ಸಾಧಕಿಗೆ ಗೌರವ ಪೂರ್ವ ಸ್ವಾಗತದೊಂದಿಗೆ ಅಭಿನಂದನೆ.
ಧಾರವಾಡ 16 :
ಜಿಲ್ಲಾ ಟೆಕಾಂಡೋ ಸಂಸ್ಥೆ ಧಾರವಾಡ ಹಾಗೂ ಕನಾ೯ಟಕ ಕಲಾ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ, ಅದಿತಿ, ಪರಪ್ಪ, ಕ್ಕ್ಷಾತ್ರತೇಜ ಇವಳು ಇತ್ತಿಚಿಗೆ ಗೋವಾದಲ್ಲಿ ನಡೆದ 17ನೇ ನ್ಯಾಷನಲ್ ಗೇಮ್ಸ್ 2013 ರ ಮಹಿಳೆಯರ ಟೇಕ್ವಾಂಡೂ ಕ್ರಿಡೆಯಲ್ಲಿ 53 ಕೆ.ಜಿ ವಿಭಾಗದಲ್ಲಿ ಕರ್ನಾಟಕ ತಂಡವನ್ನು 20 ವರ್ಷಗಳ ಬಳಿಕ ಆಯ್ಕೆಯಾಗುವದಲ್ಲದೆ ಕಂಚಿನ ಪದರೊಂದಿಗೆ ನಮ್ಮ ಜಿಲ್ಲೆಗೆ ಹಾಗೂ ರಾಜ್ಯ ಕ್ಕೆ ಕೀತಿ೯ ತಂದಿರುತ್ತಾರೆ. ಈ ಕ್ರೀಡಾಕೂಟದಲ್ಲಿ ನಮ್ಮದೇ ಸಂಸ್ಥೆಯ ವಿದ್ಯಾರ್ಥಿಯಾದ ಕುಮಾರ ದಿತಿಷ ದಿನಕರ್ ಶೆಟ್ಟಿ ಕೂಡ ಆಯ್ಕೆಯಾಗಿ ಪದಕದಿಂದ ಒಂದು ಹೆಜ್ಜೆ ಹಿಂದುಳಿದಿರು
ತ್ತಾನೆ ಎಂದು ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾದ ಆನಂದ ಕುಲಕರ್ಣಿ ಹೇಳಿದರು. ಪತ್ರಿಕಾಗೂಷ್ಟಿಯಲ್ಲಿ ಮಾತನಾಡಿದ ಅವರು
ಇವಳ ಸಾಧನೆಯು ಹೀಗೆ ನಿಲ್ಲದೆ ಗೋವಾದಿಂದ ನೇರವಾಗಿ ರಾಜಸ್ಥಾನದ ಜಿ ಜಿ ಟಿ ಯುನಿವರ್ಸಿಟಿಯಲ್ಲಿ ನಡೆದ ಉತ್ತರ ಪಶ್ಚಿಮ ವಿಶ್ವವಿದ್ಯಾಲಯಗಳ ಟೆಸ್ಕಾಂಡೋ, ಕೀಡಾಕೂಟದಲ್ಲಿ ಕರ್ನಾಟಕ ಮಹಾವಿದ್ಯಾಲಯ, ಧಾರವಾಡ ತಂಡದಿಂದ ಪ್ರತಿನಿಧಿಸಿ
ಪ್ರತ್ಯೇಕ ಎರಡು ಪದಕಗಳನ್ನು ಗಳಿಸಿರುತ್ತಾಳೆ, ಮಹಿಳೆಯರ 53 ಕೆಜಿ ವಿಭಾಗದ ಪೈಟಿಂಗ ಕ್ರೀಡೆಯಲ್ಲಿ ಕಂಚಿನ ಪದಕ ,ಮಹಿಳೆಯರ ಪೂಮಸೆ ಕೀಡೆಯಲ್ಲಿ ಬೆಳ್ಳಿ ಪದಕ ಪಡೆದು ಮುಂಬರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಟೇಕಾಂಡೋ ಕ್ರೀಡಾಪಟ 23-24 ಆಯ್ಕೆಯಾಗಿರುತ್ತಾಳೆ. ಇಂತಹ ಅತ್ಯು ನ್ನತ್ಯುನ್ನತ ಅಂತರಾಷ್ಟ್ರೀಯ ಮತ್ತು ರಾಷ್ಟ್ರಮಟ್ಟದ ಸಾಧನೆಗಳನ್ನು ಪರಿಗಣಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಕೊಡಮಾಡುವ ಧೀಮಂತ ವ್ಯಕ್ತಿ ಸನ್ಮಾನ ಪುರಸ್ಕಾರವನ್ನು ಸಹ ಪಡೆದಿರುತ್ತಾಳೆ.
