ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ ನಿಷೇಧಕ್ಕೆ ಸ್ವಾಗತ. - ರಾಬರ್ಟ ದದ್ದಾಪುರಿ.
ಧಾರವಾಡ 20 : ಇನ್ನು ಮಂದೆ ಎಲ್ಲ ಸಭೆ ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಇವರಿಂದ ಜಿಲ್ಲಾಡಳಿತಗಳಿಗೆ ಸುತ್ತೋಲೆ. ಈ ಕುರಿತು ಸೆ ದಿ 20.ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ವಂದಿತಾ ಶರ್ಮಾ ಎಲ್ಲ ಇಲಾಖೆ ಹಾಗೂ ಜಿಲ್ಲಾಡಳಿತಗಳಿಗೆ ಸುತ್ತೋಲೆಯನ್ನು ಹೊರಡಿಸಿ ಇನ್ನುಂದೆ ಯಾವುದೇ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರಿನ ಬಳಕೆ, ಸರಬರಾಜು ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದಿಂದ ಆಯೋಜಿಸಲ್ಪಡುವ ಸಭೆ ಸಮಾರಂಭ ಮತ್ತು ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆ ನಿಷೇಧಿಸಿ 2018ರ ಸಪ್ಟೆಂಬರ್‌ನಲ್ಲಿ ಸರಕಾರವು ಆದೇಶವನ್ನು ಹೊರಡಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯ, ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಂದ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಈ ಸರಕಾರಿ ಆದೇಶ ಪಾಲನೆಯಾಗುತ್ತಿಲ್ಲ. ಆದುದರಿಂದ ಸರಕಾರದ ಮುಖ್ಯ ಕಾರ್ಯದರ್ಶಿಗಳು ಪುನಃ ಜಿಲ್ಲಾಡಳಿತಗಳಿಗೆ ಸುತ್ತೋಲೆಯನ್ನು ಹೊರಡಿಸಿ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ವಿತರಿಸುವುದು ಸಮರ್ಥನೀಯವಲ್ಲ ಎಂದು ತಿಳಿಸಿದ್ದಾರೆ. ಮುಂದುವರೆದು ಇಂತಹ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್ ಲೋಟಗಳಲ್ಲಿ ನೀರು ಸರಬರಾಜು ಮಾಡಲು ಕ್ರಮ ವಹಿಸಲು ಸರಕಾರವು ಮನಃ ಆದೇಶವನ್ನು ಮಾಡಿದೆ.
ಇದು ಸರಕಾರದ ಮುಖ್ಯ ಕಾರ್ಯದರ್ಶಿಗಳ ಈ ಸರಕಾರಿ ಆದೇಶವು ಅತ್ಯಂತ ಸೂಕ್ತವಾದದ್ದು ಆಗಿರುತ್ತದೆ. ಇದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಸ್ವಾಗತಿಸುತ್ತದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರಕಾರವು ಮನಃ ಸುತ್ತೋಲೆಯನ್ನು ಜಿಲ್ಲಾಡಳಿತಗಳಿಗೆ ಹೊರಡಿಸಿರುವುದು ಸೂಕ್ತವಾಗಿದೆ ಹಾಗೂ ಅನಿವಾರ್ಯವೂ ಆಗಿತ್ತು. ಅಲ್ಲದೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಮರ್ಪಕವಾಗಿದೆ.
ಒಂದು ವೇಳೆ ಜಿಲ್ಲಾಡಳಿತವು ಸದರಿ ಸುತ್ತೋಲೆಯನ್ನು ಪುನಃ ಕಡೆಗಣಿಸಿದ್ದೇ ಆದರೆ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಗಾಗಿ ರಾಬರ್ಟ ದದ್ದಾಪುರಿ, KPCC ಸದಸ್ಯರು ಹಾಗೂ ಕೋಆರ್ಡಿನೇಟರ್, KPCC ಇವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಆನಂದ ಜಾಧವ,ಜೇಮ್ಸ್ ಯಾಮಾ,ಬಿ.ಎಚ್. ಪೂಜಾರ ಶ್ರೀಮತಿ ಗೀತಾ ಥಾಂವಸಿ ಉಪಸ್ಥಿತರಿದ್ದರು.
ಸನ್ಮಾನ್ಯ ಸಿದ್ದರಾಮಯ್ಯ, ಗೌರವಾನ್ವಿತ ಮುಖ್ಯ ಮಂತ್ರಿಗಳು, ಕರ್ನಾಟಕ ಸರಕಾರ ವಿಧಾನಸೌಧ, ಬೆಂಗಳೂರು ಸನ್ಮಾನ್ಯ ಡಿ.ಕೆ. ಶಿವಕುಮಾರ, ಗೌರವಾನ್ವಿತ ಉಪಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ವಿಧಾನಸೌಧ, ಬೆಂಗಳೂರು ಹಾಗೂ ಅಧ್ಯಕ್ಷರು, KPCC 'ಕಾಂಗ್ರೆಸ್ ಭವನ', ಕ್ವಿನ್ಸ್ ರೋಡ, ಬೆಂಗಳೂರು, ಗೌರವಾನ್ವಿತ ಶ್ರೀ ಈಶ್ವರ ಖಂಡ್ರೆ ಸಚಿವರು, ಅರಣ್ಯ ಹಾಗೂ ಪರಿಸರ ಸಂರಕ್ಷಣಾ ಇಲಾಖೆ, ಕರ್ನಾಟಕ ಸರಕಾರ ವಿಧಾನಸೌಧ, ಬೆಂಗಳೂರು ಇವರಿಗೆ ಮನವಿಯ ಪ್ರತಿ ರವಾನಿಸಲಾಗಿದೆ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891