ಪತ್ರಕತ೯ರಿಗೆ ಉಚಿತ ಅರೋಗ್ಯ ತಪಾಸಣೆ
ಧಾರವಾಡ:-- ಧಾರವಾಡ ಜರ್ನಲಿಸ್ಟ್ ಗಿಲ್ಡ್ ನಲ್ಲಿ ಮುದ್ರಣ ಮಾಧ್ಯಮದವರಿಗಾಗಿ ಉಚಿತ ಅರೋಗ್ಯ ತಪಾಸಣೆ ಎಪ೯ಡಿಸಲಾಗಿತ್ತು.
ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷರಾದ ಡಾ ಬಸವರಾಜ ಹೊಂಗಲ್ ತಪಾಸಣೆಗೆ ನಡೆಸಿಕೊಳ್ಳುವದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಎಸ್.ಡಿ.ಎಮ್. ನಾರಾಯಣ ಹೃದಯಾಲಯದ ತಜ್ಞ ವೈದ್ಯರು, ನುರಿತ ತಂತ್ರಜ್ಞರ ತಂಡ ಶಿಬಿರದಲ್ಲಿ ಸುಮಾರು ರೂ, 4500 ಮೊತ್ತದ ತಪಾಸಣೆಯನ್ನು ಉಚಿತವಾಗಿ ನಡೆಸಿದರು.ಡಾ ಜಯಪ್ರಕಾಶ ಎಚ್, ಮಾರುಕಟ್ಟೆ ಮೇಲ್ವಿಚಾರಕ ದುಂಡೇಶ ತಡಕೋಡ , ಶುಶ್ರಕಿಯರಾದ ಮೇಘಾ ಮಾನೆ, ಪೂಜಾ ಬಳ್ಳೂರ,ಶಿವಾನಂದ ಹಳ್ಳಳ್ಳಿ ಇದ್ದರು
ಶಿಬಿರದಲ್ಲಿ ಗಿಲ್ಡ್ ನ ಸದಸ್ಯರು, ಹಾಗೂ ಸದಸ್ಯರ ಕುಟುಂಬ ವರ್ಗ ಹಾಗೂ ಸಂಬಂಧಿಕರು ಆಗಮಿಸಿ ಪ್ರಯೋಜನವನ್ನು ಪಡೆದುಕೊಂಡರು.
ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿರಿ : 9945564891