4 ತಿಂಗಳ ಬಾಕಿ ವೇತನ ಬಿಡುಗಡೆ ಹಾಗೂ ಇತರೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಅಂಗನವಾಡಿ ಕಾರ್ಯಕರ್ತೆಯರ ಮನವಿ.
ಧಾರವಾಡ :
ಜಿಲ್ಲೆಯಾದ್ಯಂತ ಮಕ್ಕಳ ಆರೋಗ್ಯದ ವಿಷಯವಾಗಲಿ,ಅಥವಾ ಅವರಿಗೆ ಪೌಷ್ಟಿಕ ಆಹಾರ ತಲುಪಿಸುವ ವಿಷಯವಾಗಿರಲಿ ಕಳೆದ 50 ವರ್ಷಗಳಿಂದ ಈ ದಿಶೆಯಲ್ಲಿ ಸೇವೆ ಸಲ್ಲಿಸುತ್ತಿರುವರು ಅಂಗನವಾಡಿ ಕಾರ್ಯಕರ್ತೆರು ಮತ್ತು ಸಹಾಯಕರು. ಐಸಿಡಿಎಸ್ ಯೋಜನೆಯನ್ನು ಜಿಲ್ಲೆಯ ಪ್ರತಿಯೊಂದು ಮನೆಗೆ ಮುಟ್ಟಿಸಿ ಸದೃಢ ಮಕ್ಕಳನ್ನು ಬೆಳೆಸಲು ಪ್ರತಿ ಮಗುವನ್ನು ತಮ್ಮ ಮಗುವೆಂದೇ ಸಲಹುತ್ತಿರುವವರು ಇದೇ ತಾಯಂದಿರೇ ಅಗಿದ್ದು ಆದರೆ ಇವರ ಗೋಳು-ಸಮಸ್ಯೆಗಳು ಮಾತ್ರ ಯಾರಿಗೂ ಬೇಡವಾಗಿವೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ನಾಲ್ಕು ತಿಂಗಳಿನಿಂದ ಇವರಿಗೆ ಗೌರವದನ ಬಾರದೇ ಇವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಇಂದು ನಿಯಮಿತವಾಗಿ ಸಂಬಳ ದೊರಕುವ ಸರ್ಕಾರಿ ನೌಕರರೇ ಒಂದು ತಿಂಗಳು ವೇತನ ಬರದಿದ್ದಾಗ ಪರದಾಡುವ ಇಂದದಿನ ಬೆಲೆಯೇರಿಕೆಯ ಪರಿಸ್ಥಿತಿಯಲ್ಲಿ ನಾಲ್ಕು ತಿಂಗಳಿನಿಂದ ಇವರುಗಳು ಹೇಗೆ ಬದುಕನ್ನು ಎದುರಿಸಿರಬಹುದು?
ಸರ್ಕಾರ ಯೋಚಿಸಬೇಕು ,
ಮತ್ತೊಂದೆಡೆ ಇವರುಗಳು ಎದುರಿಸುತ್ತಿರುವ ಸಮಸ್ಯೆಗಳೂ ಹವಲಾರು. ಮಕ್ಕಳಿಗೆಂದು ಕೊಡುವ ಮೊಟ್ಟೆಗಳು ಕೇಂದ್ರಕ್ಕೆ ಬರುವುದು ತಿಂಗಳ ಮೊದಲನೇ ದಿನ ಬರುವುದು ಬಿಟ್ಟು 15 ನೇ ತಾರೀಕಿಗೆ ಬರುತ್ತವೆ. ಅದರಲ್ಲಿ ಕೊಳತಿರುವ ಮೊಟ್ಟೆಗಳು ಬರುತ್ತಿದ್ದು ಯಾವುದೇ ಗುಣಮಟ್ಟ ಇರುವುದಿಲ್ಲ. ಇನ್ನೂ ಹಲವಾರು ಭಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಹಲವಾರು ತಿಂಗಳ ಬಾಡಿಗೆ ಬಂದಿರುವುದಿಲ್ಲ.
ಇಂತಹ ಹಲವಾರು ಜ್ವಲಂತ ಸಮಸ್ಯೆಗಳಿಂದ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಬಳಲುತ್ತಿದ್ದು ಅವರ ನ್ಯಾಯಯುತ ಹಕ್ಕುಗಳಿಗೆ ಹೋರಾಡುತ್ತಿರುವ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ(ರಿ) ದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ಕಳೆದ 4 ತಿಂಗಳುಗಳಿಂದ ಬಾಕಿ ಇರುವ ಗೌರವದನ ಈ ಕೂಡಲೇ ಬಿಡುಗಡೆ ಮಾಡಿ.
ಐದು ತಿಂಗಳಿನಿಂದ ಬಾಕಿ ಇರುವ ತರಕಾರಿ ಬಿಲ್ಲನ್ನು ತಕ್ಷಣ ಪಾವತಿಸಿ.
ಧಾರವಾಡ ಶಹರ ವೃತ್ತದಲ್ಲಿ ಕೂಡಲೇ ಬಾಕಿ ಇರುವ ಮೊಟ್ಟೆ ಬಿಲ್ ಮತ್ತು ಬಾಡಿಗೆ ಬಿಲ್ಲುಗಳನ್ನು ಈ ಕೂಡಲೇ ಪಾವತಿಸಿ. 4. ಹೆಚ್ ಎನ್ ಎಸ್ ಸರ್ವೆಯ ಪ್ರೋತ್ಸಾಹ ಧನವಾದ 500 ರೂ.ಕೂಡಲೇ ಬಿಡುಗಡೆ ಮಾಡಿ.
ಜಿಲ್ಲೆಯಲ್ಲಿ ನಿವೃತ್ತಿ ಹೊಂದಿದ ಕಾರ್ಯಕರ್ತರಿಗೆ ಆದೇಶದಂತೆ ಇಡಿಗಂಟನ್ನು ಯಾವುದೇ ವಿಳಂಬವಿಲ್ಲದೆ ನೀಡಿರಿ. . ರಾಜ್ಯ ವ್ಯಾಪಿ ಒಂದೇ ಸಮವಸ್ತ್ರ ನೀಡಲು ಕ್ರಮ ಕೈಗೊಳ್ಳಿ,
ಸೇವಾ ಹಿರಿತನದ ಆಧಾರದ ಮೇಲೆ ಅರ್ಹ ಕಾರ್ಯಕರ್ತರಿಗೆ ಮೇಲ್ವಿಚಾರಕರಾಗಲು ಮುಂಬಡ್ತಿ ನೀಡಿ. ಐಸಿಡಿಎಸ್ ಯೋಜನೆ ಯ ಕೆಲಸಗಳನ್ನು ಬಿಟ್ಟು ಉಳಿದ ಯಾವುದೇ ಕೆಲಸಗಳನ್ನು ಕಾರ್ಯಕರ್ತೆಯರಿಗೆ ವಹಿಸಬೇಡಿ. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ. ಅಂಗನವಾಡಿ ಕೇಂದ್ರಗಳಿಗೆ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ.
ರಾಜ್ಯ ಕಾರ್ಯದರ್ಶಿಗಳು
ಎಂ.ಉಮಾದೇವಿ
ಜಿಲ್ಲಾ ಸಂಚಾಲಕರು
ಭುವನಾ ಬಳ್ಳಾರಿ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891