ನೈಸರ್ಗಿಕ ವಿಪತ್ತ್ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ಒದಗಿಸಲು ಸಿದ್ಧತೆ

ನೈಸರ್ಗಿಕ ವಿಪತ್ತ್  ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ಒದಗಿಸಲು ಸಿದ್ಧತೆ
     ಧಾರವಾಡ 16 :ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಟ ಆರಂಭಿಕ ಸೇವಾ ಪ್ಯಾಕೇಜ ಒದಗಿಸಲು  ಫ್ಯಾಮಿಲ್ ಸ್ಕ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ( ಎ.ಪಿ.ಎ.ಐ.) ತಯಾರಿ ನಡೆಸಿದೆ ಎಂದು ಧಾರವಾಡ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸುಜಾತಾ ಎಸ್.ಅನಿಶೆಟ್ಟರ ಹೇಳಿದರು.

     ಪತ್ರಿಕಾ ಗೋಷ್ಠಿ ಮಾತನಾಡಿದ ಅವರು,       ಭಾರತದ ಪ್ರಮುಖ ರಾಷ್ಟ್ರೀಯ ಮಟ್ಟದ ಸ್ವಯಂಸೇವಾ ಸಂಸ್ಥೆ ಫ್ಯಾಮಿಲಿ ಸ್ಕ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ , ಇದು 40. ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ . ಇದು 1949 ಲಿಂದ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಸೇವೆಯನ್ನು ಒದಗಿಸುತ್ತಿದೆ . ಎಸ್.ಪಿ.ಎ.ಐ. ಕುಟುಂಬ ಯೋಜನೆ ಪ್ರಸವಪೂರ್ವ ಆರೈಕೆ , ಪ್ರಸವನಂತರ ಆರೈಕೆ , ಎಚ್.ಐ.ಐ ( ಎಡ್ , ಲೈಂಗಿಕ ರೋಗಗಳು , ಮಕ್ಕಳ ಆರೈಕೆ . ಕೌಶಲ್ಯ ಅಭಿವೃದ್ಧಿ ಮತ್ತು ಆಪ್ತಸಮಾಲೋಚನೆಯನ್ನು ಬಡವರು , ಕಳಂಕಿತರು ಮತ್ತು ದುರ್ಬಲ ವಗ೯ದವರಿಗೆ ಸೇವೆಗಳನ್ನು ಒದಗಿಸುತ್ತಿದೆ ಎಂದರು.
     ನೈಸರ್ಗಿಕ ವಿಪತ್ತು , ಹವಾಮಾನ ಬದಲಾವಣೆ , ಸಶಸ್ತ್ರ ಸಂಘರ್ಷ , ಸಾಂಕ್ರಾಮಿಕ ರೋಗಗಳು ಮತ್ತು ಸಂಕೀರ್ಣ ತುರ್ತುಸ್ಥಿತಿ ಮುಂತಾದ ಜಾಗತಿಕ ಮಾನವಿಯ ಬಿಕ್ಕಟ್ಟುಗಳಿಂದಾಗಿ ಪ್ರತಿ ದಿನ . 34000   ಜನರನ್ನು ಸ್ಥಳಾಂತರಿಸಲಾಗುತ್ತಿದೆ . ಹವಾಮಾನ ಇಕ್ಕಟ್ಟು ಈ ಸಮಯದ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ . ಇಂತಹ ಬಿಕ್ಕಟ್ಟಿನ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಮುದಾಯಗಳನ್ನು ಬೆಂಬಲಸಲು ಎಫ್.ಪಿ.ಎ.ಐ ಬದ್ಧವಾಗಿದೆ. ಬಿಕ್ಕಟ್ಟುಗಳಲ್ಲಿ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯ ಅಗತ್ಯತೆಯನ್ನು ಕಡೆಗಣಿಸುವಂತಿಲ್ಲ ಎಂದರು.

