ದೇವರ ಹುಬ್ಬಳ್ಳಿ ಸಿದ್ದಾಶ್ರಮದಲ್ಲಿ ಲಘು ರುದ್ರಯಾಗ ಯಜ್ಞಯಾಗದಲ್ಲಿನ ವೈಜ್ಞಾನಿಕತೆ ಅರಿಯಬೇಕಿದೆ : ಸಿದ್ದಶಿವಯೋಗಿ ಶ್ರೀ

ದೇವರ ಹುಬ್ಬಳ್ಳಿ ಸಿದ್ದಾಶ್ರಮದಲ್ಲಿ ಲಘು ರುದ್ರಯಾಗ 
ಯಜ್ಞಯಾಗದಲ್ಲಿನ ವೈಜ್ಞಾನಿಕತೆ ಅರಿಯಬೇಕಿದೆ : ಸಿದ್ದಶಿವಯೋಗಿ ಶ್ರೀ
ಧಾರವಾಡ : ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಯಜ್ಞಯಾಗಾದಿಗಳನ್ನು ವಿಶ್ವ ಕಲ್ಯಾಣಕ್ಕಾಗಿ ಋಷಿಮುನಿಗಳು ಶೋಚಿಸಿದ್ದು, ಅದರಲ್ಲಿನ ವೈಜ್ಞಾನಿಕತೆ ಅರಿಯಬೇಕಿದೆ ಎಂದು ದೇವರಹುಬ್ಬಳ್ಳಿ ಸಿದ್ದಾಶ್ರಮದ ಸಿದ್ದ ಶಿವಯೋಗಿ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು 
ಅಧಿಕ ಮಾಸದ ಸೋಮವಾರದಂದು ಸಿದ್ದಾಶ್ರಮದಲ್ಲಿ ಹಮ್ಮಿಕೊಂಡಿದ್ದ ಲಘು ರುದ್ರಯಾಗ ಮತ್ತು ಸಹಸ್ರ ಲಿಂಗ ಬಿಲ್ವಾರ್ಚನೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 
ಯಜ್ಞದ ಫಲವನ್ನು ಕೆಲವರು ಟೀಕೆ ಮಾಡುತ್ತಾರೆ. ಆದರೆ ಅದು ವಾತಾವರಣವನ್ನು ಶುದ್ಧೀಕರಿಸುತ್ತದೆ. ದೇವತೆಗಳನ್ನು ಸಂತೃಪ್ತರನ್ನಾಗಿಸಿ ಜಗತ್ ಕಲ್ಯಾಣಕ್ಕಾಗಿ ಪ್ರೇರೇಪಿಸುತ್ತದೆ.ಹೋಮ ಹವನಗಳಲ್ಲಿಯೂ ಕೂಡ ಸಾಕಷ್ಟು ಉತ್ತಮ ವಿಚಾರಗಳಿದ್ದು ಅವುಗಳನ್ನು ಎಲ್ಲರೂ ಅರಿಯಬೇಕಿದೆ ಎಂದರು. 
ಸತ್ಯ ಶುದ್ಧ ಕಾಯಕ, ಉತ್ತಮ ನಡತೆ, ಸಮಾಜದ ಅಭಿವೃದ್ಧಿಗೆ ಶ್ರಮಿಸುವುದು, ಬಡವರ ಸೇವೆ ಮಾಡುವುದು, ಪರಿಸರ ರಕ್ಷಿಸುವುದು, ಅನ್ಯ ಜೀವಿಗಳೆಲ್ಲರಲ್ಲೂ ದಯೆ, ಕರುಣೆ, ಪ್ರೀತಿ ಇಟ್ಟುಕೊಳ್ಳುವುದು ಎಲ್ಲವನ್ನು ಋಷಿಮುನಿಗಳು ನಮಗೆ ಬೋಽಸಿದ್ದಾರೆ. ಅದರಂತೆಯೇ ಹೋಮ ಹವನಗಳನ್ನು ನಮಗೆ ರೂಪಿಸಿಕೊಟ್ಟು  ಜಗತ್ತಿನ ಕಲ್ಯಾಣಕ್ಕೆ ಪ್ರೇರಣೆ ನೀಡಿದ್ದಾರೆ ಎಂದರು. 
ಲಘು ರುದ್ರಯಾಗ  ಸಿದ್ದಾಶ್ರಮದ ವ್ಯಾಸ ಮಂಟಪದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಲಘುರುದ್ರಯಾಗ ಹಮ್ಮಿಕೊಳ್ಳಲಾಗಿತ್ತು. 500 ಕ್ಕೂ ಅಽಕ ಮಹಿಳೆಯರು ಶಿವಲಿಂಗ ಸಿದ್ದಪಡಿಸಿಕೊಂಡು ಸಹಸ್ರ ಲಿಂಗ ಬಿಲ್ವಾರ್ಚನೆಯಲ್ಲಿ ಭಾಗಿಯಾಗಿದ್ದರು. ಉದಯ ಜೋಶಿ ನೇತೃತ್ವದ ತಂಡದಿಂದ ಯಜ್ಞ, ಹೋಮ, ಅರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು.  
ಸಿಂಧೋಗಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ, ದೇವರಹುಬ್ಬಳ್ಳಿ ಸಿದ್ದಾರೂಢ ಮಠದ ಬಸವರಾಜ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಜಾಣಮ್ಮ ತಾಯಿ, ಗಂಗಮ್ಮ ತಾಯಿ ಸೇರಿದಂತೆ ಸಾಧು ಸಂತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಸಹಸ್ರ ಲಿಂಗ ಬಿಲ್ವಾರ್ಚನೆಯಲ್ಲಿ ಭಾಗಿಯಾಗಿದ್ದರು. 
------------------------------------
ಅಧಿಕ ಮಾಸದ ಪೂಜೆಗೆ ಅತ್ಯಂತ ಪುಣ್ಯಫಲವಿದೆ. ಸಾಮಾನ್ಯ ವರ್ಷಗಳಲ್ಲಿ ಮಾಡುವ ಪೂಜೆಗಳಿಗಿಂತ ಈ ಮಾಸದ ಪೂಜೆ ಶ್ರೇಷ್ಠ. ಇಂದಿನ ಯುವ ಪೀಳಿಗೆಗೆ ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಲು ಯಜ್ಞ ಯಾಗಾದಿ ಮಾಡಬೇಕಿದೆ. 
-ಶ್ರೀ ಮುಕ್ತಾನಂದ ಸ್ವಾಮೀಜಿ, ಸಿಂಧೋಗಿ ಮಠ.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891
ನವೀನ ಹಳೆಯದು

نموذج الاتصال