ತಲೆತಗ್ಗಿಸಿ ನನ್ನನ್ನು ನೀ ನೋಡು, ತಲೆ ಎತ್ತಿ ನಿಲ್ಲುವಂತೆ ನಾನು ಮಾಡುವೆ, ಪುಸ್ತಕದ ಮಾತು ಅಕ್ಷರಶಃ ಸತ್ಯ ನಿಂಗಪ್ಪ ಮೊರಬದ,
ಹೆಬ್ಬಳ್ಳಿ, 13 :
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ
ಗ್ರಾಮದ ಗ್ರಾಮ ಪಂಚಾಯತಿ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಗೆ ಪ್ರಮುಖ ಐದು ಜನ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಹೆಬ್ಬಳ್ಳಿಯ ಗ್ರಾಮ ಪಂಚಾಯತಿ ಅದ್ಯಕ್ಷರಾದ ನಿಂಗಪ್ಪ ಮೊರಬದ ತಲೆ ತಗ್ಗಿಸಿ ಪುಸ್ತಕ ಓದಿ ಜ್ಞಾನವನ್ನು ಪಡೆದುಕೊಳ್ಳಿ, ಅಂದಾಗ ಮಾತ್ರ ನೀವು ತಲೆ ಎತ್ತಿ ನಡೆಯಬಹುದು,
ನಮ್ಮ ಊರಿನ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು,
ಪ್ರತಿ ವರ್ಷ ಆಗಸ್ಟ್ 12 ರಂದು ಗ್ರಂಥ ಪಾಲಕರ ದಿನಾಚರಣೆ ಮಾಡುತ್ತಾ ಬಂದಿದ್ದೇವೆ ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಾಲಯ ವಿಜ್ಞಾನ ಪಿತಾಮಹರಾದ ಡಾಕ್ಟರ್ ಎಸ್ ಆರ್ ರಂಗನಾಥನ್ ಅವರನ್ನು ನಾವು ಸ್ಮರಿಸಬೇಕು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯ ಸೇವೆಯಿಂದ ಪ್ರತಿಯೊಂದು ಜೀವಿಗೂ ಬದುಕಲು ನೀರು ಗಾಳಿ ಬೆಳಕು ಮತ್ತು ಆಹಾರ ಹೇಗೆ ಮುಖ್ಯವೋ ಹಾಗೆ ಮನುಷ್ಯತ್ವದಿಂದ ನಡೆದುಕೊಳಲು ಮಾನವೀಯ ಮೌಲ್ಯ ಬೇಳಸಬೇಕೆಂದರೆ ಮನುಷ್ಯನ ವ್ಯಕ್ತಿತ್ವವನ್ನೇ ಬದಲಾಯಿಸಬೇಕೆಂದರೆ ಮನುಷ್ಯನ ಸರ್ವತೋಮಖ ಬೆಳವಣಿಗೆ ಆಗಬೇಕು ಎಂದರು
ಮುಖ್ಯ ಅತಿಥಿಯಾಗಿದ್ದ ಗ್ರಾಮ ಪಂಚಾಯತಿ ಸದಸ್ಯ ವಿಠ್ಠಲ ಭೋವಿ ಮಾತನಾಡಿ ಪುಸ್ತಕ ಮೌಲ್ಯ ಮತ್ತು ಸಾರ್ಥಕ ಪಡೆಯಬೇಕಾದರೆ ಗ್ರಂಥಪಾಲಕನ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ ಈ ನಿಟ್ಟಿನಲ್ಲಿ ನಮ್ಮ ಗ್ರಾಮದ ಗ್ರಂಥಾಲಯ ಸುಸಜ್ಜಿತ ಕಟ್ಟಡದ ಜೊತೆಗೆ ಉತ್ತಮ ಮಾಹಿತಿಉಳ್ಳ ಪುಸ್ತಕಗಳ ಸಂಗ್ರಹ ಹೊಂದಿದೆ ಎಂದರು, ಸುರೇಶ ಬನ್ನಿಗಿಡದ ಮಾತನಾಡಿ ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ ಇತಿಹಾಸದ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ಪಂಡಿತರು ಸಂಶೋಧಕರು ಅನುಭವಿಗಳು ತಮ್ಮ ಶ್ರಮ ಸಮಯ ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ ಎಂದರು. ಮಂಜುನಾಥ ಭೀಮಕ್ಕನವರ ಮಾತನಾಡಿ ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ, ಇದರಲ್ಲಿ ಗ್ರಂಥಪಾಲಕರ ಶ್ರಮ ತುಂಬಾ ಇದೆ, ಓದುಗನಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿರುತ್ತಾನೆ ಎಂದರು. ರೇಖಾ ನಾಯ್ಕರ ಮಾತನಾಡಿ ಈ ಒಂದು ಮಹತ್ವದ ದಿನದಂದು ನಮ್ಮ ಊರಿನ ಮಕ್ಕಳಿಗೆ ಪ್ರಬಂಧ ಸ್ಪರ್ದೆ ಏರ್ಪಡಿಸಿ, ಮಕ್ಕಳಿಗೆ ಜ್ಞಾನದ ದಾಹ ಹೆಚ್ಚಾಗುವಂತೆ ಮಾಡಿದ ಗ್ರಂಥಾಲಯ ಪ್ರೇರಕ ಫಕ್ಕೀರಪ್ಪ ಬಸಪ್ಪಾ ಸುಂಕದ ಅವರ ಕಾರ್ಯವನ್ನು ಕೊಂಡಾಡಿದರು. ಬಾಳಪ್ಪ ಪ್ರಭಾಕರ ಬಸವರಾಜ ತಟ್ಟಿಮನಿ, ವಿಠ್ಠಲ ಇಂಗಳೆ ರೇಣುಕಾ ಅಸುಂಡಿ, ಹನುಮವ್ವ ಎಚ್ ಛಟ್ರಿ, ನೀಲವ್ವ ವಾಳದ ಮಂಜುಳಾ ಮಲ್ಲಾಡದ ಮುಂತಾದವರು ಇದ್ದರು ಶಿಕ್ಷಕ ಎಲ್ ಐ ಲಕ್ಕಮ್ಮನವರ ಸ್ವಾಗತಿಸಿ ನಿರೂಪಿಸಿದರು ಶಿವಾನಂದ ಹೂಗಾರ ವಂದಿಸಿದರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ:9945564891