*ಧಾರವಾಡ (ಕರ್ನಾಟಕ ವಾರ್ತೆ) ಅ.01:* ಸ್ವಚ್ಛತಾ ದಿವಸ್ ನಿಮಿತ್ತ ಧಾರವಾಡದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ವತಿಯಿಂದ ಧಾರವಾಡ ಹಳೆ ಬಸ್ ನಿಲ್ದಾಣ ಆವರಣದಲ್ಲಿ ಧಾರವಾಡದ ಎನ್‍ಎಫ್‍ಎಸ್‍ಯು ನಿರ್ದೇಶಕ ಪೆÇ್ರ. ಡಾ. ಮಂಜುನಾಥ ಘಾಟೆ, ಈವೆಂಟ್ ಸಂಯೋಜಕ ಡಾ. ನಿಲೇಶ ಪಾಂಚಾಲ್ ಮತ್ತು ಈವೆಂಟ್ ಮೇಲ್ವಿಚಾರಕ ಡಾ.ಪ್ರಮೋದ್ ಗಿಣಿವಾಲದ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಧಾರವಾಡ ಗ್ರಾಮೀಣ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪಗೌಡರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಎನ್‍ಎಫ್‍ಎಸ್‍ಯು ಧಾರವಾಡದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಕೆಎಸ್‍ಆರ್‍ಟಿಸಿಯ ವಿಭಾಗೀಯ ಆಯುಕ್ತರು, ಸ್ವಚ್ಛತಾ ದಿವಸ್‍ವನ್ನು ಬೆಂಬಲಿಸಲು ಮತ್ತು ಆಚರಿಸಲು ಅಂದಾಜು 6400 ಚದರ ಮೀಟರ್ ಪ್ರದೇಶದಲ್ಲಿನ ಉಪನಗರ ಮತ್ತು ಗ್ರಾಮೀಣ ಬಸ್ ಟರ್ಮಿನಲ್ ಧಾರವಾಡದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಯು "ಹರ್ ನಾಗರಿಕ್ ಕಾ ಯಹೀ ಸಪ್ನಾ, ಸ್ವಚ್ಛ್ ಹೋ ಭಾರತ್ ಅಪ್ನಾ" ಎಂಬ ಘೋಷಣೆಯೊಂದಿಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಭಿತ್ತಿಪತ್ರವನ್ನು ಸಿದ್ಧಪಡಿಸಿ, ಸಾರ್ವಜನಿಕರಿಗೆ ಹಂಚಿ ಜಾಗೃತಿ ಮೂಡಿಸಿದರು.
**********
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891