ತೊಂದರೆಗೆ ಒಳಗಾದವರ ಪೈಕಿ ನಾಲ್ಕರಲ್ಲಿ ಒಬ್ಬರು .15--49  ವಯಸ್ಸಿನ ಮಹಿಳೆಯರು ಮತ್ತು ಹೆಣ್ಣುಮಕ್ಕಳು , ಐದು ಮಹಿಳೆಯರಲ್ಲಿ ಒಬ್ಬರು ಗರ್ಭಿಣಿ ಮತ್ತು ಐದರಲ್ಲಿ ಒಬ್ಬರು ಹೆರಿಗೆಗಳಲ್ಲಿ ತೊಂದರೆಯನ್ನು ಅನುಭವಿಸುತ್ತಾರೆ . ಬಿಕ್ಕಟ್ಟಿ ನ ಪರಿಸ್ಥಿಗಳಲ್ಲಿ ಬಾಲ್ಯವಿವಾಹ , ಅತ್ಯಾಚಾರ , ಲೈಂಗಿಕ ಹಿಂಸೆ , ಅಸುರಕ್ಷಿತ ಗರ್ಭಪಾತಗಳು , ಎಚ್.ಐ.ವಿ ಸೇರಿದಂತೆ ಲೈಂಗಿಕ ರೋಗಗಳು ಸಂಬಂಧಿಸಿದಂತೆ ಹೆಚ್ಚಿನ ಅಪಾಯವಿದೆ . ಈ ಪರಿಸ್ಥಿತಿಯಲ್ಲಿ ಗೌಪ್ಯ ಮತ್ತು ಸುರಕ್ಷಿತ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು ಮತ್ತು ಹೆಚ್ಚಿನ ಸೇವೆಗಳಿಗೆ ಕಳಸುವ ತುರ್ತು ಅವಶ್ಯಕತೆಯಿದೆ . ರಕ್ಷಿಸಲು ಎಲ್ಲಾ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಅಗತ್ಯಗಳನ್ನು ಪರಿಹರಿಸಲು ಎಫ್.ಪಿ.ಎ.ಐ.ಯು. ಎಸ್.ಆರ್.ಎಚ್ . ಕನಿಷ್ಟ ಆರಂಭಿಕ ಸೇವೆ ಪ್ಯಾಕೇಜಮ್ಮ ಒದಗಿಸುವದಲ್ಲಿ ಮುಂಚುರಿಯಲ್ಲದೆ ಮತ್ತು ಮಾನವಿಯ ನಲೆಗಟ್ಟಿನಲ್ಲಿ ಅಗತ್ಯವಿರುವ ಜನರಿಗೆ ಜೀವ ಸರ್ಕಾರ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಯುವಜನರೊಂದಿಗೆ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

   ಎಫ್.ಪಿ.ಎ.ಐ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾ ಮತ್ತು ತಾಲ್ಲೂಕ ಸಮಿತಿಗಳೊಂದಿಗೆ ಚರ್ಚಿ , ಒಗ್ಗೂಡಿಸಿ ಎಸ್.ಆರ್.ಎಚ್ . ಕನಿಷ್ಟ ಆರಂಭಿಕ ಸೇವೆ ಪ್ಯಾಕೇಜ ಒದಗಿಸಲು ಸನ್ನದ್ಧಗೊಆಸುತ್ತಿದೆ . ಎಫ್.ಪಿ.ಎ.ಐ ಸ್ಥಆಯ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಜೀವ ಉಳಿಸುವದು ಹಾಗೂ ಅಕ್ಕಟ್ಟಿನ ನಂತರ ಸ್ಥಳೀಯರ ಪಾಲುದಾರ ಜೊತೆಗೆ ಮಾನವೀಯ - ಅಭಿವೃದ್ಧಿ ಸೇವೆಗಳನ್ನು ಒದಗಿಸಲು ಗುಲಿಯನ್ನು ಹೊಂದಲಾಗಿದೆ . ಆಸ್ಟ್ರೇಲಿಯಾವು ಮಾನವಿಯ ಬಿಕ್ಕಟ್ಟುಗಳಲ್ಲಿ ಅವಶ್ಯವಿರುವ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ನೀಡಲು 4 ಯೋಜನೆಗೆ ಹಣಕಾಸನ್ನು ನೀಡಿದೆ ಮತ್ತು ಐ.ಪಿ.ಪಿ.ಎಫ್ . ಮೂಲಕ ತುರ್ತುಸ್ಥಿಗಳಗೆ ಪ್ರತಿಕ್ರಿಯಿಸುವದನ್ನು ಮುಂದುವರಿಸಿದೆ . ಕರ್ನಾಟಕ 11 ಶಾಖೆಗಳಲ್ಲಿ ಎಫ್.ಪಿ.ಎ.ಐ , ಧಾರವಾಡ ಶಾಖೆಯನ್ನ ತುರ್ತು ಪ್ರತಿಕ್ರಿಯೆ ತರಬೇತಿ ನೀಡುವದು ಮತ್ತು ಅಕ್ಕಣ್ಣನ ಸಂಭವಿಸಿದರೆ 72 ಗಂಟೆಯ ಒಳಗೆ ಸ್ಪಂದಿಸುವ ಉದ್ದೇಶ ಹೊಂದಲಾಗಿದೆ ಎಂದರು. 

     ಪತ್ರಿಕಾಗೋಷ್ಠಿಯಲ್ಲಿ ಗೌರವ ಖಜಾಂಚಿ ಹೇಮಂತ ದೇಸಾಯಿ, ಪಿ.ಡಿ.ಗಾಯಕವಾಡ, ಎನ್.ಎಫ್.ಮಡಿವಾಳರ ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತುಗಾಗಿ ಸಂಪರ್ಕಿಸಿರಿ :9945564891
ನವೀನ ಹಳೆಯದು

نموذج الاتصال