾನವಾಗಿ ನೀಡಿದರು  ಆ ಕಾಲುವೆಯ ಹೆಸರು ನಹರ ಅಂತಾ ಇತ್ತು ಮುಂದೆ ಅವರ ಮನೆತನದ ಹೆಸರು ನೆಹರು ಅಂತಾ ಬದಲಾಯಿತು .ಇವರ ಜನ್ಮದಿನವನ್ನು
ಮಕ್ಕಳ ಜನ್ಮದಿನಾಚರಣೆಯನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ .
ಜವಹರಲಾಲ ನೆಹರುರವರು 1869 ನವಂಬರ 14 ರಂದು ಅಲಹಾಬಾದನಲ್ಲಿ ಜನಿಸಿದರು ತಂದೆ ಮೋತಿಲಾಲ ನೆಹರು ತಾಯಿ ಸ್ವರೂಪರಾಣಿ ಇವರು 16 ನೆಯ ಮಾರ್ಚ 1916 ರಲ್ಲಿ ಮದುವೆಯಾಗಿದ್ದು ಪತ್ನಿಹೆಸರು ಕಮಲಾ ಇವರಿಗೆ ಇಂದಿರಾಗಾಂಧಿ ಎಂಬ ಮಗಳಿದ್ದಳು ಇವರಿಗೆ ಮಕ್ಕಳ ಮೇಲೆ ಬಹಳಷ್ಟು ಪ್ರೀತಿ ಇತ್ತು ಇಂದಿನ ಮಕ್ಕಳು ನಮ್ಮ ದೇಶದ ಆಸ್ತಿ ಅದಕ್ಕಾಗಿ ನನ್ನ ದಿನಾಚರಣೆ ಬದಲಾಗಿ ಮಕ್ಕಳ ದಿನಾಚರಣೆ ಆಚರಿಸಲು ಕರೆ ನೀಡಿದರು .
ಭಾರತ ದೇಶದ ಪ್ರಥಮ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದು 15/08/1947 ರಿಂದ 25/05/1964 ರವರೆಗೆ ದೇಶದ ಚುಕ್ಕಾಣಿ ಹಿಡಿದಿದ್ದರು ಇವರಿಗೆ 1955 ರಲ್ಲಿ ಭಾರತ ರತ್ನ ಪ್ರಶಸ್ತಿ ಒಳಗೊಂಡಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿದ್ದರು ಇವರ ಧರ್ಮಪತ್ನಿ 1936 ರಲ್ಲಿ ಅನಾರೋಗ್ಯದಿಂದ ಸ್ವಿಟ್ಜರ್ಲೆಂಡ್‌‌ ನಲ್ಲಿ ನಿಧನರಾಗಿದ್ದು ಈ ಸುದ್ದಿ ಅವರ ಮನಸ್ಸಿಗೆ ಬಹಳ ನೊವನ್ನುಂಟು ಮಾಡಿತ್ತು ಆದರೂ ಎದೆಗುಂದದೆ ದೇಶದ ಅಭ್ಯೂದಯಕ್ಕಾಗಿ ಶ್ರಮವಹಿಸಿದರು .ಕೊನೆಗೆ ಜವಹರಲಾಲ ನೆಹರುರವರು 27 ಮೇ 1964 ರಂದು ಇಹಲೋಕ ತೇಜಿಸಿದರು .ಎಂದು ಮಕ್ಕಳಿಗೆ ಅವರ ಜೀವನ ಚರಿತ್ರೆ ಬಗ್ಗೆ ತಿಳುವಳಿಕೆ ನೀಡಿದರು .ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಭೋಜನದ ವ್ಯವಸ್ಥೆ ಕೂಡಾ ಮಾಡಲಾಗಿತ್ತು .
ಈ ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾದ ಚಾಂದಬಿ ದೊಡ್ಡಮನಿ , ಸದಸ್ಯರಾದ ಮಲ್ಲಿಕಾರ್ಜುನ ಮಾಯಕಾರ , ಫಕ್ಕಿರೇಶ ಕಟ್ಟಿಮನಿ , ಗಗನಾ ಬಸಾಪುರ , ಜಗದೀಶ ನಂದಿಕೋಲ , ಫಾತಿಮಾ ಟಪಾಲನವರ , ಸೌಜನ್ಯ ಬೆಳ್ಳಟ್ಟಿ , ಸಮೀರ ನದಾಫ , ಸರೋಜಾ ಹರಿಜನ , ಸಮರ್ಥ ಇ ಎಂ , ಜಾಸ್ಮಿನಭೆಗಂ ನದಾಫ , ಪ್ರಧಾನ ಗುರುಗಳಾದ ಹಾಲೇಶ ಎಸ್ ಜಕ್ಕಲಿ , ಗುರುಮಾತೆಯರಾದ ಜಿ  ಎಚ್ ರಡ್ಡೇರ, ಅಂಗನವಾಡಿ ಗುರುಮಾತೆಯರಾದ ಮಹಾದೇವಿ ಹಸವಿಮಠ ಅಡುಗೆ ಸಿಬ್ಬಂದಿ ಒಳಗೊಂಡಂತೆ ಗ್ರಾಮದ ಗುರುಹಿರಿಯರು ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891
ನವೀನ ಹಳೆಯದು

نموذج الاتصال