ಇವಳೊಂದಿಗೆ ಇದೇ ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ವಿದ್ಯಾರ್ಥಿಯಾರ ಕುಮಾರ್, ನಮಿತಕುಮಾರ್ ಸುಣಗಾರ ಪರುಷರ 63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾನೆ.
ಇದಲ್ಲದೆ ನಮ್ಮ ಟೇಕ್ಕಾಂಡೂ ಸಂಸ್ಥೆಯ ಕ್ರೀಡಾಪಟಳಾದ ಮಹಿಳೆಯರ ವಿಭಾಗದಲ್ಲಿ ಸ್ಫೂರ್ತಿ ನಿಕ್ಕಂ 49 ಕೆ.ಜಿ ವಿಭಾಗ, ಸಹನಾ ಗೂಕಾವಿ 62 ಕೆಜಿ ವಿಭಾಗ, ಧಾಮಿನಿ ಬೆಣ್ಣಿಕೂಪ್ಪ 73 ಕೆಜಿ ವಿಭಾಗ. ಸಂಜನಾ ಬಳ್ಳಾರಿ 73.ಕೆ ಜಿ ಮೇಲ್ಪಟ್ಟ ವಿಭಾಗ ಹಾಗೂ ಪೂಮಸೆ ಗುಂಪು ಕ್ರಿಡೆಯಲ್ಲಿ ಶ್ವೆತಾ ನಾಯಕರ , ಭವಾನಿ, ಕೃಪಾ ಸುಂಕದ ಇವರೆಲ್ಲರೂ ಪ್ರೀಕ್ವಾ ಟರ ಫೈನಲ್ ವರೆಗೂ ತಲುಪಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಟೆಕ್ನಾಂಡೋ ಕ್ರೀಡೆಗೆ ಆಯ್ಕೆಯಾಗಿರುತ್ತಾರೆ ಎಂದರು.
ಇವರೊಂದಿಗೆ ತರಬೇತುದಾರರಾಗಿ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾ ಟೇಕ್ವಾಂಡೂ ಸಂಸ್ಥೆ, ಧಾರವಾಡ ಸಂಸ್ಥೆಯ ಸಂಸ್ಥಾಪಕ ಪರಪ್ಪ ಎಸ್ ಕೆ ವ್ಯವಸ್ಥಾಪಕರಾಗಿ ಶೂಭಾ ರಸಾಳಕರ ಸ್ಪದಾ೯ಳುಗಳೂಂದಿಗೆ ಇದ್ದರು.
ಬಾಕ್ಸ
ಇದರಲ್ಲಿ ವಿಷಾದನೀಯ ಸಂಗತಿಯೆಂದರೆ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ನ್ಯಾಷನಲ್ ಗೇಮ್ಸ್ ಕ್ರೀಡಾಕೂಟಕ್ಕೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರದಿಂದ ಯಾವುದೇ ತರಹದ ಪ್ರೋತ್ಸಾಹ ಅಂದರೆ ಸ್ಪೋರ್ಟ್ಸ್ ಕಿಟ್ಟ, ಪ್ರಯಾಣ ಭತ್ತೆ, ಗುರುತಿಸಲು ವಿಫಲವಾಗಿರುವುದು ಸಂಸ್ಥೆ ಹಾಗೂ ಕ್ರಿಡಾಪಟುಗಳಿಗೆ ಬೇಸರದ ಸಂಗತಿಯಾಗಿದೆ.
ಈ ಸಾಧನೆಗಳನ್ನು ಜಿಲ್ಲಾ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರು, ಮಾಜಿ ಮಹಾಪೌೌ ಹಾಗೂ ಈಗಿನ ಸಭಾ ಅಧ್ಯಕ್ಷರು, ಅದ ಶಿವು ಹಿರೇಮಠ, , ಉಪಾಧ್ಯಕ್ಷರು ಮತ್ತು ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಎಸ್ ತಾಳಿಕೋಟಿ, ಸಹ ತರಬೇತುದಾರರಾದ ಅನಂದ ಕಟದಾಳ ಹಾಗೂ ಪಾಲಕರು ಸೇರಿಸಿ ಗೌರವ ಸನ್ಮಾನ ದೊಂದಿಗೆ ಸ್ವಾಗತಿಸಿ, ಹರ್ಷ ದೊಂದಿಗೆ ಕ್ರೀಡಾಪಟುಗಳಿಗೆ
ಅಭಿನಂದನೆ ಸಲ್ಲಿಸಿರುತ್ತಾರೆ.
ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ತಾಳಿಕೋಟೆ ಮುಂತಾದವರು ಇದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891